10 ಗ್ರಾಂ ಚಿನ್ನಕ್ಕೆ 36 ಸಾವಿರ
Team Udayavani, Jul 23, 2019, 10:59 AM IST
ನವದೆಹಲಿ: ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸೋಮವಾರವೂ ನವದೆಹಲಿಯ ಧಾರಣೆಯಲ್ಲಿ 10 ಗ್ರಾಂಗೆ 100 ರೂ. ಏರಿಕೆಯಾಗಿ 35,970 ರೂ.ಗೆ ತಲುಪಿದೆ. ಇದು ಈವರೆಗಿನ ಅತಿ ಗರಿಷ್ಠ ಬೆಲೆಯಾಗಿದೆ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದ್ದು, ಕಿಲೋಗೆ 41,960 ರೂ. ಆಗಿದೆ. ಷೇರು ಮಾರುಕಟ್ಟೆ ಕುಸಿತವಾಗಿದ್ದರಿಂದಾಗಿ, ಸುರಕ್ಷಿತ ಹೂಡಿಕೆ ವಿಧಾನವಾದ ಚಿನ್ನದ ಮೇಲೆ ಜನರು ಹೂಡಿಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಸ್ಥಳೀಯ ಆಭರಣಕಾರರಿಂದಲೂ ಭಾರಿ ಬೇಡಿಕೆ ವ್ಯಕ್ತವಾಗಿದೆ.