ಇಂದಿನಿಂದ ನೆಫ್ಟ್ ಗಿಲ್ಲ ಶುಲ್ಕ

Team Udayavani, Jul 1, 2019, 5:24 AM IST

ಹೊಸದಿಲ್ಲಿ: ಆರ್‌ಟಿಜಿಎಸ್‌, ನೆಫ್ಟ್ ಮೂಲಕ ಹಣ ವರ್ಗಾವಣೆಗೆ ಸೋಮವಾರದಿಂದ ಶುಲ್ಕವಿರುವುದಿಲ್ಲ. ಇಂಥ ವಹಿವಾಟಿಗೆ ಯಾವುದೇ ಶುಲ್ಕ ಹೇರದೇ ಇರಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಇದರ ಅನುಕೂಲತೆಯನ್ನು ಜು.1ರಿಂದ ಗ್ರಾಹಕರಿಗೆ ತಲುಪಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ.

ಅದರಂತೆ, ಸೋಮವಾರದಿಂದ ನೀವು ನೆಟ್‌ ಬ್ಯಾಂಕಿಂಗ್‌ನಲ್ಲಿ ನಡೆಸುವ ಆರ್‌ಟಿಜಿಎಸ್‌, ನೆಫ್ಟ್ ವಹಿವಾಟಿಗೆ ಶುಲ್ಕ ತೆರಬೇಕಾಗಿರುವುದಿಲ್ಲ. ಇದೇ ವೇಳೆ, ಜುಲೈನಿಂದ ಸೆಪ್ಟಂಬರ್‌ವರೆಗಿನ ತ್ತೈಮಾಸಿಕ ಅವಧಿಯಲ್ಲಿ ಎನ್‌ಎಸ್‌ಸಿ, ಪಿಪಿಎಫ್ ಸಹಿತ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇ. 0.1 ಕಡಿತಗೊಳಿಸಿ ಹೊರಡಿಸಲಾಗಿದ್ದ ಆದೇಶವೂ ಸೋಮವಾರದಿಂದ ಜಾರಿಯಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ