ಟಾಪ್ ಡೌನ್‌ಲೋಡ್  ಸ್ಪೀಡ್‌ನಲ್ಲಿ ಜಿಯೋ ಪ್ರಥಮ: ಬ್ರ್ಯಾಂಡ್ ನಲ್ಲೂ ಬೆಸ್ಟ್‌

Team Udayavani, Sep 28, 2019, 5:33 PM IST

ಮುಂಬೈ: ರಿಲಯನ್ಸ್ ಜಿಯೋ 4ಜಿ ಡೌನ್‌ಲೋಡ್ ಸ್ಪೀಡ್ ಆಗಸ್ಟ್‌  ತಿಂಗಳ ಪಟ್ಟಿಯಲ್ಲಿ  ಅಗ್ರಸ್ಥಾನವನ್ನು ಪಡೆದುಕೊಂಡಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತಿಳಿಸಿದೆ.

ಅಲ್ಲದೇ ಜಿಯೋ ಟಾಪ್ ಬೆಸ್ಟ್‌ 100 ಬ್ರಾಂಡ್‌ಗಳಲ್ಲಿ ಸ್ಥಾನವನ್ನು ಪಡೆದಿದೆ. ಟ್ರಾಯ್ ಪ್ರತಿ ತಿಂಗಳು ಇಂಟರ್ನೆಟ್ ಸ್ಪೀಡ್ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಅದರಂತೆ ಆಗಸ್ಟ್‌ ತಿಂಗಳಿನಲ್ಲಿ ರಿಲಯನ್ಸ್ ಜಿಯೋ 4ಎ ಸರಾಸರಿ ಡೌನ್ ಲೋಡ್ ಸ್ಪೀಡ್ ನಲ್ಲಿ  ಮೊದಲ ಸ್ಥಾನವನ್ನು ಪಡೆದುಕೊಂಡು ಮುನ್ನಡೆ ಸಾಧಿಸಿದೆ.

ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಟ್ರಾಯ್ ಲೆಕ್ಕಾಚಾರ ಮಾಡುತ್ತದೆ.ಜುಲೈನಲ್ಲಿ 21.0 Mbps ಡೌನ್‌ ಲೋಡ್ ವೇಗವನ್ನು ಹೊಂದಿದ್ದ ಜಿಯೋ ಆಗಸ್ಟ್  ತಿಂಗಳಲ್ಲಿ ಸರಾಸರಿ 21.3 Mbps ಡೌನ್‌ ಲೋಡ್ ವೇಗವನ್ನು ಸಾಧಿಸಿದೆ.

ರಿಲಯನ್ಸ್ ಜಿಯೋ ಅತಿ ವೇಗದ 4ಎ ಆಪರೇಟರ್ ಆಗಿದ್ದು, 2018ರಲ್ಲಿ ಎಲ್ಲಾ 12 ತಿಂಗಳಲ್ಲಿ  ಗರಿಷ್ಠ  ಸರಾಸರಿ ಡೌನ್‌ ಲೋಡ್ ವೇಗವನ್ನು ಹೊಂದಿತ್ತು. ಈ ವರ್ಷ  ಮತ್ತೆ, ಜಿಯೋ ಇದುವರೆಗಿನ ಎಲ್ಲಾ ಎಂಟು ತಿಂಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಭಾರತೀಯರಿಗೆ ಬೆಸ್ಟ್‌ ಸೇವೆಯನ್ನು ನೀಡುತ್ತಿದೆ.

ಜಿಯೋ ಬೆಸ್ಟ್‌ ಬ್ರಾಂಡ್:ರಿಲಯನ್ಸ್ ಜಿಯೋ ಪ್ರಸ್ತುತ ಬೆಳೆಯುತ್ತಿರುವ ದರದ ಆಧಾರದ ಮೇಲೆ ಮೂರು ವರ್ಷಗಳಲ್ಲಿ ಜಾಗತಿಕವಾಗಿ 100 ಅಮೂಲ್ಯ ಬ್ರಾಂಡ್‌  ಗಳಲ್ಲಿ ಒಂದಾಗಲಿದೆ  ಎಂದು ಸಂವಹನ  ಸೇವಾ ಪೂರೈಕೆದಾರ ಗಕಕ ಮತ್ತು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಾಂತರ್ ಮಿಲ್ವರ್ಡ್ ಬ್ರೌನ್ ವರದಿ ಮಾಡಿವೆ.

1995 ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ ಏರ್‌ಟೆಲ್‌ ಗಿಂತ 2016ರಲ್ಲಿ ಪ್ರಾರಂಭವಾದ  ಜಿಯೋವನ್ನು ಭಾರತೀಯ ಗ್ರಾಹಕರು ಅಪ್ಪಿಕೊಂಡು ಒಪ್ಪಿದ್ದಾರೆ ಎಂದು 2019 ರ ‘ಆrಚnಛಘ ಟಾಪ್ 100 ಹೆಚ್ಚು ಮೌಲ್ಯಯುತ ಜಾಗತಿಕ ಬ್ರಾಂಡ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಡೇಟಾ ಬಳಕೆಗಾಗಿ ರಿಯಾಯಿತಿ ದರಗಳೊಂದಿಗೆ ಜಿಯೋ, ಈಗ 340 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರಿಕೆಯನ್ನು ಹೊಂದಿದೆ.

ಜಿಯೋ ಪ್ರಸ್ತುತ ಬ್ರಾಂಡ್ ಮೌಲ್ಯ 4.1 ಬಿಲಿಯನ್ ಡಾಲರ್  ಎಂದು ವರದಿ ತಿಳಿಸಿದೆ.ಪ್ರಾರಂಭದಲ್ಲಿ, ಜಿಯೋ ಮೊದಲ ಆರು ತಿಂಗಳು ಉಚಿತ ಡೇಟಾವನ್ನು ಒದಗಿಸಿತು ಮತ್ತು ನಂತರ ಮಾತ್ರ ತುಲನಾತ್ಮಕವಾಗಿ ಸಾಧಾರಣ ಬೆಲೆಗಳನ್ನು ಪರಿಚಯಿಸಿತು ಎಂದು ಕಾಂತರ್‌ನ ಗ್ಲೋಬಲ್ ಆrಚnಛಘ ಸಂಶೋಧನಾ ನಿರ್ದೇಶಕ ಮಾರ್ಟಿನ್ ಗೆರಿಯೇರಿಯಾ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ