ನಿಮ್ಮ ಆಧಾರ್ ಕಾರ್ಡ್ ಗೆ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಲಿಂಕ್ ಆಗಿದೆಯೇ..?

ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

Team Udayavani, Jun 1, 2021, 4:21 PM IST

is-your-bank-accounts-are-not-linked-with-aadhaar-how-many-bank-accounts-linked-to-your-aadhaar

ನವ ದೆಹಲಿ : ದೇಶದ ನಾಗರಿಕರ ಗುರುತಿನ ಚೀಟಿ ಎಂದೇ ಕರೆಯಲ್ಪಡುವ ಆಧಾರ್ ಕಾರ್ಡ್ ಗೆ ನಿಮ್ಮ ಬ್ಯಾಂಕ್ ನ ಖಾತೆಯ ಸಂಖ್ಯೆ ಲಿಂಕ್ ಆಗಿದೆಯೇ ಎನ್ನುವುದರ ಬಗ್ಗೆ ನಿಮಗೆ ಎಷ್ಟು ಮಾಹಿತಿ ಇದೆ..? ನಕಲಿ ಖಾತೆಯ ಸಂಖ್ಯೆಗಳು ಲಿಂಕ್ ಆಗಿವೆಯೇ..? ಈ ಎಲ್ಲಾ ಮಾಹಿತಿಯನ್ನು ನೋಡುವುದು ಹೇಗೆ..? ಎನ್ನುವುದಕ್ಕೆ ಈ ಲೇಖನ ಉತ್ತರ ನೀಡುತ್ತದೆ.

ಯಾವುದೇ ರೀತಿಯ ಬ್ಯಾಂಕ್ ವಂಚನೆಯನ್ನು ತಪ್ಪಿಸಲು ಕೆವೈಸಿ ನವೀಕರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡದಿದ್ದರೆ, ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಇದರ ನಂತರ ನೀವು ಯಾವುದೇ ರೀತಿಯ ಹಣಕಾಸಿನ ವ್ಯವಹಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಆಧಾರ್ ನನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಮುಖ್ಯವಾಗಿದೆ.

ಇದನ್ನೂ ಓದಿ : ಇಂಗ್ಲೆಂಡ್ ಪ್ರವಾಸಕ್ಕೆ ಕುಟುಂಬದೊಂದಿಗೆ ತೆರಳಲು ಟೀಂ ಇಂಡಿಯಾ ಆಟಗಾರರಿಗೆ ಅನುಮತಿ

ಒಂದೊಮ್ಮೆ ನೀವು ಈ ಮೊದಲೇ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ (Aadhaar Card) ಜೊತೆಗೆ ಲಿಂಕ್ ಮಾಡಿದ್ದರೆ, ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲಾಗಿದೆಯೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದು ಉತ್ತಮ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದರೆ, ಎಲ್ಲಾ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಕೂಡ ಮಾಡಬಹುದು. ನಿಮ್ಮ ಆಧಾರ್‌ ನೊಂದಿಗೆ ಎಷ್ಟು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ತಿಳಿಯಲು ನೀವು ಬಯಸಿದರೆ, ಇದು ಯಾವುದೇ ಹಣಕಾಸಿನ ವಹಿವಾಟು ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ಇದಲ್ಲದೆ ನಕಲಿ ಬ್ಯಾಂಕ್ ಖಾತೆಯ ಬಗ್ಗೆಯೂ ನೀವು ಎಚ್ಚರಿಕೆಯಿಂದ ಇರಬಹುದಾಗಿದೆ.

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾದ (ಯುಐಡಿಎಐ ವೆಬ್‌ಸೈಟ್) ಅಧಿಕೃತ ವೆಬ್‌ ಸೈಟ್‌ ನಲ್ಲಿ ಈ ಕುರಿತಾದ ಸಂಪೂರ್ಣ ಮಾಹಿತಿ ಇದೆ.

ನಿಮ್ಮ ಖಾತೆಯ ಸಂಖ್ಯೆ ಆಧಾರ್ ನೊಂದಿಗೆ ಲಿಂಕ್ ಆಗಿದೆಯೇ ಎನ್ನುವುದನ್ನು ಹೇಗೆ ತಿಳಿಯುವುದು..?

  1. ಯುಐಡಿಎಐ ಅಧಿಕೃತ ವೆಬ್‌ ಸೈಟ್www.uidai.gov.in ನನ್ನು ನೀವು ಪ್ರವೇಶಿಸಬೇಕು
  2. ಈಗ ಮೈನ್ ಪೇಜ್ ಗೆ ಬಂದ ನಂತರ, ನೀವು ಎಂವೈ ಆಧಾರ್ (ಮೈ ಆಧಾರ್) ಲಿಂಕ್ ನನ್ನು ಕ್ಲಿಕ್ ಮಾಡಬೇಕು.
  3. ಈಗ ಹೊಸ ಪುಟದಲ್ಲಿ, ನೀವು ಆಧಾರ್ ಸೇವೆಗೆ ಹೋಗಬೇಕಾಗಿದೆ.
  4. ಚೆಕ್ ಆಧಾರ್ / ಬ್ಯಾಂಕ್ ಲಿಂಕ್ ಮಾಡುವ ಆಯ್ಕೆಗೆ ಹೋಗಬೇಕು.
  5. ಚೆಕ್ ಆಧಾರ್ / ಬ್ಯಾಂಕ್ ಲಿಂಕ್ ನನ್ನು ಕ್ಲಿಕ್ ಮಾಡಿದಾಗ, ಹೊಸ ಪುಟ ತೆರೆಯುತ್ತದೆ.

6- ನೀವು ಹೊಸ ಪುಟಕ್ಕೆ ಬಂದ ತಕ್ಷಣ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

6 ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿದ ನಂತರ, ಈಗ ನೀವು ಲಾಗಿನ್ ಬಟನ್ ಕ್ಲಿಕ್ ಮಾಡಬೇಕು.

  1. ಈಗ ನೀವು ಹೊಸ ಪುಟಕ್ಕೆ ಬರುತ್ತೀರಿ ಮತ್ತು ನಿಮ್ಮ ಆಧಾರ್‌ಗೆ ಯಾವ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲಾಗಿದೆ ಎಂದು ನೀವು ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ : ಪ್ರಧಾನಿ ಅಧ್ಯಕ್ಷತೆಯ ಸಭೆಗೆ ಗೈರು ಹಾಜರಾಗಿದ್ದೇಕೆ? ಬಂಗಾಳ ಮಾಜಿ ಸಿಎಸ್ ಗೆ ಶೋಕಾಸ್ ನೋಟಿಸ್

ಟಾಪ್ ನ್ಯೂಸ್

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.