215 ಉತ್ಪನ್ನಗಳ ತೆರಿಗೆ ಬದಲಿಲ್ಲ? ಚಂಡೀಗಢದಲ್ಲಿ ನಡೆವ ಸಭೆಯಲ್ಲಿ ಚರ್ಚೆ ಸಾಧ್ಯತೆ
ವಿತ್ತ ಸಚಿವೆ ನಿರ್ಮಲಾ ನೇತೃತ್ವ ನಾಳೆ, ನಾಡಿದ್ದು ಜಿಎಸ್‌ಟಿ ಸಭೆ
Team Udayavani, Jun 27, 2022, 6:50 AM IST
ಹೊಸದಿಲ್ಲಿ: ಬರೋಬ್ಬರಿ ಆರು ತಿಂಗಳ ಬಳಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆ ಮಂಗಳವಾರ ಮತ್ತು ಬುಧವಾರ ಚಂಡೀಗಢದಲ್ಲಿ ನಡೆಯಲಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಲಿರುವ 47ನೇ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಹಲವು ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣ ಬದಲಿಸುವ ಸಾಧ್ಯತೆಗಳಿವೆ.
215 ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಬದಲಾವಣೆ ಬೇಡವೆಂದು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಅನೇಕ ಉತ್ಪನ್ನಗಳ ಮೇಲಿನ ತೆರಿಗೆ ಇಳಿಸಲು ಹಾಗೂ ಟೆಟ್ರಾ ಪ್ಯಾಕ್‌ಗಳಂತಹ ಹಲವು ಉತ್ಪನ್ನಗಳ ತೆರಿಗೆಯನ್ನು ಏರಿಸುವುದಕ್ಕೆ ಶಿಫಾರಸು ಮಾಡಲಾಗಿದೆ.
ಮಾಸಾಂತ್ಯಕ್ಕೆ ರಾಜ್ಯಗಳಿಗೆ ನೀಡಲಾಗುವ ಜಿಎಸ್‌ಟಿ ಪರಿಹಾರ ನೀಡಿಕೆ ವ್ಯವಸ್ಥೆ ಮುಕ್ತಾಯವಾಗಲಿದೆ. ಹೀಗಾಗಿ ಈ ಬಗ್ಗೆ ಸಭೆಯಲ್ಲಿ ಬಿರುಸಿನ ಚರ್ಚೆಯಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.
ಶೇ.28ರಷ್ಟು ತೆರಿಗೆ: ಹಣಕಾಸು ಸಚಿವರ ಸಮಿತಿ ಶಿಫಾರಸು ಮಾಡಿರುವಂತೆ ಆನ್‌ಲೈನ್ ಗೇಮ್‌ಗಳು, ಕ್ಯಾಸಿನೋಗಳಿಗೆ ಶೇ.28ರಷ್ಟು ತೆರಿಗೆ ವಿಧಿಸುವ ಬಗ್ಗೆಯೂ ಪರಾಮರ್ಶೆ ನಡೆಸಲಾಗುತ್ತದೆ. ಮೇಘಾಲಯ ಸಿಎಂ ಕೊನಾರ್ಡ್ ಸಂಗ್ಮಾ ನೇತೃತ್ವದ ಸಮಿತಿ ಈ ಬಗ್ಗೆ ಅಧ್ಯಯನ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 515 ಅಂಕ ಜಿಗಿತ; 59,000 ಗಡಿ ದಾಟಿದ ಸೂಚ್ಯಂಕ
ಮಾರಾಟದಲ್ಲಿ ಕುಸಿತ: ಬೃಹತ್ ಇ-ವಾಣಿಜ್ಯ ಕಂಪನಿ ಅಲಿಬಾಬಾದಿಂದ 10 ಸಾವಿರ ಉದ್ಯೋಗಿಗಳ ವಜಾ
ಸಾಲದ ಆ್ಯಪ್ ಗಳಿಗೆ ಲಗಾಮು; ಆರ್ಬಿಐ ಮಾರ್ಗಸೂಚಿ ಬಿಡುಗಡೆ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 465 ಅಂಕ ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ
ಕೃಷ್ಯುತ್ಪನ್ನ, ಸಂಸ್ಕರಿತ ಆಹಾರ ವಸ್ತು ರಫ್ತಿನಲ್ಲಿ ಸಾಧನೆ