ಎಲ್ಐಸಿ ಐಪಿಒಗೆ ಭರ್ಜರಿ ಸ್ಪಂದನೆ
Team Udayavani, May 5, 2022, 6:30 AM IST
ಹೊಸದಿಲ್ಲಿ: ಭಾರೀ ನಿರೀಕ್ಷೆ ಹುಟ್ಟಿಸಿರುವ ಸಾರ್ವಜನಿಕ ವಲಯದ ಭಾರತೀಯ ಜೀವ ವಿಮಾ ನಿಗಮದ ಐಪಿಒಗೆ ಮೊದಲ ದಿನವೇ ಭಾರೀ ಯಶಸ್ಸು ಸಿಕ್ಕಿದ್ದು, ಒಟ್ಟಾರೆ ಶೇ. 66ರಷ್ಟು ಸಬ್ಸ್ಕ್ರಿಪ್ಶನ್ ಆಗಿದೆ.
ಪಾಲಿಸಿದಾರರ ವಿಭಾಗದಲ್ಲಿ 1.9 ಪಟ್ಟು ಹೆಚ್ಚು ಸ್ಪಂದನೆ ಸಿಕ್ಕಿದೆ. ಉದ್ಯೋಗಿಗಳ ವಿಭಾಗದಲ್ಲಿ ಸಂಪೂರ್ಣ ಸಬ್ಸ್ಕ್ರಿಪ್ಶನ್ ಆಗಿದೆ ಎಂದು ಬಿಎಸ್ಇನಲ್ಲಿ ಸಿಕ್ಕ ಮಾಹಿತಿ ಹೇಳಿದೆ.
ಈಗ ರಿಟೇಲ್ ಹೂಡಿಕೆದಾರರು, ಅರ್ಹ ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಅವಕಾಶ ಮಾಡಿಕೊಡಲಾಗಿದೆ. ರಿಟೇಲ್ ಹೂಡಿಕೆದಾರರೇ ಶೇ.50ರಷ್ಟು ಷೇರು ಖರೀದಿಸಿದ್ದಾರೆ.
ಸರಕಾರ ಈಗ ಒಟ್ಟಾರೆ 22.13 ಕೋಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಮೇ 17ರಂದು ಬಾಂಬೆ ಷೇರುಪೇಟೆಯಲ್ಲಿ ಲಿಸ್ಟ್ ಆಗಲಿದ್ದು, ಎಲ್ಲ ಷೇರುದಾರರಿಗೂ ಅಂದಿನಿಂದಲೇ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್