ಇನ್ಫೋಸಿಸ್‌ ನೂತನ ಅಧ್ಯಕ್ಷ ನಿಲೇಕಣಿ ಯಾವುದೇ ಸಂಬಳ ಪಡೆಯಲ್ಲ

Team Udayavani, Sep 2, 2017, 11:06 AM IST

ಹೊಸದಿಲ್ಲಿ : ಹೊಸದಾಗಿ ನೇಮಕಗೊಂಡಿರುವ ಇನ್‌ಪೋಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ತಮ್ಮ ಈ ಹುದ್ದೆಯಲ್ಲಿ ಕಂಪೆನಿಯಿಂದ ಯಾವುದೇ ಸಂಬಳ ಪಡೆಯುವುದಿಲ್ಲ ಎಂದು ಭಾರತೀಯ ಐಟಿ ದಿಗ್ಗಜ ಇನ್‌ಫೋಸಿಸ್‌ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ತಿಳಿಸಿದೆ. 

62ರ ಹರೆಯದ ನಿಲೇಕಣಿ ಅವರು ಪ್ರಮೋಟರ್‌ ಕೆಟಗರಿಯವರಾಗಿದ್ದು ಅವರು ಇನ್‌ಫೋಸಿಸ್‌ ಕಂಪೆನಿಯ ಶೇ.0.93 ಶೇರುಗಳನ್ನು ಹೊಂದಿದವರಾಗಿದ್ದಾರೆ. 

2014ರಲ್ಲಿ ನಂದನ್‌ ನಿಲೇಕಣಿ ಅವರು ಕಂಪೆನಿಯ ನಿರ್ದೇಶಕರಾಗಿ ತಮ್ಮ ಸೇವೆಯನ್ನು ಮುಗಿಸಿದ್ದ ಸಂದರ್ಭದಲ್ಲಿ ಅವರು ಪಡೆದಿದ್ದ ಕೊನೇ ವೇತನ 34 ಲಕ್ಷ ರೂ.ಗಳಾಗಿತ್ತು ಎಂದು ಇನ್‌ಫೋಸಿಸ್‌, ಬಿಎಸ್‌ಇಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ. 

ಇದೇ ವೇಳೆ ಇನ್‌ಫೋಸಿಸ್‌ ಕಂಪೆನಿಯ ತಾತ್ಕಾಲಿಕ  ಸಿಇಓ ಆಗಿರುವ ಯು ಬಿ ಪ್ರವೀಣ್‌ ರಾವ್‌ ಅವರು, ತಾವು ಚೀಫ್ ಆಪರೇಟಿಂಗ್‌ ಆಫೀಸರ್‌ಗೆ ಪಡೆಯುತ್ತಿದ್ದ ಸಂಬಳವನ್ನೇ ಮುಂದುವರಿದು ಪಡೆಯಲಿದ್ದಾರೆ ಎಂದು ಕಂಪೆನಿ ತಿಳಿಸಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ