ತೆರಿಗೆ ಲೆಕ್ಕಾಚಾರಕ್ಕೆ ಇ- ಕ್ಯಾಲ್ಕ್ಯುಲೇಟರ್ ಬಿಡುಗಡೆ
Team Udayavani, Feb 7, 2020, 1:14 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಬಜೆಟ್ನಲ್ಲಿ ಮಂಡಿಸಲಾಗಿರುವ ಹೊಸ ಮಾದರಿಯ ತೆರಿಗೆ ಸ್ಲ್ಯಾಬ್ ಅನುಸರಿಸುವವರಿಗಾಗಿ ಆದಾಯ ತೆರಿಗೆ ಇಲಾಖೆ ಇ-ಕ್ಯಾಲ್ಕ್ಯುಲೇಟರ್ ಅನ್ನು ಬಿಡುಗಡೆ ಮಾಡಿದೆ. ಆದಾಯ ತೆರಿಗೆ ಇಲಾಖೆ ವೆಬ್ಸೈಟ್ ttps://www.incometaxindiaefiling.gov.inನಲ್ಲಿ ಅದು ಲಭ್ಯವಿದೆ.
ಅದರಲ್ಲಿ ಹಳೆಯ ಮತ್ತು ಹೊಸ ಮಾದರಿಯ ತೆರಿಗೆ ಸ್ಲ್ಯಾಬ್ಗಳ ವಿವರಣೆ ಮತ್ತು ಮಾಹಿತಿ ನೀಡಲಾಗಿದೆ ಎಂದು ತೆರಿಗೆ ಇಲಾಖೆ ಗುರುವಾರ ಹೇಳಿದೆ. ತೆರಿಗೆದಾರರು ತಮ್ಮ ಎಲ್ಲ ಮೂಲಗಳಿಂದ ಬರುವ ಆದಾಯವನ್ನು ಅದರಲ್ಲಿ ನಮೂದಿಸಿ, ಪಡೆದುಕೊಳ್ಳಲು ಸಾಧ್ಯವಾಗಬಹುದಾದ ಡಿಡಕ್ಷನ್ಗಳ ಬಗ್ಗೆಯೂ ಅದರಲ್ಲಿ ವಿವರಣೆ ನೀಡಲಾಗಿದೆ.