ಭಾರತದೊಂದಿಗೆ ವ್ಯಾಪಾರ ನಿಷೇಧ: ಉಲ್ಟಾ ಹೊಡೆದ ಪಾಕಿಸ್ಥಾನ!

ಔಷಧ ತಯಾರಿಕೆಗೆ ಕಚ್ಚಾ ವಸ್ತು ಆಮದಿಗೆ ನಿರ್ಧಾರ

Team Udayavani, Sep 3, 2019, 8:06 PM IST

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಎಗರಾಡುತ್ತಿದ್ದ ಪಾಕಿಸ್ಥಾನ ಈಗ ಒಂದೊಂದೇ ವಿಚಾರದಲ್ಲಿ ಉಲ್ಟಾ ಹೊಡೆಯುತ್ತಿದೆ.

ಯುದ್ಧದ ವಿಚಾರ, ಪರಮಾಣು ಬಾಂಬ್ ದಾಳಿ ಮಾಡುತ್ತೇವೆ ಎಂದೆಲ್ಲ ಹೇಳಿದ್ದ ಆ ದೇಶ ಕಳೆದೆರಡು ದಿನಗಳಿಂದ ಇಲ್ಲ ಇಲ್ಲ.. ಎನ್ನುತ್ತ ಯೂ ಟರ್ನ್ ತೆಗೆದುಕೊಂಡಿದೆ. ಈಗ ವ್ಯಾಪಾರ ನಿಷೇಧ ವಿಚಾರದಲ್ಲೂ ಉಲ್ಟಾ ಹೊಡೆದಿದೆ.

ಭಾರತದೊಂದಿಗೆ ಆಮದು-ತುರ್ತುಗಳನ್ನು ನಿಷೇಧಿಸಿದ್ದ ಪಾಕಿಸ್ಥಾನಕ್ಕೆ ಅಗತ್ಯ ವಸ್ತುಗಳ ವಿಚಾರದಲ್ಲಿ ಸಂಕಷ್ಟಕ್ಕೀಡಾಗಿದ್ದು, ಇದರಿಂದ ಔಷಧಿ ತಯಾರಿಕೆಯ ಕಚ್ಚಾ ವಸ್ತುಗಳಿಗೆ ಹೇರಲಾಗಿದ್ದ ನಿಷೇಧವನ್ನು ಅದು ರದ್ದುಗೊಳಿಸಿದೆ. ಕ್ಯಾನ್ಸರ್, ಕ್ಷಯ, ಹೃದಯ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಪ್ರಮುಖ ಔಷಧಿಗಳ ಕಚ್ಚಾ ವಸ್ತುಗಳನ್ನು ಭಾರತದಿಂದ ತರಿಸಿಕೊಳ್ಳಲು ಅದು ಉದ್ಯಮಕ್ಕೆ ಸಮ್ಮತಿ ನೀಡಿದೆ.

ಇದಕ್ಕೆ ಕಾರಣ ಪಾಕ್‌ ನಲ್ಲಿ ಈ ಔಷಧಿಗಳ ಕೊರತೆಯಾಗುವ ಸಾಧ್ಯತೆ ದಟ್ಟವಾಗಿತ್ತು. ಇನ್ನು ಕೆಲವು ದಿನಗಳು ಕಳೆದರೆ ಔಷಧ ಅಲಭ್ಯತೆ ಕಾಡುವುದಾಗಿ ಅಲ್ಲಿನ ಉದ್ಯಮ ವಲಯ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೇ ಭಾರತ ಹೊರತು ಬೇರೆಯಾವುದೇ ದೇಶಗಳಿಂದ ಕಚ್ಚಾ ವಸ್ತುಗಳನ್ನು ತರಿಸುವುದು ಅತಿ ದುಬಾರಿಯಾದ್ದರಿಂದ ಪಾಕಿಸ್ಥಾನಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಲಾಗಿದೆ.

ಅಲ್ಲದೇ ಪಾಕ್ ಶೇ.50ರಷ್ಟು ಔಷಧಿಗಳ ಕಚ್ಚಾವಸ್ತುಗಳನ್ನು ಭಾರತದಿಂದ ಆಮದು ಮಾಡುತ್ತಿದೆ. ಔಷಧಿಗಳಿಗೆ ಬಳಸುವ 820 ರಾಸಾಯನಿಕಗಳನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಇವುಗಳಲ್ಲಿ 62 ಕಚ್ಚಾ ವಸ್ತುಗಳಿಗೆ ಪಾಕ್ ಭಾರತವನ್ನೇ ಶೇ.100ರಷ್ಟು ಆಶ್ರಯಿಸಿದೆ. ಇವುಗಳಲ್ಲಿ 23 ವಸ್ತುಗಳು ಯಾವತ್ತೂ ಬೇಕಾಗುವ, ಅತಿ ಬೇಡಿಕೆಯಿರುವ ಜೀವ ರಕ್ಷಕ ಔಷಧಿಯ ಮೂಲವಸ್ತುಗಳಾಗಿವೆ.

ಈ ಸಂಬಂಧ ಪಾಕ್‌ ನ ಉದ್ದಿಮೆ ಸಚಿವಾಲಯ ಸೆ.2ರಂದು ಘೋಷಣೆ ಹೊರಡಿಸಿದ್ದು, ಆಮದಿಗೆ ಇದ್ದ ತಡೆಯನ್ನು ತೆಗೆದುಹಾಕಿರುವುದಾಗಿ ಹೇಳಿದೆ. ಇನ್ನು ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ನಿಷೇಧ ತೆಗೆದು ಹಾಕಬೇಕೆಂದು ಪಾಕ್‌ ನಲ್ಲಿ ವಿಪರೀತ ಒತ್ತಡವಿದ್ದು, ಮುಂದಿನ ದಿನಗಳಲ್ಲಿ ಅದು ನಿಷೇಧವನ್ನು ಸಂಪೂರ್ಣ ತೆಗೆದು ಹಾಕುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ಮೂಲಗಳು ಹೇಳಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ