ಜು.5ರಂದು ಅಮೆಜಾನ್ ಸಿಎಒ ಸ್ಥಾನದಿಂದ ಜೆಫ್ ಬೆಜೋಸ್ ನಿವೃತ್ತಿ
Team Udayavani, May 28, 2021, 9:33 AM IST
ಸಿಯಾಟಲ್: ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಜು.5ರಂದು ಸಿಇಒ ಸ್ಥಾನ ತೆರವುಗೊಳಿಸಲಿದ್ದಾರೆ. ಅವರ ಸ್ಥಾನಕ್ಕೆ ಆ್ಯಂಡಿ ಜೆಸ್ಸಿ ಅವರು ನೇಮಕಗೊಳ್ಳಲಿದ್ದಾರೆ.
ಜೆಫ್ ಬೆಜೋಸ್ ಅವರು ಅಮೆಜಾನ್ ವೆಬ್ ಸೈಟ್ ಸ್ಥಾಪಿಸಿ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಅದನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ಅವರದ್ದು. 27 ವರ್ಷಗಳ ಹಿಂದೆ ಅಂದರೆ 1994ರ ಜು.5ರಂದು ಅಮೆಜಾನ್ ಅನ್ನು ಹುಟ್ಟುಹಾಕಲಾಗಿತ್ತು. ಹೀಗಾಗಿ, ಅದೇ ದಿನ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.
ಫೆಬ್ರವರಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ಬುಧವಾರವಷ್ಟೇ ಹಾಲಿವುಡ್ನ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಎಂಜಿಎಂ ಸ್ಟುಡಿಯೋಸ್ ಅನ್ನು 61 ಸಾವಿರ ಕೋಟಿ ರೂ.ಗಳಿಗೆ ಖರೀದಿ ಮಾಡುವ ನಿರ್ಧಾರವನ್ನು ಅಮೆಜಾನ್ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್