ಸಿಹಿ ಸುದ್ದಿ:2020ರ ಆಗಸ್ಟ್ ನಿಂದ ನವೆಂಬರ್ ವರೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ?
ಚಿನ್ನದ ಬೆಲೆ ದಾಖಲೆ ಎಂಬಂತೆ ಹತ್ತು ಗ್ರಾಂಗೆ 57,008 ರೂಪಾಯಿಗೆ ಏರಿಕೆಯಾಗಿತ್ತು.
Team Udayavani, Nov 26, 2020, 6:38 PM IST
ನವದೆಹಲಿ:ಲಾಕ್ ಡೌನ್ ನಂತರ ಹಳದಿ ಲೋಹದ ಬೆಲೆ ಗಗನಕ್ಕೇರಿತ್ತು. ಆದರೆ ಇದೀಗ ಚಿನ್ನ ಮತ್ತು ಬೆಳ್ಳಿ ಖರೀದಿಸುವವರಿಗೆ ಇದೊಂದು ಖುಷಿಯ ಸಂಗತಿ. ಗುರುವಾರ(ನವೆಂಬರ್ 26, 2020) ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಆದರೆ ಆಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಈಗ ಸುಮಾರು 8 ಸಾವಿರ ರೂಪಾಯಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
2020ರ ಆಗಸ್ಟ್ 7ರಂದು ಚಿನ್ನದ ಬೆಲೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಾಖಲೆ ಎಂಬಂತೆ ಹತ್ತು ಗ್ರಾಂಗೆ 57,008 ರೂಪಾಯಿಗೆ ಏರಿಕೆಯಾಗಿತ್ತು. ಬೆಳ್ಳಿಯ ಬೆಲೆಯೂ ದುಬಾರಿಯಾಗಿತ್ತು. ಒಂದು ಕೆಜಿ ಬೆಳ್ಳಿಗೆ 77,840 ರೂಪಾಯಿಗೆ ಏರಿಕೆಯಾಗಿತ್ತು.
ಆ ಬಳಿಕ ಸ್ವಲ್ಪ ಇಳಿಕೆಯಾಗುತ್ತ ಬಂದಿದ್ದು, ಗುರುವಾರ ಚಿನ್ನದ ಬೆಲೆಯಲ್ಲಿ 17 ರೂಪಾಯಿ ಏರಿಕೆಯಾಗಿತ್ತು. ದೆಹಲಿಯಲ್ಲಿ ಹತ್ತು ಗ್ರಾಂಗೆ 48,257 ರೂಪಾಯಿ. ಬುಧವಾರ(ನವೆಂಬರ್ 25, 2020) ಹತ್ತು ಗ್ರಾಂ ಚಿನ್ನದ ಬೆಲೆ 48,240 ರೂಪಾಯಿ ಆಗಿತ್ತು.
ಇದನ್ನೂ ಓದಿ:ಒಸ್ಮಾನಿಯಾ ವಿವಿ ಅತಿಕ್ರಮ ಪ್ರವೇಶ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್
ಬೆಳ್ಳಿಯ ಬೆಲೆಯಲ್ಲಿ 28 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ಗುರುವಾರ(ನವೆಂಬರ್ 26, 2020) 59,513 ರೂಪಾಯಿ, ಬುಧವಾರ(ನವೆಂಬರ್ 25, 2020) ಒಂದು ಕೆಜಿ ಬೆಳ್ಳಿ ಬೆಲೆ 59,485 ರೂಪಾಯಿ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಧನ, ಅನಿಲ ಷೇರುಗಳಿಗೆ ನಷ್ಟ; ಸೆನ್ಸೆಕ್ಸ್ 210 ಅಂಕ ಕುಸಿತ, ನಿಫ್ಟಿ 62 ಅಂಕ ಇಳಿಕೆ
ಎಲ್ಲೆಲ್ಲಿ ಎಷ್ಟು ಹೆಚ್ಚಳ? ಬೆಂಗಳೂರು, ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗರಿಷ್ಠ ಏರಿಕೆ
ಲಾಕ್ಡೌನ್ ವೇಳೆ ಅಂಬಾನಿ ಆದಾಯ ಗಂಟೆಗೆ 90 ಕೋಟಿ!
ಸೆನ್ಸೆಕ್ಸ್ 531 ಅಂಕ ಕುಸಿತ, ನಿಫ್ಟಿ 133 ಅಂಕ ಇಳಿಕೆ ; IT ಕ್ಷೇತ್ರದ ಷೇರುಗಳಿಗೆ ನಷ್ಟ
ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ