ಇನ್ಮುಂದೆ ಸಾಲಿನಲ್ಲಿ ಕಾಯೋ ಕಷ್ಟ ಬೇಡ..ಜಿಯೋ ರೈಲ್ ಆ್ಯಪ್ ಲಾಂಚ್!

Team Udayavani, Jan 30, 2019, 11:48 AM IST

ಮುಂಬೈ: ಭಾರತವನ್ನು ಡಿಜಿಟಲ್ ಎಂಪವರ್ ಮೆಂಟ್ ಮಾಡುವ ಸಲುವಾಗಿ ಜಿಯೋ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಮುಂದಾಗಿದೆ. ಇದರಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದ ಸೌಲಭ್ಯ ಒದಗಿಸಿಕೊಟ್ಟಿದೆ. IRCTC  ಟಿಕೆಟ್ ಬುಕಿಂಗ್ ಆಯ್ಕೆಯನ್ನು ತನ್ನ ಜಿಯೋ ಪೋನ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದಕ್ಕಾಗಿ ಜಿಯೋ ರೈಲ್ ಎನ್ನುವ ಆ್ಯಪ್ ವೊಂದನ್ನು ನೂತನವಾಗಿ ಬಿಡುಗಡೆ ಮಾಡಿದೆ.

ಜಿಯೋ ಆ್ಯಪ್ ಸ್ಟೋರ್ ನಲ್ಲಿ ನೂತನವಾಗಿ ಲಾಂಚ್ ಮಾಡಿರುವ ಜಿಯೋ ರೈಲ್ ಆ್ಯಪ್ ಲಭ್ಯವಿದ್ದು, ಬಳಕೆದಾರರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ರೈಲು ಪ್ರಯಾಣ ಸುಖಕರವಾಗಿರಲಿದೆ, ಅಲ್ಲದೇ IRCTC  ಆಕೌಂಟ್ ಇಲ್ಲದೆ ಇರುವವರು ಸಹ ಈ ಆ್ಯಪ್ ಮೂಲಕ ಅಕೌಂಟ್ ಕ್ರಿಯೆಟ್ ಮಾಡಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ಅಲ್ಲದೇ ಈ ಆ್ಯಪ್ ಮೂಲಕ ಜಿಯೋ ಫೋನ್ ಬಳಕೆದಾರರು PNR ಸ್ಟೇಟಸ್ ಸಹ ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿ, ಅದರ ಸ್ಥಿತಿಗತಿಯನ್ನು ಇದರಲ್ಲಿ ನೋಡಬಹುದಾಗಿದೆ. ರೈಲು ಎಲ್ಲಿದೇ ಎಂದು ನೋಡುವ ಅವಕಾಶವು ಇದ್ದು, ಊಟ, ತಿಂಡಿಯನ್ನು ಸಹ ಆ್ಯಪ್ ನಲ್ಲಿಯೇ ಆರ್ಡರ್ ಮಾಡಬಹುದಾಗಿದೆ.

ಈ ಆ್ಯಪ್ ಬಳಕೆಯಿಂದಾಗಿ ಜಿಯೋ ಫೋನ್ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ, ಒಂದೇ ಕ್ಲಿಕ್ ನಲ್ಲಿ ಟಿಕೆಟ್ ಪಡೆಯುವುದರೊಂದಿಗೆ ಉದ್ದದ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ, ಡಿಜಿಟಲ್ ಲೈಫ್ ಅನ್ನು ಎಂಜಾಯ್ ಮಾಡಲು ಅವಕಾಶ ನೀಡಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ