ಜಿಯೋ ಫೈಬರ್ ಸೇವೆ ಆರಂಭ; ಗ್ರಾಹಕರಿಗೆ ಮೆಗಾ ಆಫರ್ ಘೋಷಣೆ

Team Udayavani, Sep 5, 2019, 7:13 PM IST

ಮುಂಬೈ:ಟೆಲಿಕಾಂ ಕ್ಷೇತ್ರದಲ್ಲಿ ಕಡಿಮೆ ದರದಲ್ಲಿ 4ಜಿ ಸೇವೆಯನ್ನು ನೀಡುವ ಮೂಲಕ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಗುರುವಾರ ಅಧಿಕೃತವಾಗಿ ಜಿಯೋ ಫೈಬರ್ ಸೇವೆಗೆ ಚಾಲನೆ ನೀಡಿದೆ.

ಜಿಯೋ ಫೈಬರ್ ನ ಮೆಗಾ ಆಫರ್ ಅನ್ನು ಇಂದು ರಿಯಲನ್ಸ್ ಘೋಷಿಸಿದೆ. ಜಿಯೋ ಮೆಗಾ ಆಫರ್ ವಿವರ ಹೀಗಿದೆ…

ರಿಲಯನ್ಸ್ ಒಟ್ಟು ಆರು ಪ್ರಿ ಪೇಯ್ಡ್ ಪ್ಲ್ಯಾನ್ಸ್ ಆಫರ್ ನೀಡಿದೆ. ಅದರಲ್ಲಿ ಕಂಚು-ತಿಂಗಳಿಗೆ 699 ರೂಪಾಯಿ, ಬೆಳ್ಳಿ-ತಿಂಗಳಿಗೆ 849 ರೂಪಾಯಿ, ಚಿನ್ನ-ತಿಂಗಳಿಗೆ 1,299 ರೂಪಾಯಿ, ವಜ್ರ-ತಿಂಗಳಿಗೆ 2,499, ಪ್ಲಾಟಿನಂ-ತಿಂಗಳಿಗೆ 3,999 ಮತ್ತು ಟಿಟಾನಿಯಂ-ತಿಂಗಳಿಗೆ 8,499 ರೂಪಾಇಯ ಆಫರ್ ನೀಡಿದೆ.

ಜಿಯೋ ಫೈಬರ್ ಬ್ರೋನ್ಜ್ (ಕಂಚು) ಮತ್ತು ಸಿಲ್ವರ್(ಬೆಳ್ಳಿ) ಪ್ಲ್ಯಾನ್ಸ್ ನಲ್ಲಿ ಡಾಟಾ ಸ್ಪೀಡ್ ಕನಿಷ್ಠ 100 ಎಂಬಿಪಿಎಸ್ ವರೆಗೆ, ಗೋಲ್ಡ್ (ಚಿನ್ನ) ಮತ್ತು ಡೈಮಂಡ್(ವಜ್ರ) ಪ್ಲ್ಯಾನ್ಸ್ ನಲ್ಲಿ ಕನಿಷ್ಠ 250 ಎಂಬಿಪಿಎಸ್ ಮತ್ತು 500 ಎಂಬಿಪಿಎಸ್ ವೇಗದ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ.

ಅದೇ ರೀತಿ ಪ್ಲಾಟಿನಂ ಮತ್ತು ಟಿಟಾನಿಯಂ ಪ್ಲ್ಯಾನ್ ನಲ್ಲಿ ಒಂದು ಜಿಬಿಪಿಎಸ್ ಡಾಟಾ ಸ್ಪೀಡ್ ಲಭ್ಯವಾಗಲಿದೆ. ಇದು ಒಂದು ತಿಂಗಳ ಪ್ಲ್ಯಾನ್ ಹೊಂದಿದ್ದು, ಇನ್ನುಳಿದಂತೆ ಜಿಯೋ 3 ತಿಂಗಳ, 6 ತಿಂಗಳ ಹಾಗೂ ಒಂದು ವರ್ಷದ ಪ್ಲ್ಯಾನ್ ಅನ್ನು ಕೂಡಾ ನೀಡಲಿದೆ ಎಂದು ತಿಳಿಸಿದೆ.

ಅನ್ ಲಿಮಿಟೆಡ್ ಡಾಟಾ ಡೌನ್ ಲೋಡ್ ಮತ್ತು ಅಪ್ ಲೋಡ್:

ಜಿಯೋ ಫೈಬರ್ ನ ಪ್ರತಿಯೊಂದು ಪ್ಲ್ಯಾನ್ ನಲ್ಲಿಯೂ ಅನ್ ಲಿಮಿಟೆಡ್ ಡೌನ್ ಲೋಡ್ ಮತ್ತು ಅಪ್ ಲೋಡ್ ಸೇವೆ ಲಭ್ಯವಾಗಲಿದೆ. ಆರಂಭಿಕವಾಗಿ ಕಂಚು(ಬ್ರೊನ್ಜ್) ಪ್ಲ್ಯಾನ್ ನಲ್ಲಿ 100 ಜಿಬಿ, ನಂತರ ಬೆಳ್ಳಿಯಿಂದ ಟಿಟಾನಿಯಂ ಪ್ಲ್ಯಾನ್ ವರೆಗೆ 5000 ಜಿಬಿ ಕ್ರಮವಾಗಿ ಲಭ್ಯವಾಗಲಿದೆ. ಅಷ್ಟೇ ಅಲ್ಲ ಹೆಚ್ಚುವರಿ 250 ಜಿಬಿ ಉಚಿತ ಹೈಸ್ಪೀಡ್ ಡಾಟಾ ಸೇವೆ ನೀಡುವುದಾಗಿ ಜಿಯೋ ಘೋಷಿಸಿದೆ.

ಫ್ರೀ ವಾಯ್ಸ್ ಕರೆ, ಟಿವಿ ವಿಡಿಯೋ ಕರೆ:

ಜಿಯೋ ಫೈಬರ್ ನ ಪ್ಲ್ಯಾನ್ ನಲ್ಲಿ ದೇಶೀಯ ಉಚಿತ ವಾಯ್ಸ್ ಕರೆ, ಟಿವಿ ವಿಡಿಯೋ ಕರೆ, ಗೇಮಿಂಗ್, 5 ಡಿವೈಸ್ ಗೆ ಆ್ಯಂಟಿ ವೈರಸ್ ನೋರ್ಟೊನ್ ನೀಡಲಾಗುವುದು.

ಪ್ರಮುಖ ನಗರಗಳಲ್ಲಿ ಸಂಪರ್ಕ:

ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಜೈಪುರ, ಹೈದರಾಬಾದ್, ಸೂರತ್, ವಡೋದರಾ, ಚೆನ್ನೈ, ನೋಯ್ಡಾ, ಗಾಜಿಯಾಬಾದ್, ಭುವನೇಶ್ವರ್, ವಾರಣಾಸಿ, ಅಲಹಾಬಾದ್, ಆಗ್ರಾ, ಮೀರತ್, ವೈಜಾಗ್, ಲಕ್ನೋ, ಹರಿದ್ವಾರ, ಗಯಾ, ಪಾಟ್ನ, ಪೋರ್ಟ್ ಬ್ಲೇರ್, ಪಂಜಾಬ್ ಸೇರಿದಂತೆ ಹಲವು ನಗರಗಳಲ್ಲಿ ಜಿಯೋ ಫೈಬರ್ ಸೇವೆ ಲಭ್ಯವಾಗಲಿದೆ ಎಂದು ಜಿಯೋ ತಿಳಿಸಿದೆ.

ಜಿಯೋ ಗಿಗಾಫೈಬರ್ ಸೇವೆ ಪಡೆಯಲು ಗಿಗಾಫೈಬರ್ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಿರುವ ವಿವರಗಳನ್ನು ದಾಖಲಿಸಬೇಕು. ಬಳಿಕ ನಾವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಬೇಕು. ಮನೆಯಲ್ಲಿ ರೂಟರ್ ಅಳವಡಿಸಿದ ಕೆಲವೇ ಗಂಟೆಗಳಲ್ಲಿ ಇಂಟರ್ನೆಟ್ ಸೇವೆ ಆರಂಭವಾಗುತ್ತದೆ.

ಅಲ್ಲದೇ ಇಂಟರ್ನೆಟ್ ಸೇವೆ ಪಡೆಯಲು ರೂಟರ್ ಅಗತ್ಯ. ಅದಕ್ಕಾಗಿ ಜಿಯೋ ಸಂಪರ್ಕ ಪಡೆಯುವ ಗ್ರಾಹಕರು ರೂಟರ್ ಗೆ 2500 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ..ಇದನ್ನು ಗ್ರಾಹಕರು ಹಿಂಪಡೆಯುವ ಮೊತ್ತವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ