ಎಲ್ಐಸಿ ಷೇರು ಮೌಲ್ಯ ಭಾರೀ ಕುಸಿತ; ಹೂಡಿಕೆದಾರರಿಗೆ ನಿರಾಸೆ
Team Udayavani, Jun 6, 2022, 8:10 PM IST
ಮುಂಬೈ: ಎಲ್ಐಸಿ ಐಪಿಒ ಬಿಡುಗಡೆ ಆದಾಗಿನಿಂದಲೂ ಹೂಡಿಕೆದಾರರಿಗೆ ನಿರಾಸೆ ಮುಂದುವರಿದಿದೆ.
ಸೋಮವಾರ ಮತ್ತೆ ಭಾರತೀಯ ಜೀವ ವಿಮಾ ನಿಗಮದ ಷೇರು ಮೌಲ್ಯ ಸಾರ್ವಕಾಲಿಕ ಕುಸಿತ ದಾಖಲಿಸಿದ್ದು, ಪ್ರತಿ ಷೇರಿನ ದರ 782.45 ರೂ.ಗೆ ತಲುಪಿದೆ.
ಅಂದರೆ ಐಪಿಒ ಬಿಡುಗಡೆಯ ದರ(949 ರೂ.)ಕ್ಕಿಂತ ಶೇ.17.55ರಷ್ಟು ಕುಸಿತ ಕಂಡಿದೆ.ಕಳೆದ 6 ಸೆಷನ್ಗಳಲ್ಲೂ ಎಲ್ಐಸಿ ಷೇರು ಮೌಲ್ಯ ಸತತ ಕುಸಿತ ಕಾಣುತ್ತಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂ.ಗಿಂತ ಕೆಳಗಿಳಿದಿದೆ. ಸೋಮವಾರ ಎಲ್ಐಸಿ ಮಾರುಕಟ್ಟೆ ಮೌಲ್ಯ 4.98 ಲಕ್ಷ ಕೋಟಿ ರೂ. ಆಗಿದೆ. ಐಪಿಒ ಮಾರಾಟ ಆರಂಭವಾದ ದಿನ(949 ರೂ.ಗಳಿದ್ದಾಗ) ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿತ್ತು.
ಪರಾಮರ್ಶೆ ಆರಂಭ:
ಈ ನಡುವೆ, ಆರ್ಬಿಐನ ಹಣಕಾಸು ಪರಾಮರ್ಶೆ ಸಮಿತಿಯ 3 ದಿನಗಳ ಸಭೆ ಸೋಮವಾರ ಆರಂಭವಾಗಿದೆ. ಈ ಬಾರಿಯೂ ಸಾಲದ ಮೇಲಿನ ಬಡ್ಡಿ ದರವನ್ನು ಸಮಿತಿ ಏರಿಕೆ ಮಾಡುವ ಸಾಧ್ಯತೆಯಿರುವ ಕಾರಣ, ಷೇರು ಮಾರುಕಟ್ಟೆ ಹೂಡಿಕೆದಾರರು ಮತ್ತು ಗೃಹ, ವಾಹನ ಸಾಲ ಮಾಡಿದವರು ಸಮಿತಿಯ ನಿರ್ಧಾರದ ಕಡೆಗೆ ಗಮನ ನೆಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್