ಕಡಿಮೆ ದರದಲ್ಲಿ 4G ಮೊಬೈಲ್,ಎರಡು ವರ್ಷ ಉಚಿತ ಕರೆ … ‘ಜಿಯೋ’ ಹೊಸ ಆಫರ್ ಘೋಷಣೆ
2 ವರ್ಷ ಉಚಿತ ಕರೆ! ಮಾರ್ಚ್ 1 ರಿಂದ ಜಿಯೋ ಹೊಸ ಆಫರ್
Team Udayavani, Feb 26, 2021, 7:42 PM IST
ನವದೆಹಲಿ: 2ಜಿ ಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ರಿಲಯನ್ಸ್ ಜಿಯೋ ಇದೀಗ ಕೈಗೆಟುಕುವ ದರದಲ್ಲಿ ಹೊಸ 4ಜಿ ಮೊಬೈಲ್ ಪರಿಚಯಿಸಿದೆ.
ಕಳೆದ ವರ್ಷ 2ಜಿ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಮೊಬೈಲ್ ನೀಡುವುದಾಗಿ ದೈತ್ಯ ಟೆಲಿಕಾಂ ಸಂಸ್ಥೆ ರಿಲಯನ್ಸ್ ಹೇಳಿಕೊಂಡಿತ್ತು. ಪ್ರಪಂಚವು 5ಜಿಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ 30 ಕೋಟಿ ಜನರು ಇಂದಿಗೂ 2ಜಿ ಬಳಸುತ್ತಿದ್ದಾರೆ. ಪ್ರಸ್ತುತ 5ಜಿ ಯುಗದಲ್ಲೂ ಕೆಲವೊಂದಿಷ್ಟು ವರ್ಗ ಹೈಸ್ಪೀಟ್ ಇಂಟರ್ ನೆಟ್ ಸೌಲಭ್ಯದಿಂದ ವಂಚಿತವಾಗಿದೆ. ಇವರನ್ನು ಗುರಿಯಾಗಿಸಿಕೊಂಡು ಅತೀ ಕಡಿಮೆ ದರದಲ್ಲಿ 4ಜಿ ಮೊಬೈಲ್ ಪರಿಚಯಿಸುತ್ತಿದ್ದೇವೆ ಎಂದು ರಿಲಯನ್ಸ್ ಜಿಯೋ ಸಂಸ್ಥೆಯ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.
ಜಿಯೋ ಫೋನ್ 2021 ಆಫರ್ :
1) ಕೇವಲ 1999 ರೂಪಾಯಿಗೆ ಜಿಯೋ ಫೋನ್ ನೀಡಲಾಗುತ್ತಿದ್ದು, 2 ವರ್ಷಗಳ ಕಾಲ ಅನಿಯಮಿತ ವಾಯ್ಸ್ ಕರೆ ಸೌಲಭ್ಯ, ಪ್ರತಿ ತಿಂಗಳಿಗೆ 2 ಜಿಬಿ ಹೈ ಸ್ಪೀಡ್ ಡಾಟಾ. ಹಾಗೂ ಎರಡು ವರ್ಷಗಳ ವರೆಗೆ ಯಾವುದೇ ರೀತಿ ರಿಚಾರ್ಜ್ ಮಾಡಿಸುವ ಅಗತ್ಯತೆ ಇರುವುದಿಲ್ಲ.
2) 1499 ರೂ.ಗೆ ಜಿಯೋ ಫೋನ್ ಜತೆಗೆ 12 ತಿಂಗಳ ವರೆಗೆ ಅನಿಯಮಿತ ವಾಯ್ಸ್ ಕರೆ ಸೌಲಭ್ಯ, ತಿಂಗಳಿಗೆ 2 ಜಿಬಿ ಹೈಸ್ಪೀಡ್ ಡಾಟಾ ಹಾಗೂ ಒಂದು ವರ್ಷದ ವರೆಗೆ ಯಾವುದೇ ರೀತಿ ರಿಚಾರ್ಜ್ ಮಾಡಿಸಬೇಕಿಲ್ಲ.
ಇನ್ನು ಈಗಾಗಲೇ ಜಿಯೋ ಬಳಸುತ್ತಿರುವ ಗ್ರಾಹಕರಿಗೂ ಹೊಸ ಆಫರ್ ಘೋಷಿಸಲಾಗಿದೆ. ಕೇವಲ 749 ರೂ. ರಿಚಾರ್ಜ್ ಮಾಡಿಸಿ ಅನಿಯಮಿತ ವಾಯ್ಸ್ ಕರೆ, ಪ್ರತಿ ತಿಂಗಳಿಗೆ 2 ಜಿಬಿ ಹೈಸ್ಪೀಡ್ ಡಾಟಾ ಹಾಗೂ ಒಂದು ವರ್ಷದ ವರೆಗೆ ಯಾವುದೇ ರೀತಿ ರಿಚಾರ್ಜ್ ಮಾಡಿಸಬೇಕಿಲ್ಲ.
ಈ ಹೊಸ ಆಫರ್ ಗಳು ಬರುವ ಮಾರ್ಚ್ 1 ರಿಂದ ದೇಶ್ಯಾದ್ಯಂತ ರಿಲಯನ್ಸ್ ಹಾಗೂ ಜಿಯೋ ರಿಟೈಲರ್ ಗಳಲ್ಲಿ ದೊರೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ