ಎರಡು ದಿನಗಳ ಕುಸಿತಕ್ಕೆ ಕೊನೆಗೂ ಬ್ರೇಕ್: ಮುಂಬಯಿ ಶೇರು ಜಿಗಿತ
Team Udayavani, Aug 4, 2017, 4:44 PM IST
ಮುಂಬಯಿ : ಕೊನೇ ತಾಸಿನಲ್ಲಿ ನಡೆದ ಭರಾಟೆಯ ಶೇರು ಖರೀದಿಯ ಬಲದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಕಳೆದ ಎರಡು ದಿನಗಳ ನಿರಂತರ ಹಿನ್ನಡೆಗೆ ತಡೆ ನೀಡಿ ದಿನದ ವಹಿವಾಟನ್ನು 87 ಅಂಕಗಳ ಏರಿಕೆಯೊಂದಿಗೆ 32,325.41 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.75 ಅಂಕಗಳ ಮುನ್ನಡೆಯನ್ನು ದಾಖಲಿಸಿದ ದಿನದ ವಹಿವಾಟನ್ನು 10,066.40 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಗ್ರಾಹಕ ವಸ್ತುಗಳು, ತೈಲ ಮತ್ತು ಅನಿಲ, ಆಟೋ ರಂಗದ ಶೇರುಗಳು ದಿನಾಂತ್ಯದ ವೇಳೆಗೆ ಉತ್ತಮ ಖರೀದಿಯನ್ನು ಕಂಡು ಸೆನ್ಸೆಕ್ಸ್ ಮತ್ತು ನಿಫ್ಟಿಯನ್ನು ಎತ್ತಿ ಹಿಡಿದವು.
ವಾರಂತ್ಯದ ನೆಲೆಯಲ್ಲಿ ಹೇಳುವುದಾದರೆ ಇಂದು ಶುಕ್ರವಾರ ಬಿಎಸ್ಇ ಶೇರು ಸೂಚ್ಯಂಕ 15.53 ಅಂಕಗಳ ಏರಿಕೆಯನ್ನು ದಾಖಲಿಸಿ ನಿರಂತರ ಐದನೇ ವಾರದಲ್ಲಿ ಲಾಭವನ್ನು ಕಂಡಿದೆ. ಎನ್ಎಸ್ಇ ಕೂಡ 51.90 ಅಂಕಗಳ ವಾರಾಂತ್ಯದ ಮುನ್ನಡೆಯನ್ನು ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್