ಶೇರು ಕುಸಿತದ ನಷ್ಟ; 2 ದಿನ ಗುರುಗ್ರಾಮ್, ಮಾನೆಸರ್ ಮಾರುತಿ ಘಟಕ ಬಂದ್

Team Udayavani, Sep 4, 2019, 2:27 PM IST

ನವದೆಹಲಿ:ದೇಶದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(ಎಂಎಸ್ ಐ) ಸೆಪ್ಟೆಂಬರ್ 7 ಮತ್ತು ಸೆ.9ರಂದು ಗುರುಗ್ರಾಮ್ ಮತ್ತು ಮಾನೆಸರ್ ಕಾರು ತಯಾರಿಕಾ ಘಟಕವನ್ನು ಬಂದ್ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಹರ್ಯಾಣದ ಮಾನೆಸರ್ ಮತ್ತು ಗುರುಗ್ರಾಮ್ ಘಟಕದಲ್ಲಿ ಎರಡು ದಿನಗಳ ಕಾಲ ಯಾವುದೇ ಕಾರು ತಯಾರಿಕೆ ಕಾರ್ಯ ನಡೆಯುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆರ್ಥಿಕ ಹಿಂಜರಿಕೆ ಹಿನ್ನೆಲೆಯಲ್ಲಿ ಶೇರುಪೇಟೆಯ ಸೆನ್ಸೆಕ್ಸ್ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಮಾರುತಿಗೂ ಬಿಸಿ ಮುಟ್ಟಿದ್ದು, ಕಂಪನಿಯ ಶೇರುಗಳು ಶೇ.2.36ರಷ್ಟು ಕುಸಿತ ಕಂಡಿರುವುದಾಗಿ ಹೇಳಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಮಾರುತಿ 1,68,725 ಕಾರುಗಳನ್ನು ತಯಾರಿಸಿದ್ದು, ಈ ಬಾರಿ ಆಗಸ್ಟ್ ತಿಂಗಳಿನಲ್ಲಿ 111,370 ಕಾರುಗಳನ್ನು ತಯಾರಿಸಿದ್ದು, ಶೇ.37.7ರಷ್ಟು ಮಾರಾಟ ಪ್ರಮಾಣದಲ್ಲಿ ಇಳಿಕೆಯಾಗಿರುವುದಾಗಿ ಪ್ರಕಟಣೆಯಲ್ಲಿ ವಿವರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ