ಕರ್ನಾಟಕದಲ್ಲಿ ಫ್ಲಿಪ್ ಕಾರ್ಟ್ ನಿಂದ 3 ಹೊಸ ಸರಬರಾಜು ಕೇಂದ್ರಗಳ ಸ್ಥಾಪನೆ

10,500 ಕ್ಕೂ ಹೆಚ್ಚು ಮಾರಾಟಗಾರರಿಗೆ ಬೆಂಬಲ| 14,000 ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ

Team Udayavani, Aug 27, 2021, 12:45 PM IST

ಕರ್ನಾಟಕದಲ್ಲಿ ಫ್ಲಿಪ್ ಕಾರ್ಟ್ ನಿಂದ 3 ಹೊಸ ಸರಬರಾಜು ಕೇಂದ್ರಗಳ ಸ್ಥಾಪನೆ

ಬೆಂಗಳೂರು: ಭಾರತದ ಪ್ರಮುಖ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮುಂಬರುವ ಹಬ್ಬದ ಅವಧಿಯಲ್ಲಿ ಇನ್ನೂ ಮೂರು ಕೇಂದ್ರಗಳನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ತನ್ನ ಸರಬರಾಜು ಜಾಲವನ್ನು ಇನ್ನಷ್ಟು ಬಲಗೊಳಿಸಿಕೊಳ್ಳಲಿದೆ. ಈ ಹೊಸ ಫುಲ್ ಫಿಲ್ಮೆಂಟ್ ಕೇಂದ್ರಗಳು ರಾಜ್ಯದಲ್ಲಿರುವ ಸಾವಿರಾರು ಮಾರಾಟಗಾರರಿಗೆ, ಎಂಎಸ್ಎಂಇಗಳಿಗೆ ಮತ್ತು ಸಣ್ಣ ರೈತರಿಗೆ ಬೆಂಬಲವನ್ನು ನೀಡಲಿವೆ. ಇದಲ್ಲದೇ, ಬೆಳೆಯುತ್ತಿರುವ ಗ್ರಾಹಕ ಬೇಡಿಕೆಯನ್ನು ಇದರ ಮೂಲಕ ಪೂರೈಸಿದಂತಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ತ್ವರಿತಗತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಹೊಸ ಮಾರಾಟ ಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಮತ್ತಷ್ಟು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ರಾಜ್ಯದ ಗ್ರಾಹಕರಿಗೆ ಯಾವುದೇ ತೊಡಕಿಲ್ಲದೇ ತ್ವರಿತವಾಗಿ ಉತ್ಪನ್ನಗಳನ್ನು ತಲುಪಿಸುವ ಫ್ಲಿಪ್ ಕಾರ್ಟ್ ನ ಬದ್ಧತೆಗೆ ಈ ಹೊಸ ಸೆಂಟರ್ ಗಳು ಪೂರಕವಾಗಿವೆ.

ಈ ಫುಲ್ ಫಿಲ್ಮೆಂಟ್ ಸೆಂಟರ್ ಗಳು ವಿಶೇಷ ಸೌಲಭ್ಯಗಳಾಗಿದ್ದು, ಅಲ್ಲಿ ಈ ಪ್ರದೇಶದಾದ್ಯಂತ ಮಾರಾಟಗಾರರಿಂದ ಉತ್ಪನ್ನಗಳನ್ನು ಸ್ವೀಕರಿಸಲಾಗುತ್ತದೆ, ಸಂಗ್ರಹಿಸಲಾಗುತ್ತದೆ ಮತ್ತು ಪ್ಯಾಕ್ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳ ನಂತರ ಗ್ರಾಹಕರಿಗೆ ತಲುಪಿಸಲು ವಿಂಗಡಣೆ ಕೇಂದ್ರಗಳು ಮತ್ತು ವಿತರಣಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಕೋಲಾರ, ಹುಬ್ಬಳ್ಳಿ ಮತ್ತು ಆನೇಕಲ್ ಗಳಲ್ಲಿ ಇರುವ ಈ ಕೇಂದ್ರಗಳು ದೊಡ್ಡ ಮಟ್ಟದ ಫರ್ನಿಚರ್, ಮೊಬೈಲ್ ಗಳು, ಜವಳಿ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರಾಟಗಾರರಿಗೆ ಅವಕಾಶವನ್ನು ಕಲ್ಪಿಸುತ್ತದೆ. ಈ ಮೂರೂ ಕೇಂದ್ರಗಳು ಸುಮಾರು 7 ಲಕ್ಷ ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, 15.6 ಲಕ್ಷ ಕ್ಯೂಬಿಕ್ ಅಡಿಯಷ್ಟು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿವೆ. 10,500ಕ್ಕೂ ಹೆಚ್ಚು ಮಾರಾಟಗಾರರಿಗೆ ನೆರವಾಗಲಿದೆ. ಈ ವಿಸ್ತರಣೆಯಿಂದ ಹೆಚ್ಚುವರಿಯಾಗಿ 14,000 ಕ್ಕೂ ಅಧಿಕ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸಲಿದೆ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಿದಂತಾಗುತ್ತದೆ. ಇದಲ್ಲದೇ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಅವಕಾಶವನ್ನು ಒದಗಿಸುತ್ತದೆ.

ಇದನ್ನೂ ಓದಿ:ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿದೆ ಉದ್ಯೋಗವಕಾಶ: ಹೀಗೆ ಅರ್ಜಿ ಸಲ್ಲಿಸಬೇಕು

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಧಾರವಾಡದಲ್ಲಿ ಈ ಕೇಂದ್ರಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಬೆಳಗಾವಿ ಲೋಕಸಭಾ ಸದಸ್ಯ ಮಂಗಳಾ ಸುರೇಶ್ ಅಂಗಡಿ ಮತ್ತು ಇನ್ನಿತರೆ ಅಧಿಕಾರಿಗಳು ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಫ್ಲಿಪ್ ಕಾರ್ಟ್ ರಾಜ್ಯದಲ್ಲಿ ತನ್ನ ಸರಬರಾಜು ಜಾಲ ಹೆಚ್ಚಳ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕವು ದೇಶದ ಸಿಲಿಕಾನ್ ಕಣಿವೆಯಾಗಿದ್ದು, ದೇಶದಲ್ಲಿ ಅತ್ಯಂತ ಯಶಸ್ವಿ ಸ್ಟಾರ್ಟಪ್ ಗಳನ್ನು ಹೊಂದಿರುವ ರಾಜ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದಲ್ಲಿ ಜಾರಿಯಲ್ಲಿರುವ ಸ್ನೇಹಿ ನೀತಿಗಳು, ಸೂಕ್ತ ಮೂಲಸೌಕರ್ಯಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಪ್ರತಿಭೆಗಳ ಲಭ್ಯತೆಯಾಗಿದೆ.  ಫ್ಲಿಪ್ ಕಾರ್ಟ್ ರಾಜ್ಯದಲ್ಲಿ ಗಮನಾರ್ಹವಾದ ಹೂಡಿಕೆಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಪೂರೈಕೆ ಜಾಲದ ಮೂಲಸೌಕರ್ಯ ವಿಸ್ತರಣೆಯು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ ಮತ್ತು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುತ್ತದೆ. ಈ ದಿಶೆಯಲ್ಲಿ ನಾವು ಫ್ಲಿಪ್ ಕಾರ್ಟ್ ಗೆ ಸಂಪೂರ್ಣ ಬೆಂಬಲದ ಭರವಸೆಯನ್ನು ನೀಡುತ್ತೇವೆ ಎಂದು ತಿಳಿಸಿದರು.

ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ ಆಫೀಸರ್ ರಜನೀಶ್ ಕುಮಾರ್ ಮಾತನಾಡಿ, ನಮ್ಮ ಲಕ್ಷಾಂತರ ಎಂಎಸ್ಎಂಇಗಳು ಮತ್ತು ಸಣ್ಣ ಮಾರಾಟಗಾರರಿಗೆ , ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸಲು ನಮ್ಮ ಎಲ್ಲಾ ಪಾಲುದಾರರಿಗೆ ಮೌಲ್ಯವನ್ನು ಸೃಷ್ಟಿಸುತ್ತದೆ. ಅದು ದೇಶಾದ್ಯಂತ ಸಾವಿರಾರು ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಸಂಬಂಧಿತ ಕೈಗಾರಿಕೆಗಳಲ್ಲಿ ಪರೋಕ್ಷವಾದ ಉದ್ಯೋಗಾವಕಾಶಗಳಿಗೆ ನೆರವಾಗುತ್ತದೆ. ಹೊಸ ಅತ್ಯಾಧುನಿಕ ಸೌಲಭ್ಯಗಳು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನೆರವಾಗುತ್ತದೆ ಮತ್ತು ಉದ್ಯಮದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸುತ್ತದೆ. ಇದರ ಮೂಲಕ ಮಾರಾಟಗಾರರು, ಎಂಎಸ್ಎಂಇಗಳು, ಸಣ್ಣ ರೈತರು ಮತ್ತು ಕುಶಲಕರ್ಮಿಗಳು ಸೇರಿದಂತೆ ಎಲ್ಲಾ ಪಾಲುದಾರರಿಗೆ ಇ-ಕಾಮರ್ಸ್ ಕಾರ್ಯಾಚರಣೆಗಳಿಗೆ ಕರ್ನಾಟಕವನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕವು ಇ-ಕಾಮರ್ಸ್ ಕ್ಷೇತ್ರದಲ್ಲಿ ಬಲಯುತವಾದ ಮಾರುಕಟ್ಟೆಯ ಕೇಂದ್ರವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು

ಟಾಪ್ ನ್ಯೂಸ್

ಬೊಮ್ಮಾಯಿ ಅವರೂ ರಾಜಕೀಯವಾಗಿ ವೀಕ್ ಆಗಿದ್ದಾರೆ:  ಡಿ.ಕೆ.ಶಿವಕುಮಾರ್

ಬೊಮ್ಮಾಯಿ ರಾಜಕೀಯವಾಗಿ ವೀಕ್ ಆಗಿದ್ದಾರೆ:  ಡಿ.ಕೆ.ಶಿವಕುಮಾರ್

UP: ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ಹಿಂದೂ ಧರ್ಮಕ್ಕೆ ಮತಾಂತರ;ಅಂತಿಮ ಇಚ್ಛೆ ಏನು?

UP: ಶಿಯಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ವಾಸೀಂ ಹಿಂದೂ ಧರ್ಮಕ್ಕೆ ಮತಾಂತರ;ಅಂತಿಮ ಇಚ್ಛೆ ಏನು?

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯಶ್ರೀ

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯ ಶ್ರೀ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

ಮತ್ತೆ ಹುಟ್ಟುಹಾಕಿದೆ…ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್

ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಇಳಿಕೆ; 17,115 ಅಂಕ ತಲುಪಿದೆ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಇಳಿಕೆ; 17,115 ಅಂಕ ತಲುಪಿದೆ ನಿಫ್ಟಿ

ಒಮಿಕ್ರಾನ್ ಸೋಂಕು ಪತ್ತೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಂಕ ಭಾರೀ ಕುಸಿತ

ಒಮಿಕ್ರಾನ್ ಸೋಂಕು ಪತ್ತೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಂಕ ಭಾರೀ ಕುಸಿತ

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

ಒಮಿಕ್ರಾನ್ ಭೀತಿ ನಡುವೆಯೇ 777 ಅಂಕ ಏರಿಕೆ ಕಂಡ ಮುಂಬಯಿ ಷೇರುಪೇಟೆ, ನಿಫ್ಟಿ 17,400

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 214 ಅಂಕ ಏರಿಕೆ; 17,220ರ ಗಡಿ ತಲುಪಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 214 ಅಂಕ ಏರಿಕೆ; 17,220ರ ಗಡಿ ತಲುಪಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 620 ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

MUST WATCH

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

ಹೊಸ ಸೇರ್ಪಡೆ

ಧರ್ಮಸ್ಥಳ ದೀಪೋತ್ಸವದಲ್ಲಿ ಮೆರುಗು ಹೆಚ್ಚಿಸಿದ್ಧ ‘ಲತಾ ‘ ಮತ್ತು ‘ಗಿರೀಶ ‘…

ಧರ್ಮಸ್ಥಳ ದೀಪೋತ್ಸವದಲ್ಲಿ ಮೆರುಗು ಹೆಚ್ಚಿಸಿದ್ಧ ‘ಲತಾ ‘ ಮತ್ತು ‘ಗಿರೀಶ ‘…

chikkamagalore  news

ಶುರುವಾಯ್ತು ಕೈ-ಕಮಲ ಜಿದ್ದಾ ಜಿದ್ದಿ

ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ತೆರವು

ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ತೆರವು

shivamogga news

ಶಿವಮೊಗ್ಗದಲ್ಲೆ ಇನ್ನುಉಣುಗು ಪರೀಕ್ಷೆ

ರೈತರಿಗೆ ಇ-ಪಾವತಿ ವ್ಯವಸ್ಥೆ ಪರಿಶೀಲನೆ

ರೈತರಿಗೆ ಇ-ಪಾವತಿ ವ್ಯವಸ್ಥೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.