ನಟರಾಜನ್‌ ಚಂದ್ರಶೇಖರನ್‌ ಟಾಟಾ ಸನ್ಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

Team Udayavani, Feb 21, 2017, 12:05 PM IST

ಹೊಸದಿಲ್ಲಿ : ಟಾಟಾ ಸಮೂಹದ ಮುಂಚೂಣಿ ಸಂಸ್ಥೆಯಾಗಿರುವ ಟಾಟಾ ಸನ್ಸ್‌ ಲಿಮಿಟೆಡ್‌ನ‌ ಅಧ್ಯಕ್ಷರಾಗಿ ನಟರಾಜನ್‌ ಚಂದ್ರಶೇಖರನ್‌ ಅವರಿಂದು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಕಂಪೆನಿಯ 30 ವರ್ಷಗಳ ಹಿರಿಯ ರಾಗಿರುವ ಚಂದ್ರಶೇಖರನ್‌ ಅವರು ಏಶ್ಯದ ಅತೀ ದೊಡ್ಡ ಸಾಫ್ಟ್ ವೇರ್‌ ಉತ್ಪಾದನ ಸಂಸ್ಥೆಯ ನಿರ್ಮಾತೃರಾಗಿದ್ದಾರೆ. ಅವರೀಗ ನೂರು ಶತ ಕೋಟಿ ಡಾಲರ್‌ಗಳ ಟಾಟಾ ಸನ್ಸ್‌ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ತಮ್ಮ ಪೂರ್ವಾಧಿಕಾರಿ ಸೈರಸ್‌ ಮಿಸ್ತ್ರಿ  ಅವರ ಪದಚ್ಯುತಿ ನಡೆದ ಕಳೆದ ನಾಲ್ಕು ತಿಂಗಳಲ್ಲಿ ಭಾರೀ ದೊಡ್ಡ ಬೋರ್ಡ್‌ ರೂಮ್‌ ವಿಪ್ಲವನ್ನು ಕಂಡ ಟಾಟಾ ಸಮೂಹಕ್ಕೆ ಅಧ್ಯಕ್ಷರಾಗುವ ಮೂಲಕ ಚಂದ್ರಶೇಖರನ್‌ ಅವರು ಈಗಿನ್ನು ಟಾಟಾ ಸಮೂಹದ ದುರ್ಬಲ ಕಂಪೆನಿಗಳನ್ನು ಪುನಶ್ಚೇತನ ಗೊಳಿಸುವ ಹಾಗೂ ಒಟ್ಟಾರೆ ಸಮೂಹದ ಅಭಿವೃದ್ಧಿಯನ್ನು ಕ್ಷಿಪ್ರಗತಿಯಲ್ಲಿ ಸಾಧಿಸುವ ಗುರುತರ ಹೊಣೆಗಾರಿಕೆಯನ್ನು ಹೊಂದಿದ್ದಾರೆ.  

ವಿಶ್ವ ವಿಖ್ಯಾತ ಟಾಟಾ ಸಂಸ್ಥೆಯು 1868ರಲ್ಲಿ ಸ್ಥಾಪನೆಗೊಂಡಿದ್ದು ಹಲವು ದೃಷ್ಟಿಯಿಂದ ಅದಕ್ಕೆ ಐತಿಹಾಸಿಕ ಮಹತ್ವವಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ