ಹೊಸ ವರ್ಷಕ್ಕೆ ಈ ಕಾರುಗಳು ದುಬಾರಿಯಾಗಲಿವೆ

Team Udayavani, Dec 11, 2019, 8:05 PM IST

ಹೊಸದಿಲ್ಲಿ: ಕಳೆದ ಕೆಲವು ತಿಂಗಳಿನಿಂದ ಆರ್ಥಿಕ ವಲಯದಲ್ಲಾಗುತ್ತಿರುವ ಏರಿಳಿತ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಹಿಂಜರಿತದ ಬಿಸಿ ದೇಶದ ವಾಹನೋದ್ಯಮಕ್ಕೆ ತುಸು ಹೆಚ್ಚಾಗಿಯೇ ತಗ್ಗಿದ್ದು, ದಿನದಿಂದ ದಿನಕ್ಕೆ ಆಟೋ ಮೊಬೈಲ್‌ ಕ್ಷೇತ್ರ ಕುಸಿತ ಕಾಣುತ್ತಿದೆ.

ಆದರೆ ಬೆಳವಣಿಗೆ ಕುಂಠಿತವಾಗುತ್ತಿರುವ ಸಂದರ್ಭದಲ್ಲಿ ಹಲವಾರು ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಬೆಲೆ ಹೆಚ್ಚಳ ನಿರ್ಧಾರ ಕೈಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ವ್ಯಾಪಾರ ವಹಿವಾಟು ಚಟುವಟಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಯನ್ನಿಟ್ಟುಕೊಂಡಿವೆ.

ಹಿನ್ನಡೆ ಅನುಭವಿಸಿರುವ ಕಾರಣ ನೀಡಿ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಜನವರಿಯಿಂದ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಈಗಾಗಲೇ ಜನವರಿಯಿಂದ ಬೆಲೆ ಹೆಚ್ಚಳ ಮಾಡುವುದಾಗಿ ಘೊಷಿಸಿದೆ.

ಈ ಕಾರುಗಳ ಬೆಲೆಯಲ್ಲಿಯೂ ಹೆಚ್ಚಳ
ಮಾರುತಿ ಸುಜುಕಿ ಬೆಲೆ ಹೆಚ್ಚಳ ಯೋಜನೆ ಕುರಿತು ಘೋಷಣೆ ಮಾಡಿದ ಬೆನ್ನಲ್ಲೇ ಮತ್ತಷ್ಟು ಕಾರು ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡುವುದಾಗಿ ತಿಳಿಸಿವೆ. ನಿಸಾನ್‌ ಮೋಟಾರ್‌ನ ದೇಶಿಯ ಕಾರುಗಳ ಬೆಲೆಯಲ್ಲಿ ಜನವರಿಯಿಂದ ಶೇ.5ರಷ್ಟು ಅಧಿಕವಾಗಲಿದ್ದು, ಉತ್ಪಾದನೆಯ ವೆಚ್ಚವನ್ನು ಸರಿದೂಗಿಸಲು ಬೆಲೆ ಹೆಚ್ಚಳಕ್ಕೆ ಮುಂದಾಗಿರುವುದಾಗಿ ನಿಸಾನ್‌ ಹೇಳಿದೆ.

ಟಾಟಾ ಮೋಟಾರ್ಸ್‌ ಹಾಗೂ ಹ್ಯುಂಡೈ
ಇದರ ಜತೆಯಲ್ಲಿ ಟಾಟಾ ಮೋಟಾರ್ಸ್‌ ಹಾಗೂ ಹ್ಯುಂಡೈ ಕಾರುಗಳ ದರದಲ್ಲಿಯೂ ಏರಿಕೆಯಾಗಲಿದ್ದು, ನಷ್ಟವನ್ನು ಸರಿದೂಗಿಸುವ ಹಾಗೂ ಉತ್ಪಾದನಾ ವೆಚ್ಚವನ್ನು ಸಮದೂಗಿಸಲು ಈ ಎಲ್ಲಾ ಕಾರು ಉತ್ಪಾದಕ ಕಂಪನಿಗಳು ಬೆಲೆ ಏರಿಕೆಯ ನೀತಿಯನ್ನು ಅನುಸರಿಸುತ್ತಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ