590 ಅಂಕ ಕುಸಿತ ಕಂಡ ಮುಂಬೈ ಶೇರುಪೇಟೆ ಸೆನ್ಸೆಕ್ಸ್, ನಿಫ್ಟಿ 10,740ಕ್ಕೆ ಕುಸಿತ

Team Udayavani, Aug 22, 2019, 5:03 PM IST

ಮುಂಬೈ: ದೇಶದ ಆರ್ಥಿಕ ಪರಿಸ್ಥಿತಿ ಕುಸಿಯಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆಯ ಮೂರನೇ ದಿನವಾದ ಗುರುವಾರದ ವಹಿವಾಟಿನಲ್ಲಿಯೂ ಭಾರೀ ಪ್ರಮಾಣದ ಕುಸಿತ ಕಂಡಿದೆ.

ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 587.44 ಅಂಕಗಳ ಕುಸಿತದೊಂದಿಗೆ 36, 472.93 ಅಂಕಗಳೊಂದಿಗೆ ವಹಿವಾಟು ಮುಕ್ತಾಯಕಂಡಿದೆ.

ಅಲ್ಲದೇ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 177.35 ಅಂಕಗಳ ನಷ್ಟದೊಂದಿಗೆ 10,741.35 ಅಂಕಗಳೊಂದಿಗೆ ವಹಿವಾಟು ಅಂತ್ಯಕಂಡಿದೆ.

587 ಅಂಕಗಳ ನಷ್ಟದಿಂದ ಯೆಸ್ ಬ್ಯಾಂಕ್ ಶೇರುಗಳು ಶೇ.13.93ರಷ್ಟು ಕುಸಿತ ಕಂಡಿದ್ದು, ಇದರಿಂದಾಗಿ ಯೆಸ್ ಬ್ಯಾಂಕ್ ಶೇರುದಾರರು ಭಾರೀ ನಷ್ಟ ಕಂಡಂತಾಗಿದೆ. ಇನ್ನುಳಿದಂತೆ ವೇದಾಂತ, ಬಜಾಜ್ ಫೈನಾನ್ಸ್, ಓಎನ್ ಜಿಸಿ, ಎಸ್ ಬಿಐ, ಹೀರೋಮೋಟೋ ಕಾರ್ಪೋರೇಶನ್, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎನ್ ಟಿಪಿಸಿ, ಎಚ್ ಡಿಎಫ್ ಸಿ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ನ ಶೇರುಗಳು ಶೇ.7.76ರಷ್ಟು ಕುಸಿತ ಕಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ