ಕ್ರೆಡಿಟ್ ಕಾರ್ಡ್‌ಗಿಲ್ಲ ಚಕ್ರಬಡ್ಡಿ
ಗ್ರಾಮೀಣ ಬ್ಯಾಂಕ್ ಗ್ರಾಹಕರಿಗೂ ಅನ್ವಯ
Team Udayavani, Oct 29, 2020, 6:10 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: “ಇಎಂಐ ಪಾವತಿ ಅವಧಿ ಮುಂದೂಡಿಕೆ’ (ಮೊರಟೋರಿಯಂ) ಪ್ರಯೋಜನವನ್ನು ಕೇಂದ್ರ ಸರಕಾರ ಇನ್ನಷ್ಟು ವಿಸ್ತರಿಸಿದೆ. ಕ್ರೆಡಿಟ್ ಕಾರ್ಡ್‌ನ ಸಾಲ ಬಾಕಿ ಉಳಿಸಿಕೊಂಡವರಿಗೂ ಚಕ್ರಬಡ್ಡಿ ಮನ್ನಾ ಪ್ರಯೋಜನ ದಕ್ಕಲಿದೆ.
ಮೊರಟೋರಿಯಂ ಆಯ್ಕೆ ತೆಗೆದುಕೊಳ್ಳದ ಕ್ರೆಡಿಟ್ ಕಾರ್ಡ್ ಬಳಕೆದಾರರು ಮಾರ್ಚ್ 1ರಿಂದ ಆಗಸ್ಟ್ 31ರವರೆಗೆ ಬಾಕಿ ಮೊತ್ತಕ್ಕೆ ನಿಗದಿತ ಅವಧಿಯಲ್ಲಿ ನಿರ್ದಿಷ್ಟಪಡಿಸಿದ ಕಂತು ಪಾವತಿಸಿದ್ದರೆ, ಅವರ ಸಾಲದ ಮೊತ್ತಕ್ಕೆ ಬಡ್ಡಿ ಮೇಲೆ ಬಡ್ಡಿ ಬೀಳುವುದಿಲ್ಲ. ಈಗಾಗಲೇ ಚಕ್ರಬಡ್ಡಿ ಪಾವತಿಸಿದ್ದಲ್ಲಿ ಆ ಹಣ ಖಾತೆಗೆ ಕ್ಯಾಶ್‌ಬ್ಯಾಕ್ ಆಗಲಿದೆ ಎಂದು ಆರ್‌ಬಿಐ ತಿಳಿಸಿದೆ.
ಒಂದು ವೇಳೆ ನಿಗದಿತ ಅವಧಿಗಿಂತ ತಡವಾಗಿ ಕಂತು ಪಾವತಿಸಿ ದಂಡ ವಿಧಿಸಲಾಗಿದ್ದರೆ, ಆ ಬಡ್ಡಿಗೆ “ಮನ್ನಾ’ ಅನ್ವಯವಾಗದು ಎಂಬುದನ್ನೂ ಆರ್‌ಬಿಐ ಸ್ಪಷ್ಟಪಡಿಸಿದೆ. ಬ್ಯಾಂಕಿಂಗ್ ಕಂಪನಿ ಅಥವಾ ಸಾರ್ವಜನಿಕ ವಲ ಯದ ಬ್ಯಾಂಕ್, ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಅಖೀಲ ಭಾರತ ಹಣಕಾಸು ಸಂಸ್ಥೆ, ಬ್ಯಾಂಕೇತರ ಹಣಕಾಸು ಸಂಸ್ಥೆ, ಗೃಹ ಹಣಕಾಸು ಸಂಸ್ಥೆ ಅಥವಾ ಸೂಕ್ಷ್ಮ ಹಣಕಾಸು ಸಂಸ್ಥೆಯ ಗ್ರಾಹಕರಿಗೆ ಇದು ಅನ್ವಯವಾಗಲಿದೆ.
ಈ ಎಲ್ಲ ಸಂಸ್ಥೆಗಳು ಮೊರಟೋರಿಯಂ ಆಯ್ಕೆ ಮಾಡಿಕೊಳ್ಳದ ಅರ್ಹ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ನ.5 ರೊಳಗೆ ಚಕ್ರಬಡ್ಡಿ ಹಣವನ್ನು ಕ್ಯಾಶ್‌ಬ್ಯಾಕ್ ಮಾಡಬೇಕು. ಈ ಪ್ರಯೋಜನಕ್ಕೆ ಫಲಾನುಭವಿಗಳು ಯಾವುದೇ ಅರ್ಜಿ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ ಎಂದೂ ಆರ್‌ಬಿಐ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್