ಹೊಸ ನೀತಿಯ ದುರ್ಬಳಕೆ: ಟ್ರಾಯ್‌

Team Udayavani, Aug 17, 2019, 5:57 AM IST

ನವದೆಹಲಿ: ಟಿವಿ ಚಾನೆಲ್ಗಳ ಬೆಲೆ ನಿಗದಿಸುವಲ್ಲಿ ಕಳೆದ ವರ್ಷ ಜಾರಿಗೆ ತಂದ ಹೊಸ ನೀತಿಯನ್ನು ಪ್ರಸಾರಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಬೆಲೆ ಹಾಗೂ ಚಾನೆಲ್ಗಳ ಆಯ್ಕೆಗೆ ಸಂಬಂಧಿಸಿದಂತೆ ಎದುರಾದ ಸಮಸ್ಯೆಗಳು ಗಮನಕ್ಕೆ ಬಂದ ನಂತರದಲ್ಲಿ ಸಂಬಂಧಿತ ಎಲ್ಲ ಸಂಸ್ಥೆಗಳ ಅಭಿಪ್ರಾಯವನ್ನು ಟ್ರಾಯ್‌ ಕೇಳಿದೆ. 2018 ಡಿಸೆಂಬರ್‌ 29 ರಂದು ಟ್ರಾಯ್‌ ಹೊಸ ನಿಯಮ ಜಾರಿಗೆ ತಂದಿತ್ತು. ಇದಕ್ಕೆ ದೇಶಾದ್ಯಂತ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು.

ಹೊಸ ನೀತಿಯಲ್ಲಿ ತಮ್ಮ ಇಷ್ಟದ ಚಾನೆಲ್ಗಳನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶ ನೀಡಿತ್ತು. ಇದರಿಂದಾಗಿ ಟಿವಿ ಚಾನೆಲ್ ಬೆಲೆಗಳಲ್ಲಿ ಪಾರದರ್ಶಕತೆ ಉಂಟಾಗಿತ್ತು. ಇಡೀ ವಲಯದಲ್ಲಿ ವಹಿವಾಟು ಪ್ರಕ್ರಿಯೆ ಸರಾಗವಾಗಿರುವುದು ಮತ್ತು ವಿವಿಧ ಸಂಸ್ಥೆಗಳ ಮಧ್ಯೆ ವಿವಾದಗಳನ್ನು ಕಡಿಮೆ ಮಾಡಿರುವುದು ಸೇರಿದಂತೆ ಹಲವು ಅನುಕೂಲಗಳಾಗಿದ್ದವು. ಆದರೆ ಗ್ರಾಹಕರಿಗೆ ಟಿವಿ ಚಾನೆಲ್ಗಳನ್ನು ವೀಕ್ಷಿಸಲು ಆಯ್ಕೆಗಳ ಕೊರತೆ ಇದ್ದವು ಎಂದು ಟ್ರಾಯ್‌ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ