ಪಾನ್ಗೆ ಆಧಾರ್ ಜೋಡಣೆ ಇಂದು ಕೊನೇ ದಿನ: ನೀವೇನು ಮಾಡಬೇಕು?
Team Udayavani, Aug 31, 2017, 11:29 AM IST
ಹೊಸದಿಲ್ಲಿ : ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಜೋಡಿಸುವ ಗಡುವು ಇಂದು ಗುರುವಾರ ಮುಗಿಯುತ್ತದೆ. ಈ ಹಿಂದೆ ಅಂತಿಮ ಗಡುವನ್ನು ವಿಸ್ತರಿಸಿ ಅದನ್ನು ಆಗಸ್ಟ್ 31ಕ್ಕೆ ನಿಗದಿಸಲಾಗಿತ್ತು.
ನಿಮ್ಮ ಪಾನ್ ಕಾರ್ಡ್ಗೆ ಆಧಾರ್ ನಂಬರ್ ಜೋಡಣೆ ಆಗಿದೆಯೇ ಇಲ್ಲವೆ ಎಂಬುದನ್ನು ತಿಳಿಯಲು ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ ಸಂದರ್ಶಿಸಿ ಅಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗಬೇಕು.
ಒಂದೊಮ್ಮೆ ನಿಮ್ಮ ಪಾನ್ ಕಾರ್ಡ್ಗೆ ಆಧಾರ್ ನಂಬರ್ ಜೋಡಣೆ ಆಗಿಲ್ಲದಿದ್ದರೆ ಮೊತ್ತ ಮೊದಲಾಗಿ ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ ಸಂದರ್ಶಿಸಿ ಅಲ್ಲಿ ನೋಂದಣೆ ಮಾಡಿಕೊಳ್ಳಬೇಕು.
ನಿಮ್ಮ ಲಾಗಿನ್ ಐಡಿ, ಪಾಸ್ವರ್ಡ್ ಮತ್ತು ಜನ್ಮ ದಿನಾಂಕ ವಿವರಗಳನ್ನು ತುಂಬಿ ಒಳಪ್ರವೇಶಿಸಬೇಕು.
ಸೈಟ್ಗೆ ಲಾಗಿನ್ ಆದೊಡನೆಯೇ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಇದು ನಿಮಗೆ ಪಾನ್ ಮತ್ತು ಆಧಾರ್ ಕಾರ್ಡ್ ನಂಬರ್ ಜೋಡಿಸಲು ನೆರವಾಗುತ್ತದೆ.
ಒಂದೊಮ್ಮೆ ನಿಮಗೆ ಈ ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳದಿದ್ದರೆ ಆಗ ನೀವು “ಪ್ರೊಫೈಲ್ ಸೆಟ್ಟಿಂಗ್’ ಕ್ಲಿಕ್ ಮಾಡಿ ಬಳಿಕ “ಲಿಂಗ್ ಆಧಾರ್’ ಕ್ಲಿಕ್ ಮಾಡಬೇಕು.
ನಿಮ್ಮ ಆಧಾರ್ ಕಾರ್ಡ್ ನಂಬರ್ ಕಾಣಿಸಿಕೊಂಡಾಗ ಅಲ್ಲಿ ಪ್ರತ್ಯಕ್ಷವಾಗುವ ಮಾಹಿತಿಗಳನ್ನು ನೀವು ಪರಿಶೀಲಿಸಬೇಕು.
ವಿವರಗಳು ತಾಳೆಯಾದರೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಬೇಕು ಮತ್ತು “ಲಿಂಕ್ ಆಧಾರ್’ ಬಟನ್ ಕ್ಲಿಕ್ ಮಾಡಬೇಕು.
ಆಗ ಒಂದೊಮ್ಮೆ ವಿವರಗಳು ತಾಳೆಯಾಗದಿದ್ದರೆ ಆಗ ಬಳಕೆದಾರನಿಗೆ ಅದು “ಆಧಾರ್ ಅಥವಾ ಪಾನ್ನಲ್ಲಿನ ಮಾಹಿತಿಗಳನ್ನು ತಿದ್ದುಪಡಿಮಾಡಿಕೊಳ್ಳಿ’ ಎಂದು ಸೂಚಿಸುತ್ತದೆ.
ಮಾಹಿತಿಗಳು ತಾಳೆಯಾದಲ್ಲಿ, “ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಪಾನ್ ಕಾರ್ಡ್ಗೆ ಯಶಸ್ವಿಯಾಗಿ ಜೋಡಿಸಲಾಗಿದೆ’ ಎಂಬ ಮಾಹಿತಿ ಕಂಪ್ಯೂಟರ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್