ಮೇ 18ಕ್ಕೆ ಹೊಸ ಲುಕ್ ನಲ್ಲಿ ನೋಕಿಯಾ 3310 ಭಾರತದ ಮಾರುಕಟ್ಟೆಗೆ ಲಗ್ಗೆ
Team Udayavani, May 16, 2017, 2:07 PM IST
ನವದೆಹಲಿ:ನೋಕಿಯಾ ಅಭಿಮಾನಿಗಳು ಇನ್ನು ಹೆಚ್ಚು ಕಾಯಬೇಕಾಗಿಲ್ಲ, ಹೌದು ನೋಕಿಯಾ 3310 ಹೊಸ ವಿನ್ಯಾಸದೊಂದಿಗೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಭಾರತದಲ್ಲಿ ನೋಕಿಯಾ 3310 ದರ 3,310 ರೂಪಾಯಿ. ಮೇ 18ರಿಂದ ನೋಕಿಯಾ 3310 ಮೊಬೈಲ್ ಗ್ರಾಹಕರಿಗೆ ಲಭ್ಯವಾಗಲಿದೆ.
ಎಚ್ ಎಂಡಿ ಗ್ಲೋಬಲ್ ಆರಂಭಿಕವಾಗಿ ನೋಕಿಯಾ 3310 ಮೊಬೈಲ್ ಅನ್ನು ತಯಾರಿಸಿತ್ತು, ಇದೀಗ ನೋಕಿಯಾ ಬ್ರ್ಯಾಂಡ್ ಅನ್ನೇ ಉಪಯೋಗಿಸಿದೆ. ಈ ಮೂಲಕ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಅದೇ ರೀತಿ ಅಂಡ್ರಾಯ್ಡ್ ಪವರ್ಡ್ ಫೋನ್ ಗಳಾದ ನೋಕಿಯಾ 6, ನೋಕಿಯಾ 3 ಹಾಗೂ ನೋಕಿಯಾ 5 ಜೂನ್ ನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.
ಹೊಸ ವಿನ್ಯಾಸದ ನೋಕಿಯಾ ಮೊಬೈಲ್ ಹಲವು ವಿಧದಲ್ಲಿ ವೈವಿಧ್ಯತೆ ಹೊಂದಿದೆ. ನೂತನ 3310 ನೋಕಿಯಾ ತುಂಬಾ ವೇಗವಾಗಿದೆ, ಆಧುನಿಕ ವಿನ್ಯಾಸ ಹಾಗೂ ಉತ್ತಮ ಹಾರ್ಡ್ ವೇರ್ ಇದ್ದಿರುವುದಾಗಿ ವಿವರಿಸಿದೆ.
ನೂತನ ನೋಕಿಯಾದ ಡಿಸ್ ಪ್ಲೇ ಮತ್ತು ವಿನ್ಯಾಸದಲ್ಲಿ ತುಂಬಾ ಬದಲಾವಣೆ ಮಾಡಲಾಗಿದೆ. ಹೊಸ ನೋಕಿಯಾ 3310ದಲ್ಲಿ 2.4 ಇಂಚಿನ ಕಲರ್ ಡಿಸ್ ಪ್ಲೇ ಇದೆ. ಫೀಚರ್ಸ್ ನಲ್ಲೂ ಬದಲಾವಣೆ ಮಾಡಲಾಗಿದೆ. ಡ್ಯುಯೆಲ್ ಸಿಮ್ ಕಾರ್ಡ್, 2 ಮೆಗಾ ಫಿಕ್ಸಲ್ ಕ್ಯಾಮೆರಾ ಮತ್ತು ಬ್ಯಾಟರಿ ಅವಧಿ 22 ಗಂಟೆ ಇರಲಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ