ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ : ಗಡ್ಕರಿ
Team Udayavani, Mar 5, 2021, 12:17 PM IST
ನವ ದೆಹಲಿ : ಕಾರು ಉತ್ಪಾದಕ ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಕೇಲವ ಮಾರುಕಟ್ಟೆಗೆ ತರುವುದು ಮಾತ್ರವಲ್ಲ, ಟೆಸ್ಲಾ ಕಾರುಗಳು ಭಾರತದಲ್ಲಿ ತಯಾರಾಗಬೇಕು ಎಂಬುವುದನ್ನು ಗಡ್ಕರಿ ಉಲ್ಲೇಖಿಸಿದ್ದಾರೆ. “ಭಾರತದಲ್ಲಿ ಸ್ಥಳೀಯ ಮಾರಾಟಗಾರರನ್ನು ನೇಮಿಸಿಕೊಳ್ಳುವ ಮೂಲಕ ದೇಶದಲ್ಲಿ ಸಂಪೂರ್ಣ ಉತ್ಪಾದನಾ ಘಟಕವನ್ನು ಮಾಡಬೇಕು” “ನಂತರದಲ್ಲಿ ನಾವು ಹೆಚ್ಚಿನ ರಿಯಾಯಿತಿಗಳನ್ನು ನೀಡಬಹುದು.” ಎಂದು ಗಡ್ಕರಿ ರಾಯಿಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಓದಿ : ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ? ಅವರ ಹಿನ್ನೆಲೆ ಏನು? ಯಡಿಯೂರಪ್ಪ
ಕಳೆದ ವರ್ಷ, ಗಡ್ಕರಿ 2021 ರ ಆರಂಭದಲ್ಲಿ ಎಲೋನ್ ಮಸ್ಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದರು. ಆದರೆ, ನಂತರ, ಟೆಸ್ಲಾ ಮೊದಲು ಭಾರತದಲ್ಲಿ ಮಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಮತ್ತು ನಂತರದ ಹಂತದಲ್ಲಿ ಉತ್ಪಾದನೆಯ ಘಟಕದ ಬಗ್ಗೆ ಯೋಚಿಸುತ್ತದೆ ಹೇಳಿತ್ತು.
ಇನ್ನು, ಟೆಸ್ಲಾ ಕಂಪೆನಿಯ ಸಿಇಒ ಎಲೋನ್ ಮಸ್ಕ್ ಅವರು ಟ್ವೀಟ್ ನಲ್ಲಿ ತಮ್ಮ ಕಂಪನಿಯು ಭಾರತದಲ್ಲಿ ಕಾರ್ಯಾಚರಣೆಯನ್ನು 2021 ರಲ್ಲಿ ಪ್ರಾರಂಭಿಸಲಿದೆ ಎಂದು ಖಚಿತ ಪಡಿಸಿದ್ದರು.
ಜನವರಿಯಲ್ಲಿ, ಟೆಸ್ಲಾ ತನ್ನ ಭಾರತದಲ್ಲಿ ತನ್ನ ಬಾಹುವನ್ನು ವಿಸ್ತರಿಸಿಕೊಳ್ಳಲು ಮುಂದಾಯಿತು. ಬೆಂಗಳೂರಿನಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾವಣೆ ಮಾಡಿಕೊಂಡಿತು.
ಓದಿ : ಲಕ್ಷ ಅಕ್ಕಿ ಮುಡಿಗಳನ್ನು ಮಾಡಿ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿರುವ ದೇವ ಪೂಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಂಕ್ ಆನ್ ಲೈನ್ ವಂಚನೆಗೆ ಬ್ರೇಕ್ ಹಾಕಲು ದೆಹಲಿ ಪೊಲೀಸರ ಹೊಸ ಕ್ರಮ..! ಇಲ್ಲಿದೆ ಮಾಹಿತಿ.
ಇನ್ಮುಂದೆ ಜೋಮ್ಯಾಟೋ ಪಬ್ಲಿಕ್ ಲಿಮಿಟೆಡ್ ಕಂಪೆನಿ..!?
ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 450 ಅಂಕ ಕುಸಿತ, 14,400ಕ್ಕೆ ಕುಸಿದ ನಿಫ್ಟಿ
2020-21ರ ಆರ್ಥಿಕ ವರ್ಷದಲ್ಲಿ ನಿವ್ವಳ ಪರೋಕ್ಷ ತೆರಿಗೆಯಲ್ಲಿ ಶೇ. 12.3 ರಷ್ಟು ಏರಿಕೆ
2020-21ರ ಆರ್ಥಿಕ ವರ್ಷದ ಅತಿ ಹೆಚ್ಚು ಕಾರುಗಳ ಮಾರಾಟ : ಮಾರುತಿ ಸುಜುಕಿ ಮೇಲುಗೈ
MUST WATCH
ಹೊಸ ಸೇರ್ಪಡೆ
ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
ವಿದ್ಯಾರ್ಥಿಗಳ ಉಜ್ವಲ ಭವಿಷ್ಯದಲ್ಲಿ ಅಧ್ಯಾಪಕರ ಕೊಡುಗೆ ಅಪಾರ: ಎಸ್. ಪಿ. ಶೆಣೈ
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
“ಸಮಾಜದ ಜನರ ಅಭ್ಯುದಯ ಅಸೋಸಿಯೇಶನ್ನ ಧ್ಯೇಯ’