ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ “ಮೋಟೋರೊಲಾ ರೇಜರ್‌ – 2019 ‘

Team Udayavani, Nov 14, 2019, 7:25 PM IST

ಹೊಸದಿಲ್ಲಿ : ಮೋಟೋರೊಲಾ ಸಂಸ್ಥೆ ತನ್ನ ಬಹುನಿರೀಕ್ಷಿತ ಮೋಟೋರೊಲಾ ರೇಜರ್‌ – 2019 ‘ ಫೋಲೆxಬಲ್‌ ಸ್ಮಾರ್ಟ್‌ ಫೋನ್‌ ಅನ್ನು ವಿಶ್ವ ಮಾರುಕಟ್ಟೆಯಲ್ಲಿ ಅನಾವಾರಣಗೊಳಿಸಿದ್ದು, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆ ಮಾಡಲಿದೆ.

ಫ್ಲೆಕ್ಸಿಬಲ್‌ ಸ್ಕ್ರೀನ್‌ ಹೊಂದಿರುವ ಈ ಫೋನ್‌ ಮಡಚುವ ವಿನ್ಯಾಸದಾಗಿದ್ದು , ಒಎಲ್‌ಡಿ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಜತೆಗೆ 710 ಪ್ರೊಸೆಸರ್‌ ಸ್ನ್ಯಾಪ್‌ಡ್ರಾಗನ್‌ ಸೇರಿದಂತೆ ಹಲವಾರು ವಿಶಿಷ್ಟ ಫೀಚರ್ಗಳನ್ನು ಹೊಂದಿದೆ.

2.7 ಇಂಚಿನ ಡಿಸ್‌ಪ್ಲೇ
6ಜಿಬಿ ರ್ಯಾಮ್‌ ಮತ್ತು 128ಜಿಬಿ ಸ್ಟೋರೇಜ್‌ ವೇರಿಯಂಟ್‌ ಸಾಮರ್ಥ್ಯವನ್ನು ಹೊಂದಿರುವ ಈ ಫೋನ್‌ನ ಹಿಂಭಾಗದಲ್ಲಿ 2.7 ಇಂಚಿನ ಒಎಲ್‌ಇಡಿ ಡಿಸ್‌ಪ್ಲೇ ಇದ್ದು, ಮಡಚಿದಾಗಲೂ ಟೈಮ್‌ ಮತ್ತು ನೋಟಿಫೀಕೆಶನ್‌ಗಳನ್ನು ನೋಡ ಬಹುದಾಗಿದೆ.

2,510 ಎಂಎಎಚ್‌ ಬ್ಯಾಟರಿ
15 ವ್ಯಾಟ್‌ ಫಾಸ್ಟ್‌ ಚಾಜಿಂಗ್‌ ಕೆಪಾಸಿಟಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ಗೆ 2,510 ಎಂಎಎಚ್‌ ಬ್ಯಾಟರಿ ಇದ್ದು, 16 ಮೆಗಾ ಪಿಕ್ಸೆಲ್‌ ಹಿಂಬದಿ ಕ್ಯಾಮರಾ ಹಾಗೂ ಮುಂಬದಿಯಲ್ಲಿ 5 ಮೆಗಾಪಿಕ್ಸೆಲ್‌ ಕ್ಯಾಮರಾವಿದೆ.

ದುಬಾರಿ ಫೋನ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಮತ್ತು ಹವಾಯಿ ಮೇಟ್‌ ಎಕ್ಸ್‌ ಫೋಲ್ಡಬಲ್‌ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಮೋಟೋರೊಲಾ ರೇಜರ್‌ನ ಬೆಲೆ 1,499 ಡಾಲರ್‌ ಆಗಿದ್ದು, ಭಾರತದ ಮೌಲ್ಯದ ಪ್ರಕಾರ 1,08,200 ರೂ. ಇರಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ