ಉತ್ಪಾದನ ಮಟ್ಟ ಹೆಚ್ಚಿಸಿದ ಎಂಜಿ ಹೆಕ್ಟರ್‌

Team Udayavani, Oct 19, 2019, 5:30 PM IST

ಎಂಜಿ ಮೋಟಾರ್‌ ಸಂಸ್ಥೆ ಇತ್ತೀಚೆಗೆ ಭಾರತದಲ್ಲಿ ಎಂಜಿ ಹೆಕ್ಟರ್‌ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದ್ದು ,ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಭೇಟೆ ಶುರು ಮಾಡಿದೆ.

ಎಂಜಿ ಹೆಕ್ಟರ್‌ ಕಾರಿನ ವಿನ್ಯಾಸಕ್ಕೆ ಗ್ರಾಹಕರು ಪುಲ್‌ ಫಿಧಾ ಆಗಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಧಿಕ ಮಟ್ಟದಲ್ಲಿ ಮಾರಾಟವಾಗುತ್ತಿದೆ.
ಮಾರಾಟ ಹೆಚ್ಚಳವಾದ ಹಿನ್ನಲೆ ತನ್ನ ಉತ್ಪದಾನೆಯ ಮಟ್ಟವನ್ನು ವಿಸ್ತರಿಸಿದ್ದು, ಎಂಜಿ ಹೆಕ್ಟರ್‌ ಉತ್ಪಾದನೆಯಲ್ಲಿ 10,000ದ ಗಡಿ ದಾಟಿದೆ ಎಂಬ ಮಾಹಿತಿ ಗುಜರಾತ್‌ನ ಬರೋಡಾದಲ್ಲಿರುವ ಕಂಪನಿಯ ಸ್ಥಾವರದಿಂದ ಸೋರಿಕೆಯಾಗಿದೆ.

ಕಳೆದ ತಿಂಗಳಿನ ಪತ್ರಿಕಾ ಪ್ರಕಟನೆಯಲ್ಲಿ ಉತ್ಪಾದನೆಯ ಮಟ್ಟ 5,000 ದಾಟಿದೆ ಎಂದು ಎಂಜಿ ಇಂಡಿಯಾ ಕಂಪನಿ ಘೋಷಿಸಿತ್ತು. ಆದರೆ ಇದೀಗ ಬೇಡಿಕೆ ಹೆಚ್ಚಾಗಿದ್ದು. ಮಾಸಿಕ ಉತ್ಪಾದನೆ ಮಟ್ಟವನ್ನು 1500 ರಿಂದ 3,000 ಯುನಿಟ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಎಂಜಿ ಮೋಟಾರ್ಸ್‌ನ ಹೆಕ್ಟರ್‌ 5 ಮೊದಲ ಕಾರು ಇದಾಗಿದ್ದು , ಎಂಜಿ ಹೆಕ್ಟರ್‌ 5 ಸೀಟ್‌ಗಳೊಂದಿಗೆ ಮಧ್ಯಮ ಗಾತ್ರವನ್ನು ಹೊಂದಿದೆ. ಹಾಗೇ ಇದರ ಮಾರಾಟದಲ್ಲಿ ಸ್ಟೈಲ…, ಸೂಪರ್‌, ಸ್ಮಾರ್ಟ್‌ ಮತ್ತು ಶಾರ್ಪ್‌ ಎಂಬ ನಾಲ್ಕು ವಿಭಾಗಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಇನ್ನೂ ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಹೆಕ್ಟರ್‌ ಕೇವಲ ಒಂದು ತಿಂಗಳಲ್ಲಿ 1,508 ಯುನಿಟ್‌ಗಳ ಮಾರಾಟ ಮಾಡಿದ್ದು, ಆಗಸ್ಟ್‌ ತಿಂಗಳಲ್ಲಿ 2,600 ಹೆಚ್ಚು ಯುನಿಟ್‌ಗಳು ಸೇಲ್‌ ಆಗಿದ್ದವು.

ಈ ತಿಂಗಳಿನಲ್ಲಿ ಬುಕ್ಕಿಂಗ್‌ ಪ್ರಕ್ರಿಯೆಯಲ್ಲೂ ಹೆಚ್ಚಳ ಕಂಡು ಬಂದಿದ್ದು, 40,000 ಕಾರು ಬುಕ್‌ ಆಗಿವೆ. ಈ ಹಿನ್ನಲೆ 6,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಿಸಲಾಗಿದೆ. ಜತೆಗೆ ಈ ತಿಂಗಳ ಕೊನೆಯಲ್ಲಿ 3,000 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.

ಕಾರಿನ ವಿಶೇಷತೆಗಳು
ಎಂಜಿ ಹೆಕ್ಟರ್‌ ಕಾರು ಆವೃತ್ತಿಯಲ್ಲಿ 1.5 ಲೀಟರ್‌ನ ಪೆಟ್ರೋಲ್‌ ಎಂಜಿನ್‌ ಹೊಂದಿದ್ದು, 6-ಸ್ಪೀಡ್‌ ಮ್ಯಾನುವಲ್‌ ಮತ್ತು ಡ್ಯುಯಲ್‌ ಕ್ಲಚ್‌ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ ಇದೆ. ಜತೆಗೆ 143ಬಿಹೆಚ್‌ಪಿ ಪವರ್‌ ಮತ್ತು 250ಎನ್‌ಎಂ ಟಾರ್ಕ್‌ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್‌ ಮಾದರಿಯಲ್ಲಿ 2.0 ಲೀಟರ್‌ ಟಬೋಜಾಜx…ì ಎಂಜಿನ್‌ ಜತೆಗೆ 6-ಸ್ಪೀಡ್‌ ಮ್ಯಾನುವಲ್‌ ಗೇರ್‌ ಬಾಕ್ಸ್‌ ಮೂಲಕ 170ಬಿಹೆಚ್‌ಪಿ ಪವರ್‌ ಮತ್ತು 350 ಎನ್‌ಎಂ ಟಾರ್ಕ್‌ ಉತ್ಪಾದಿಸುವ ಗುಣ ಹೊಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ