ವರ್ಷಕ್ಕೊಮ್ಮೆ ಬರುವ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ದಿನಾಂಕ ಘೋಷಣೆ


Team Udayavani, Sep 21, 2021, 1:00 PM IST

flipkart big billion days

ಬೆಂಗಳೂರು: ಗ್ರಾಹಕರು ಬಹುದಿನಗಳಿಂದ ಎದುರು ನೋಡುತ್ತಿದ್ದ ಫ್ಲಿಪ್ ಕಾರ್ಟ್ 8 ನೇ ದಿ ಬಿಗ್ ಬಿಲಿಯನ್ ಡೇಸ್ (ಬಿಬಿಡಿ) ಅಕ್ಟೋಬರ್ 7 ರಿಂದ ಅ. 12 ರವರೆಗೆ ನಡೆಯಲಿದೆ.

6 ದಿನಗಳವರೆಗೆ ನಡೆಯಲಿರುವ ಈ ಬಿಗ್ ಬಿಲಿಯನ್ ಡೇಸ್ ನಲ್ಲಿ ಮಿಲಿಯನ್ ಗಟ್ಟಲೆ ಗ್ರಾಹಕರು, ಮಾರಾಟಗಾರರು, ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು, ಕಿರಾಣಗಳು, ಬ್ರ್ಯಾಂಡ್ ಗಳು ಮತ್ತು ಇ-ಕಾಮರ್ಸ್ ಪರಿಸರ ವ್ಯವಸ್ಥೆಯ ಪಾಲುದಾರರು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ನಾನ್-ಪ್ಲಸ್ ಗ್ರಾಹಕರು ಸಹ ಫ್ಲಿಪ್ ಕಾರ್ಟ್ ಆ್ಯಪ್ ಮೂಲಕ ಮುಂಚಿತವಾಗಿಯೇ ಉತ್ಪನ್ನಗಳನ್ನು ಬುಕ್ ಮಾಡುವುದರೊಂದಿಗೆ ಗಳಿಸಿದ 50 ಸೂಪರ್ ಕಾಯಿನ್ ಗಳನ್ನು ರಿಡೀಮ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.

* ಗ್ರಾಹಕರು ಫ್ಲಿಪ್ ಕಾರ್ಟ್ ಪೇ ಲೇಟರ್’ ಅಡಿಯಲ್ಲಿ ಯಾವುದೇ ಇಎಂಐ ವೆಚ್ಚವಿಲ್ಲದೇ 70,000 ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಫ್ಲಿಪ್ ಕಾರ್ಟ್ 18 ಪ್ರಮುಖ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ

* ಗ್ರಾಹಕರು ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಳಸಿ ಶೇ.10 ರಷ್ಟು ಇನ್ ಸ್ಟಂಟ್ ರಿಯಾಯ್ತಿಯನ್ನು ಪಡೆಯಬಹುದು ಮತ್ತು ಪೇಟಿಎಂ ಮೂಲಕ ವಾಲೆಟ್ ಮತ್ತು ಯುಪಿಐ ವ್ಯವಹಾರಗಳನ್ನು ನಡೆಸಿ ಕ್ಯಾಶ್ ಬ್ಯಾಕ್ ಪಡೆಯಬಹುದು.

* ಮೊಬೈಲ್ಸ್, ಟಿವಿಗಳು, ಅಪ್ಲಾಯನ್ಸಸ್, ಫ್ಯಾಶನ್, ಬ್ಯೂಟಿ, ಹೋಂ & ಕಿಚನ್, ಫರ್ನಿಚರ್, ಗ್ರಾಸರಿ ಮತ್ತು ಇನ್ನೂ ಹಲವು ವಿಭಾಗಗಳಲ್ಲಿನ ಉತ್ಪನ್ನಗಳ ಖರೀದಿಯಲ್ಲಿ ಹಿಂದೆಂದಿಗಿಂತಲೂ ಅಧಿಕ ಆಯ್ಕೆಗಳನ್ನು ಹೊಂದಬಹುದು.

* ಲಕ್ಷಾಂತರ ಮಾರಾಟಗಾರರು, ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲಕರ್ಮಿಗಳು ಫ್ಲಿಪ್ ಕಾರ್ಟ್ ಸಮರ್ಥ್ ಮೂಲಕ ವಿಶೇಷವಾದ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ

* ಅಮಿತಾಭ್ ಬಚ್ಚನ್, ಅಲಿಯಾ ಭಟ್, ರಣಬೀರ್ ಕಪೂರ್, ವಿರಾಟ್ ಕೊಹ್ಲಿ, ಮಹೇಶ್ ಬಾಬು ಮತ್ತು ಸುದೀಪ್ ಅವರಂತಹ ನಟರು ಮತ್ತು ಕ್ರೀಡಾಪಟುಗಳು ಬಿಬಿಡಿ ಪ್ರೊಮೋಟ್ ಮಾಡಲಿದ್ದಾರೆ.

ಇದನ್ನೂ ಓದಿ:ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಾಧ್ಯತೆ

ಈ ವರ್ಷದ ಬಿಗ್ ಬಿಲಿಯನ್ ಡೇಸ್ ಸ್ವದೇಶಿ ಬ್ರ್ಯಾಂಡ್ ಗಳು ಮತ್ತು ಮಾರಾಟಗಾರರಿಗೆ ಹಲವಾರು ಹೊಸ ಅವಕಾಶಗಳನ್ನು ಕಲ್ಪಿಸುತ್ತಿದೆ. ಇದರ ಮೂಲಕ 2 ಮತ್ತು ನಂತರದ ಶ್ರೇಣಿಯ ನಗರಗಳ ಮಾರಾಟಗಾರರು ಮತ್ತು ಬ್ರ್ಯಾಂಡ್ ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರೊಂದಿಗೆ ಗ್ರಾಹಕರೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಬಹುದಾಗಿದೆ.

ಬಿಗ್ ಬಿಲಿಯನ್ ಡೇಸ್ 2021 ಅನ್ನು ಪ್ರಕಟಿಸಿ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ  “ಪ್ರತಿ ವರ್ಷ ದಿ ಬಿಗ್ ಬಿಲಿಯನ್ ಡೇಸ್ ಮೂಲಕ ಭಾರತದ ಹಬ್ಬದ ಸೀಸನ್ ಆರಂಭವಾಗುತ್ತದೆ ಮತ್ತು ಪ್ರತಿ ಸಂದರ್ಭದಲ್ಲಿಯೂ ನಾವು ನಮ್ಮ ಎಲ್ಲಾ ಗ್ರಾಹಕರಿಗೆ, ಮಾರಾಟಗಾರರು ಮತ್ತು ಬ್ರ್ಯಾಂಡ್ ಪಾಲುದಾರರಿಗೆ ಸಾಧ್ಯವಿರುವಷ್ಟು ಅತ್ಯುತ್ತಮ ಅನುಭವವನ್ನು ನೀಡುತ್ತಾ ಬಂದಿದ್ದೇವೆ. ಕಳೆದ ಒಂದು ವರ್ಷದಲ್ಲಿ, ನಮ್ಮ ಪರಿಸರ ವ್ಯವಸ್ಥೆಯ ಪಾಲುದಾರರ ಸಹಯೋಗದೊಂದಿಗೆ ಈ ಸವಾಲಿನ ಸಂದರ್ಭದಲ್ಲಿ ಗ್ರಾಹಕರ ಭಾವನೆಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಭಾರತದ ಆರ್ಥಿಕ ಬೆಳವಣಿಗೆಯನ್ನು ಪುನಶ್ಚೇತನಗೊಳಿಸುವ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಗ್ರಾಹಕರಿಗೆ ಮೌಲ್ಯವನ್ನು ಒದಗಿಸುವ ಫ್ಲಿಪ್ ಕಾರ್ಟ್ ನ ಬದ್ಧತೆ, ಎಂಎಸ್ಎಂಇಗಳು, ಮಾರಾಟಗಾರರು ಮತ್ತು ನಮ್ಮ ಮಿಲಿಯನ್ ಗಟ್ಟಲೆ ಕಿರಾಣ ಪಾಲುದಾರರ ಬೆಳವಣಿಗೆಗೆ ಅವಕಾಶಗಳು ಮತ್ತು ಇ-ಕಾಮರ್ಸ್ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದೇವೆ. ದೇಶವು ಕಳೆದ ಒಂದೂವರೆ ವರ್ಷದಲ್ಲಿ ಇ-ಕಾಮರ್ಸ್ ಅನ್ನು ಹೇಗೆ ಸ್ವೀಕರಿಸಿದೆ ಎಂಬುದನ್ನು ಇದು ತೋರಿಸುತ್ತದೆ. ಬಿಗ್ ಬಿಲಿಯನ್ ಡೇಸ್ ಮೂಲಕ ನಾವು ಸಮುದಾಯವನ್ನು ಮತ್ತೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದು ಮತ್ತು ದೇಶಾದ್ಯಂತ ಹಬ್ಬದ ಆಚರಣೆಯನ್ನು ಉತ್ತೇಜಿಸುವಂತಹ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಡಿಸೆಂಬರ್ 2021 ರ ವೇಳೆಗೆ ತನ್ನ ಪ್ಲಾಟ್ ಫಾರ್ಮ್ ನಲ್ಲಿ 4.2 ಲಕ್ಷ ಮಾರಾಟಗಾರರನ್ನು ಹೊಂದುವ ಗುರಿಯನ್ನು ಫ್ಲಿಪ್ ಕಾರ್ಟ್ ಹಾಕಿಕೊಂಡಿದೆ ಮತ್ತು ಈ ನಿಟ್ಟಿನಲ್ಲಿ ತನ್ನ ಮಾರಾಟಗಾರರ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಪ್ರಸ್ತುತ ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ 3.75 ಲಕ್ಷಕ್ಕೂ ಅಧಿಕ ಮಾರಾಟಗಾರರಿಗೆ ಡಿಜಿಟಲ್ ಕಾಮರ್ಸ್ ಬೆಂಬಲವನ್ನು ನೀಡುತ್ತಿದೆ. ಈಗಾಗಲೇ ಫ್ಲಿಪ್ ಕಾರ್ಟ್ ಕಳೆದ ಕೆಲವು ತಿಂಗಳುಗಳಿಂದ 75,000 ಹೊಸ ಮಾರಾಟಗಾರರನ್ನು ಎಂಎಸ್ಎಂಇಗಳಾಗಿ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಸೇರಿಸಿಕೊಂಡಿದೆ. ಸೂರತ್ ಮತ್ತಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ಪ್ಲಾಟ್ ಫಾರ್ಮ್ ಜನರಲ್ ಮರ್ಚಂಡೈಸ್, ಹೋಂ, ಕಿಚನ್ ಮತ್ತು ಪರ್ಸನಲ್ ಕೇರ್ ನಂತಹ ವಿಭಾಗಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

ಈ ವರ್ಷ, ಫ್ಲಿಪ್‌ಕಾರ್ಟ್ ಭಾರತದ ಅಚ್ಚುಮೆಚ್ಚಿನ ಸೆಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣಬೀರ್ ಕಪೂರ್, ಕಿಚ್ಚ ಸುದೀಪ್, ಮತ್ತು ಮಹೇಶ್ ಬಾಬು ಮುಂತಾದವರ ಜತೆ ಸಹಯೋಗ ಹೊಂದಿದ್ದು, ‘ಬಿಗ್ ಬಿಲಿಯನ್ ಡೇಸ್’ ಆಚರಿಸುವಾಗ ಇವರೆಲ್ಲರೂ ಸೃಜನಾತ್ಮಕ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

bike insurance

ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

goa

ಗೋವಾ ವಿದೇಶಿ ಪ್ರವಾಸಿಗರಿಗೆ RTPCR ಕಡ್ಡಾಯ: ಖಾಸಗಿ ಸಂಸ್ಥೆಗೆ ಗುತ್ತಿಗೆ

21ananya

ಅನನ್ಯ-ಆರ್ಯನ್ ವಾಟ್ಸ್ಯಾಪ್ ಚಾಟ್: ಡ್ರಗ್ಸ್ ಅಲ್ಲಂತೆ ಸಿಗರೇಟ್ ಅಂತೆ!?

1-111

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆShare

ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 456 ಅಂಕ ಕುಸಿತ, 18,266 ಗಡಿ ತಲುಪಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 456 ಅಂಕ ಕುಸಿತ, 18,266 ಗಡಿ ತಲುಪಿದ ನಿಫ್ಟಿ

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಮುಂದುವರಿದ ನಾಗಾಲೋಟ: 62,000 ಅಂಕಗಳ ಗಡಿ ದಾಟಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್

ಮುಂದುವರಿದ ನಾಗಾಲೋಟ: 62,000 ಅಂಕಗಳ ಗಡಿ ದಾಟಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್

MUST WATCH

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

ಹೊಸ ಸೇರ್ಪಡೆ

bike insurance

ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

goa

ಗೋವಾ ವಿದೇಶಿ ಪ್ರವಾಸಿಗರಿಗೆ RTPCR ಕಡ್ಡಾಯ: ಖಾಸಗಿ ಸಂಸ್ಥೆಗೆ ಗುತ್ತಿಗೆ

21ananya

ಅನನ್ಯ-ಆರ್ಯನ್ ವಾಟ್ಸ್ಯಾಪ್ ಚಾಟ್: ಡ್ರಗ್ಸ್ ಅಲ್ಲಂತೆ ಸಿಗರೇಟ್ ಅಂತೆ!?

1-111

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.