ಬರಲಿದೆ ಮೊಟೊರೊಲಾ ಫ್ಲೆಕ್ಸಿಬಲ್‌ ಫೋನ್‌

ಮೊಟೊರೊಲಾ ರೇಝರ್‌ ಶೀಘ್ರ ಭಾರತಕ್ಕೆ

Team Udayavani, Nov 16, 2019, 4:04 PM IST

ಮಡಚುವ ಫೋನ್‌ಗಳ ಜಮಾನ ಇದೀಗ ಶುರುವಾಗಿದೆ. ಅದಕ್ಕೆ ತಕ್ಕಂತೆ ಮೊಟೊರೊಲಾ ಕೂಡ ಹೊಸ ಮಾದರಿಯ ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈಗ ಮಾರುಕಟ್ಟೆಗೆ ಬರುತ್ತಿರುವ ಮಡಚುವ ಫೋನ್‌ಗಳು ಬಿಡಿಸಿದಾಗ ಟ್ಯಾಬ್‌ ರೀತಿ ಆಗುತ್ತವೆ. ಆದರೆ ಮೊಟೊರೊಲಾ ರೇಝರ್‌ ಹಾಗಲ್ಲ. ಇದು ಫ್ಲಿಪ್‌ ಫೋನ್‌ ಮಾದರಿಯಲ್ಲೇ ಇದ್ದು, ಬಿಡಿಸಿದರೆ ತುಸು ಉದ್ದನೆಯ ಸಾಮಾನ್ಯ ಸ್ಮಾರ್ಟ್‌ ಫೋನ್‌ನಂತೆ, ಮಡಚಿದರೆ ಫೀಚರ್‌ ಫೋನ್‌ನಂತೆ ಕಾಣಿಸುತ್ತದೆ. ಮೊಟೊರೊಲಾ ರೇಝರ್‌ ಎನ್ನುವುದು ಹಿಂದೆ ಫ್ಲಿಪ್‌ ಫೋನ್‌ ಆಗಿದ್ದು ಪ್ರಸಿದ್ಧವಾಗಿತ್ತು. ಇದನ್ನೇ ಗಮನದಲ್ಲಿಟ್ಟುಕೊಂಡು ಹೊಸ ಸ್ಮಾರ್ಟ್‌ ಫೋನ್‌ ರೂಪಿಸಲಾಗಿದೆ. ಜತೆಗೆ ಹೊರಭಾಗದಲ್ಲಿ ಪುಟಾಣಿ ಡಿಸ್‌ಪ್ಲೇ ಕೂಡ ಇದ್ದು ನೋಟಿಫಿಕೇಶನ್‌, ಗೂಗಲ್‌ ಅಸಿಸ್ಟೆಂಟ್‌, ಮ್ಯೂಸಿಕ್‌ ಕೇಳಲು ಅನುಕೂಲಕರವಾಗಿದೆ. ಇದರ ಬೆಲೆ ಭಾರತದಲ್ಲಿ ಸುಮಾರು 1.07 ಲಕ್ಷ ರೂ. ಆಗಿರಬಹುದೆಂಬ ಅಂದಾಜಿದೆ. ಮುಂದಿನ ವರ್ಷ ಜನವರಿ 9ರಿಂದ ಇದು ಮಾರುಕಟ್ಟೆಗೆ ಬರಲಿದೆ.

ಥೇಟ್‌ ಹಳೆಯ ಲುಕ್‌
ಮೊಟೊರೊಲಾ ರೇಝರ್‌ ಹಳೆಯ ಲುಕ್‌ ಅನ್ನು ಕಾಯ್ದಿರಿಸಿದೆ. ಕಾರಣ ಗ್ರಾಹಕರು ಇಂತಹದ್ದೊಂದು ಮಾದರಿಯನ್ನು ಬಹಳಷ್ಟು ಇಷ್ಟ ಪಟ್ಟಿದ್ದರು. ಅದಕ್ಕಾಗಿಯೇ ಮತ್ತೆ ರೇಝರ್‌ ಅನ್ನು ಸ್ಮಾರ್ಟ್‌ ಫೋನ್‌ ರೂಪದಲ್ಲಿ ಹೊರತರಲಾಗಿದೆ. ಹೊಸ ಫೋನ್‌ನಲ್ಲಿ 6.2 ಇಂಚಿನ ಫ್ಲೆಕ್ಸಿಬಲ್‌ ಎಚ್‌ಡಿ ಡಿಸ್ಪೆ ಇದೆ. ಇದು ಮಧ್ಯಭಾಗದಿಂದ ಮಡಚುವಂತೆ ಇದೆ. ಸ್ಕ್ರೀನ್‌ ಮಡಚಿದರೂ ಸ್ಕ್ರೀನ್‌ ಮಧ್ಯೆ ತುಂಡಾದಂತೆ ಆಗುವುದಿಲ್ಲ. ಜತೆಗೆ ಹಲವು ಬಾರಿ ಉಪಯೋಗಿಸಿದರೂ ನೆರಿಗೆ ಬಿದ್ದಂತೆ ಆಗುವುದಿಲ್ಲ. ಅದೇ ಈ ಫೋನ್‌ನ ವಿಶೇಷ. ಇನ್ನು ಫೋನ್‌ನ ಮುಂಭಾಗದಲ್ಲಿರುವ ಕ್ವಿಕ್‌ ಆಕ್ಸೆಸ್‌ ಸೆಕೆಂಡರಿ ಡಿಸ್ಪೆ 2.7 ಇಂಚಿನದ್ದಾಗಿದೆ. ಇದನ್ನು ಸೆಲ್ಫಿ ತೆಗೆಯಲೂ ಬಳಸಿಕೊಳ್ಳಬಹುದು.

ಕೆಮರಾ
16 ಮೆಗಾಪಿಕ್ಸೆಲ್‌ನ ಪ್ರೈಮರಿ ಕೆಮರಾ ಇದರಲ್ಲಿದೆ. ಇದರ ವಿಶೇಷವೇನೆಂದರೆ, ಫೋನ್‌ ಮಡಚಿದಾಗ ಎದುರಿಗೆ ಬರುತ್ತದೆ. ಇದರಿಂದ ಸೆಲ್ಫಿà ಕೂಡ ತೆಗೆದುಕೊಳ್ಳಬಹುದು. ಇದರೊಂದಿಗೆ ಫೋನ್‌ ತೆರೆದಾಗ ಡಿಸ್ಪೆ$Éà ಮೇಲ್ಫಾಗದಲ್ಲಿ 5 ಮೆಗಾಪಿಕ್ಸೆಲ್‌ನ ಕೆಮರಾ ಕೂಡ ಇದೆ.

ತಾಂತ್ರಿಕತೆ
ಆಕ್ಟಾ ಕೋರ್‌ ಸ್ನಾಪ್‌ಡ್ರಾಗನ್‌ 710 ಪ್ರೊಸೆಸರ್‌ ಇರುವ ಈ ಫೋನ್‌ನಲ್ಲಿ 6 ಜಿಬಿ ರಾಮ್‌, 128 ಜಿಬಿ ರೋಮ್‌ ಇದೆ. ಆ್ಯಂಡ್ರಾಯಿಡ್‌ 9.0 ಪೈ ಒಎಸ್‌ ಹೊಂದಿದ್ದು, 2510 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಇದೆ. 5.0 ಬ್ಲೂಟೂತ್‌ ಹಿಂದಿದ್ದು, ಫಿಂಗರ್‌ಪ್ರಿಂಟ್‌ ಸೆನ್ಸರ್‌ನೊಂದಿಗೆ ಕೆಳಭಾಗದಲ್ಲಿ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಇದೆ. ಕೆಮರಾದ ಒಟ್ಟು ಭಾರ 205 ಗ್ರಾಂ ಆಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ