ಹೆಲ್ತ್ ಪಾಲಿಸಿ: ಹಿರಿಯ ನಾಗರಿಕರ ಆರೋಗ್ಯ ವಿಮೆ

Team Udayavani, Aug 5, 2019, 5:41 AM IST

ಹಣದುಬ್ಬರದ ಈ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಸೀಮಿತ ಆದಾಯದ ಹಿರಿಯ ನಾಗರಿಕರಿಗೆ ಇದೊಂದು ಭರಿಸಲಾರದ ಸಂಕಟ. ಅದರಲ್ಲೂ hand to mouth ಸ್ಥಿತಿಯಲ್ಲಿ ಜೀವನದ ರಥ ಸಾಗಿಸುವ ಹಿರಿಯ ನಾಗರಿಕರಿಗೆ ಆರೋಗ್ಯ ಚಿಕಿತ್ಸೆಯ ವೆಚ್ಚ ಕಂಗೆಡಿಸುತ್ತದೆ. ಹಿರಿಯ ನಾಗರಿಕರು ಸಾಮಾನ್ಯವಾಗಿ ತಮಗೆ ದೊರಕುವ ಪಿಂಚಣಿ, ಕಷ್ಟದಲ್ಲಿ ಉಳಿಸಿದ ಠೇವಣಿ ಮೇಲಿನ ಬಡ್ಡಿಯಲ್ಲಿ ಬದುಕು ಸಾಗಿಸುವುದರಿಂದ ಮತ್ತು ಬೇರೆ ಆದಾಯದ ಮೂಲ ಇಲ್ಲದಿರುವುದರಿಂದ ಅನಿರೀಕ್ಷಿತ ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ಅಸಹಾಯಕರಾಗುತ್ತಾರೆ. ಅವರ ಈ ಸ್ಥಿತಿಯನ್ನು ಮನಗಂಡು ಅವರಿಗಾಗಿಯೇ ಆರೋಗ್ಯ ವಿಮಾ ಕಂಪೆನಿಗಳು ವಿಶೇಷ ಪಾಲಿಸಿಗಳನ್ನು ರೂಪಿಸಿವೆ. ಇವು ಜನಸಾಮಾನ್ಯರಿಗೆ ನೀಡುವ ಆರೋಗ್ಯ ವಿಮಾ ಪಾಲಿಸಿಗಳಿಗಿಂತ ಸ್ವಲ್ಪ ಭಿನ್ನವಾಗಿವೆ.

ತೆರಿಗೆ ವಿನಾಯಿತಿಗಳು
ಹಿರಿಯ ನಾಗರಿಕರು ಆರೋಗ್ಯ ವಿಮಾ ಪಾಲಿಸಿಗೆ ನೀಡಿದ 50,000 ರೂ. ಪ್ರೀಮಿಯಂ ವರೆಗೆ ಆದಾಯಕರ ವಿನಾಯಿತಿ ಪಡೆಯಬಹುದು. ವಿಮಾ ಪಾಲಿಸಿ ಇಲ್ಲದಿದ್ದರೆ 50,000 ರೂ. ತನಕ ವಿನಾಯಿತಿ ಇದೆ.

ಕೆಲವು ಕಂಪೆನಿಗಳ ಆರೋಗ್ಯ ಪಾಲಿಸಿಗಳಿಗೆ ಒಂದು ಅಥವಾ ಎರಡು ವರ್ಷಗಳ ಲಾಕ್‌ಇನ್‌ ಪಿರಿಯಡ್‌ ಇದ್ದು, ಆ ಬಳಿಕವೇ ಕ್ಲೇಮ್ಅನ್ನು ಪರಿಗಣಿಸುತ್ತವೆ. ಪಾಲಿಸಿದಾರ ನೀಡಿದ ಪ್ರೀಮಿಯಂ ಒಂದು ವರ್ಷ ಮಾತ್ರ ಚಾಲ್ತಿಯಲ್ಲಿದ್ದು, ಪ್ರತಿವರ್ಷ ನವೀಕರಿಸಬೇಕಾಗುತ್ತದೆ. ಕೆಲವು ವಿಮಾ ಕಂಪನಿಗಳು ಹಿರಿಯ ನಾಗರಿಕರಿಗೆ ಪಾಲಿಸಿ ಅಡಿಯಲ್ಲಿ ಯಾವುದೇ ಕ್ಲೇಮ್‌ ಮಾಡದಿದ್ದರೆ NoClaim Bonus ಎಂದು ಪ್ರೀಮಿಯಮ್‌ ಮೊತ್ತದಲ್ಲಿ ಸ್ವಲ್ಪ ಕಡಿಮೆ ಮಾಡುತ್ತವೆ ಆಥವಾ sum assuredಅನ್ನು ಹೆಚ್ಚಿಸಿ ಹೊಂದಾಣಿಕೆ ಮಾಡುತ್ತವೆ.

ಸೂಪರ್‌ ಸೀನಿಯರ್‌ ಕೆಟಗರಿ
60 ರಿಂದ 75 ವರ್ಷದವರನ್ನು ಹಿರಿಯ ನಾಗರಿಕರೆಂದು ಪರಿಗಣಿಸುತ್ತಾರೆ. ಆದಾಯಕರ ನಿಯಮಾವಳಿಯಂತೆ 80 ವರ್ಷದವರೆಗೂ ಹಿರಿಯ ನಾಗರಿಕರೆಂದು, 80 ವರ್ಷ ದಾಟಿದವರನ್ನು ಸೂಪರ್‌ ‘ಸೀನಿಯರ್‌ ಸಿಟಿಝನ್‌’ ಎಂದು ವರ್ಗೀಕರಿಸುತ್ತಾರೆ. ಇವರಿಗೆ ಆರೋಗ್ಯ ವಿಮಾ ಪಾಲಿಸಿಗಳು ಸ್ವಲ್ಪ ಮಾರ್ಪಾಡಾಗುತ್ತವೆ.

ವಿಮಾ ಮೊತ್ತವು 1ರಿಂದ 5 ಲಕ್ಷ ರೂ. ವರೆಗೆ ಇರುತ್ತದೆ. ಹಿರಿಯ ನಾಗರಿಕರ ಆರೋಗ್ಯ ದೃಷ್ಟಿಯಲ್ಲಿ high risk ಕೆಟಗರಿಯಲ್ಲಿ ಇರುವುದರಿಂದ ವಿಮಾ ಮೊತ್ತವನ್ನು (sum assured) ಅನ್ನು ಕಡಿಮೆ (capping) ಮಾಡುತ್ತಿದ್ದು, 2ರಿಂದ 3 ಲಕ್ಷ ರೂ.ಗಳ ಮಿತಿ ಇರುತ್ತದೆ.

ಕೆಲವೊಮ್ಮೆ ಆರೋಗ್ಯ ವಿಮಾ ಪ್ರೀಮಿಯಂ ದುಬಾರಿ ಎನಿಸಿದರೂ, ಅರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯೂ ಕಾಡಿದಾಗ ಸಹಾಯಕ್ಕೆ ಬರುತ್ತವೆ. ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಂತೆೆ ಆಪದ್ಬಾಂಧವನಾಗಿ ನೆರವಾಗುತ್ತವೆ. ಆರೋಗ್ಯ ವಿಮೆಯ ಮೂಲಕ ಹಿರಿಯ ನಾಗರಿಕರಿಗೆ ನಮ್ಮ ಪ್ರೀತಿಯನ್ನು ತೋರಿಸೋಣ.

ಏನೇನು ಕವರ್‌ ಆಗುವುದಿಲ್ಲ?
ಹಿರಿಯ ನಾಗರಿಕರ ಆರೋಗ್ಯ ವಿಮಾ ಪಾಲಿಸಿ ಕೆಲವು ಖರ್ಚುಗಳನ್ನು ಒಳಗೊಳ್ಳುವುದಿಲ್ಲ. ಪಾಲಿಸಿ ಪಡೆಯುವ ಮೊದಲು ಇದ್ದ ರೋಗಗಳು (pre existing) ಮತ್ತು ಗಾಯಗಳು (injuries), ಪಾಲಿಸಿ ಪಡೆದು 30 ದಿನಗಳೊಳಗಾಗಿ ಕಂಡುಬಂದ ಹೊಸ ಅರೋಗ್ಯ ಸಮಸ್ಯೆಗಳು, ಔಷಧ ದುರುಪಯೋಗ, ಅಲೋಪಥಿಯೇತರ ಚಿಕಿತ್ಸೆ, ಕಾಸ್ಮೆಟಿಕ್‌ ಸರ್ಜರಿ, ಕನ್ನಡಕಗಳು ಮತ್ತು ಹಲ್ಲು ಸೆಟ್‌ಗಳು ಮತ್ತು ದಂತವೈದ್ಯ ಚಿಕಿತ್ಸೆ (ಅಪಘಾತದಿಂದ ಅಲ್ಲದಿದ್ದರೆ), ಏಡ್ಸ್‌ ಚಿಕಿತ್ಸಾ ವೆಚ್ಚಗಳನ್ನು ಪಾಲಿಸಿ ಒಳಗೊಳ್ಳುವುದಿಲ್ಲ. ಹಿರಿಯ ನಾಗರಿಕರು ನಗದುರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು ಅಥವಾ ಆಮೇಲೆ ಕ್ಲೇಮ್‌ ಸಲ್ಲಿಸಿ ಪಡೆಯಬಹುದು. ಆಮೇಲೆ ಪಡೆಯುವುದಿದ್ದರೆ, ಅಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ಸಂಬಂಧಪಟ್ಟ ವಿಮಾ ಕಂಪೆನಿಗೆ ಮಾಹಿತಿ ನೀಡಬೇಕು.

ವಿಶೇಷವೇನು 
60- 75 ವರ್ಷದ ಹಿರಿಯ ನಾಗರಿಕರಿಗೆ ಈ ಪಾಲಿಸಿಯನ್ನು ನೀಡಲಾಗುವುದು. ಸಾಮಾನ್ಯವಾಗಿ ಆರೋಗ್ಯ ವಿಮಾ ಪಾಲಿಸಿಗಳನ್ನು ನೀಡುವಾಗ pre medical test ಇರುತ್ತಿದ್ದು, ಹಿರಿಯ ನಾಗರಿಕರಿಗೆ ವಿನಾಯಿತಿ ನೀಡಲಾಗಿದೆ.

ಈ ಪಾಲಿಸಿ ಅಡಿಯಲ್ಲಿ ಹಿರಿಯ ನಾಗರಿಕರು ವರ್ಷಕ್ಕೊಮ್ಮೆ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. 24 ತಾಸಿಗಿಂತ ಹೆಚ್ಚು ಅವಧಿಗೆ ಆಸ್ಪತ್ರೆಗೆ ದಾಖಲಾದರೆ ಈ ಪಾಲಿಸಿ ಅಡಿಯಲ್ಲಿ ಹಿರಿಯ ನಾಗರಿಕರು cashless hospitalisation ಸೇವೆಯನ್ನು ಪಡೆಯಬಹುದು. ಇದು ಮೆಡಿಕಲ್ ಬಿಲ್, ವೈದ್ಯರ ಶುಲ್ಕ ಮತ್ತು ಕೊಠಡಿ ಶುಲ್ಕ ಒಳಗೊಂಡಿರುತ್ತದೆ. ಆಸ್ಪತ್ರೆಯಲ್ಲಿ ದಾಖಲಾದ ಅವಧಿಯ ಮೇಲೆ pre (ಆಸ್ಪತ್ರೆಗೆ ದಾಖಲಾಗುವ ಮೊದಲು) ಮತ್ತು post hospitalisation (ಆಮೇಲೆ) ಚಿಕಿತ್ಸೆಯ ವೆಚ್ಚವನ್ನೂ ಒಳಗೊಳ್ಳುತ್ತದೆ. ಪಾಲಿಸಿ ನೀಡುವ ಮೊದಲೇ ಇರುವ (pre existing) ಆರೋಗ್ಯ ಸಮಸ್ಯೆಗಳಿಗೂ ಅನ್ವಯವಾಗುತ್ತದೆ. ಆ್ಯಂಬುಲೆನ್ಸ್‌ ವೆಚ್ಚವನ್ನೂ ನೀಡಲಾಗುತ್ತದೆ.

ವಿಮೆ ನೀಡುವ ಕಂಪನಿಗಳು

ಹುತೇಕ ಎಲ್ಲ ವಿಮಾ ಕಂಪೆನಿಗಳು ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುತ್ತಿದ್ದು, ಬಜಾಜ್‌ ಅಲೈಯನ್ಸ್‌ ಸ್ಟಾರ್‌ ಹೆಲ್ತ್, ನ್ಯಾಶನಲ್ ಇನ್ಶೂರೆನ್ಸ್‌, ನ್ಯೂ ಇಂಡಿಯಾ ಇನ್ಶೂರೆನ್ಸ್‌, ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌, ಅಪೊಲೋ ಮ್ಯುನಿಚ್, ಓರಿಯಂಟಲ್ ಇನ್ಶೂರೆನ್ಸ್‌, ಎಸ್‌ಬಿಐ ಇನ್ಶೂರೆನ್ಸ್‌ ಮತ್ತು ಟಾಟಾ ಎಐಜಿ ಇನ್ಶೂರೆನ್ಸ್‌ ಪ್ರಮುಖವಾಗಿವೆ. ಮೇಲ್ನೋಟಕ್ಕೆ ಎಲ್ಲ ಆರೋಗ್ಯ ವಿಮಾ ಕಂಪೆ‌ನಿಗಳೂ ಒಂದೇ ರೀತಿಯ ಪಾಲಿಸಿಗಳನ್ನು ಮತ್ತು terms conditions ನೀಡಿದರೂ, ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಹಲವು ಭಿನ್ನತೆಗಳನ್ನು ಕಾಣಬಹುದು. ಪಾಲಿಸಿಯನ್ನು ಪಡೆಯುವ ಮೊದಲು ಇವನ್ನೂ ಪರಿಶೀಲಿಸಬೇಕಾಗುತ್ತದೆ.

ರಮಾನಂದ ಶರ್ಮಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ