ಇನ್ಫೋಸಿಸ್ ಸಿಇಒ ಮತ್ತು ಎಂಡಿ ಆಗಿ ಸಲೀಲ್ ಪರೇಖ್ ಮರು ನೇಮಕ
Team Udayavani, May 22, 2022, 5:43 PM IST
ಬೆಂಗಳೂರು: ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಸಲೀಲ್ ಪರೇಖ್ ಅವರನ್ನು ಮುಂದಿನ 5 ವರ್ಷಗಳವರೆಗೆ ಸಿಇಒ ಮತ್ತು ಎಂಡಿ ಆಗಿ ಮರು ನೇಮಕ ಮಾಡಿದೆ.
ಮೇ 21 ರಂದು ನಡೆದ ಇನ್ಫೋಸಿಸ್ ಲಿಮಿಟೆಡ್ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ , ಮಾರ್ಚ್ 2027 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಗೆ ಸಲೀಲ್ ಪರೇಖ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿ ಮರುನೇಮಕ ಮಾಡಲಾಗಿದೆ ಎಂದು ಭಾನುವಾರ ತಿಳಿಸಲಾಗಿದೆ.
ಕಂಪನಿಯ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ (ಎನ್‌ಆರ್‌ಸಿ) ಶಿಫಾರಸುಗಳ ಆಧಾರದ ಮೇಲೆ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಇನ್ಫೋಸಿಸ್ ಲಿಮಿಟೆಡ್ ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಸಲೀಲ್ ಪರೇಖ್ ಅವರು ಜನವರಿ 2018 ರಿಂದ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ವಿಜಯ್ ಶೇಖರ್ ಶರ್ಮ ಮರು ನೇಮಕ
ವಿಜಯ್ ಶೇಖರ್ ಶರ್ಮ ಅವರು ಡಿಸೆಂಬರ್ 2027 ರವರೆಗೆ ಪೆಟಿಎಂ ನ ಎಂಡಿ ಮತ್ತು ಸಿಇಒ ಆಗಿ ಮರು ನೇಮಕಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನಕ್ಕೆ ಮುಕೇಶ್ ಅಂಬಾನಿ ರಾಜೀನಾಮೆ, ಪುತ್ರ ಆಕಾಶ್ ನೇಮಕ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ
ಖ್ಯಾತ ಉದ್ಯಮಿ, ಶಾರ್ಪೂಜಿ ಪಲ್ಲೊಂಜಿ ಗ್ರೂಪ್ ಮುಖ್ಯಸ್ಥ ಮಿಸ್ತ್ರಿ ವಿಧಿವಶ; ಪ್ರಧಾನಿ ಸಂತಾಪ
ಉತ್ತಮ ವಹಿವಾಟು: ಬಿಎಸ್ಇ ಸೂಚ್ಯಂಕ ನೆಗೆತ
215 ಉತ್ಪನ್ನಗಳ ತೆರಿಗೆ ಬದಲಿಲ್ಲ? ಚಂಡೀಗಢದಲ್ಲಿ ನಡೆವ ಸಭೆಯಲ್ಲಿ ಚರ್ಚೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ
ಸದ್ಯದಲ್ಲೇ ಸಂಪುಟ ವಿಸ್ತರಣೆ; ನಿಗಮ ಮಂಡಳಿಗಳಿಗೆ ಪಟ್ಟಿಯೂ ಅಂತಿಮ?
ಗಡಿಯಾಚೆ ಅಡಗುವ ಅಪರಾಧಿಗಳ ಹೆಡೆಮುರಿ ಕಟ್ಟಲು ಕರ್ನಾಟಕ-ಕೇರಳ ಪೊಲೀಸ್ ಜಂಟಿ ಕಾರ್ಯಾಚರಣೆ
ಜಕ್ರಿಬೆಟ್ಟು ಜಲ ಶುದ್ಧೀಕರಣ ಘಟಕ: ಸುತ್ತಲೂ ಬೆಳೆದು ನಿಂತ ಪೊದೆ
ವಿಶ್ವಾಸಮತ…ಮಹಾರಾಷ್ಟ್ರ ಗವರ್ನರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ