GST ದರ ನಿಗದಿ; ಶಿಕ್ಷಣ, ಆರೋಗ್ಯಕ್ಕೆ ವಿನಾಯ್ತಿ; ಯಾವುದು ದುಬಾರಿ?

Team Udayavani, May 19, 2017, 6:18 PM IST

ನವದೆಹಲಿ:ದೇಶವನ್ನು ಏಕರೂಪದ ಮಾರುಕಟ್ಟೆಯನ್ನಾಗಿಸುವ, ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ ಬಣ್ಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಎಸ್ ಟಿ) ಪ್ರಕ್ರಿಯೆ ಕೊನೆಗೂ ಅಂತಿಮ ಹಂತದ ತಲುಪಿದ್ದು, ಶುಕ್ರವಾರ ನಡೆದ ಜಿಎಸ್ ಟಿ ಸಭೆಯಲ್ಲಿ ತೆರಿಗೆ ದರವನ್ನು ಅಂತಿಮಗೊಳಿಸಲಾಗಿದ್ದು, ಜಿಎಸ್ ಟಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ವಿನಾಯ್ತಿ ನೀಡಲಾಗಿದೆ.

ಶ್ರೀನಗರದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ 2ದಿನ ನಡೆದ ಜಿಎಸ್ ಟಿ ಸಭೆಯಲ್ಲಿ ಜುಲೈ 1ರಿಂದ ದೇಶಾದ್ಯಂತ ಜಾರಿಯಾಗಲಿರುವ ಜಿಎಸ್ ಟಿ ಹಿನ್ನೆಲೆಯಲ್ಲಿ ಟೆಲಿಕಾಂ, ಇನ್ಸೂರೆನ್ಸ್, ಹೋಟೆಲ್ಸ್ ಹಾಗೂ ರೆಸ್ಟೋರೆಂಟ್ ಸೇರಿದಂತೆ ನಾಲ್ಕು ಸೇವಾ ತೆರಿಗೆಯನ್ನು ಅಂತಿಮಗೊಳಿಸಿದೆ.

50 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ರೆಸ್ಟೋರೆಂಟ್ ಗಳು ಜಿಎಸ್ ಟಿ ಅಡಿಯಲ್ಲಿ ಶೇ.5ರಷ್ಟಿ ತೆರಿಗೆ ಪಾವತಿಸಬೇಕು, ಎಸಿ ರಹಿತ ರೆಸ್ಟೋರೆಂಟ್ ಗಳು ಶೇ.12ರಷ್ಟು ತೆರಿಗೆ ಬೀಳಲಿದೆ. ಎಸಿ ಬಾರ್ ಅಂಡ್ ರೆಸ್ಟೋರೆಂಟ್ ಶೇ.18ರಷ್ಟು ತೆರಿಗೆ, ಪಂಚತಾರಾ ಹೋಟೆಲ್ ಗಳು ಶೇ.28ರಷ್ಟು ತೆರಿಗೆ ನಿಗದಿಪಡಿಸಿದೆ.

ಓಲಾ, ಉಬೇರ್ ಕ್ಯಾಬ್ ಗಳ ಸೇವೆಗೆ ಶೇ.5ರಷ್ಟು ತೆರಿಗೆ ವಿಧಿಸಿದೆ. ಸೆಲ್ಯೂನ್, ದೂರವಾಣಿ ಬಿಲ್ ಗಳಿಗೂ ಹೊಸ ತೆರಿಗೆ ದರದ ಬಿಸಿ ತಟ್ಟಲಿದೆ. ರೈಲು, ವಿಮಾನ ಹಾಗೂ ಸಾರಿಗೆ ಶೇ.5ರಷ್ಟು ತೆರಿಗೆ ಹೊರೆ ಕಡಿಮೆಯಾಗಲಿದೆ. ಅಲ್ಲದೇ ಜೂನ್ 3ರಂದು ನಡೆಯಲಿರುವ ಜಿಎಸ್ ಟಿ ಸಭೆಯಲ್ಲಿ ಚಿನ್ನದ ಮೇಲಿನ ತೆರಿಗೆ ದರವನ್ನು ನಿಗದಿಪಡಿಸುವುದಾಗಿ ಜೇಟ್ಲಿ ಮಾಹಿತಿ ನೀಡಿದ್ದಾರೆ.

ಹಾಲು, ಹಣ್ಣು, ತರಕಾರಿಗಳಿಗೆ ತೆರಿಗೆ ವಿನಾಯ್ತಿ. ಸಕ್ಕರೆ, ಟೀ, ಕಾಫಿ ಮತ್ತು ಖಾದ್ಯ ಎಣ್ಣೆಗೆ ಶೇ.5ರಷ್ಟು ಕಡಿಮೆ ದರದ ತೆರಿಗೆ ವಿಧಿಸಲಾಗಿದೆ. ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ ಇಂಡಿಯಾ ಹಾಗೂ ಡಾಬರ್ ಇಂಡಿಯಾ ಕಂಪನಿಗಳು ಕೂಡಾ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಶೇವಿಂಗ್ ಮತ್ತು ಕೇಶ ತೈಲ, ಸೋಪು, ಟೂತ್ ಪೇಸ್ಟ್ ಗೆ ಶೇ.28ರಿಂದ ಶೇ.18ರಷ್ಟು ತೆರಿಗೆ ಸಾಧ್ಯತೆ ಇದೆ. 

ಗುರುವಾರ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ 1,211 ವಸ್ತುಗಳ ಪೈಕಿ 1205ಕ್ಕೆ ತೆರಿಗೆ ದರವನ್ನು ನಿಗದಿಪಡಿಸಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

  • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...