ಮಾರಣಾಂತಿಕ ಕೊರೊನಾ ವೈರಸ್ ಎಫೆಕ್ಟ್; ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ
ಬ್ರೆಂಟ್ ಕಚ್ಛಾ ತೈಲ ಬ್ಯಾರೆಲ್ ಗೆ 62.07 ಡಾಲರ್ ಇದ್ದಿದ್ದು, ಇದೀಗ 2.43 ಡಾಲರ್ ಇಳಿಕೆಯಾಗಿದೆ
Team Udayavani, Jan 25, 2020, 11:27 AM IST
ನವದೆಹಲಿ: ಚೀನಾ ಸೇರಿದಂತೆ ಜಾಗತಿಕವಾಗಿ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಶನಿವಾರ ಇಳಿಕೆಯಾಗಿರುವುದಾಗಿ ವರದಿ ತಿಳಿಸಿದೆ.
ತೈಲ ಬೆಲೆ ಇಳಿಕೆಯ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 27 ಪೈಸೆಯಷ್ಟು ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 30 ಪೈಸೆ ಇಳಿಕೆಯಾಗಿರುವುದಾಗಿ ವರದಿ ವಿವರಿಸಿದೆ.
ದಿಲ್ಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 74.16 ರೂಪಾಯಿ, ಮುಂಬೈಯಲ್ಲಿ ಲೀಟರ್ ಗೆ 79.76 ರೂಪಾಯಿ, ಕೋಲ್ಕತಾದಲ್ಲಿ 76.77 ರೂಪಾಯಿ ಹಾಗೂ ಚೆನ್ನೈಯಲ್ಲಿ 77.03 ರೂಪಾಯಿಗೆ ಇಳಿಕೆಯಾಗಿರುವುದಾಗಿ ತಿಳಿಸಿದೆ.
ಅದೇ ರೀತಿ ದಿಲ್ಲಿಯಲ್ಲಿ ಡೀಸೆಲ್ ಲೀಟರ್ ಬೆಲೆ 67.31 ರೂಪಾಯಿ, ಮುಂಬೈನಲ್ಲಿ 70.56 ರೂಪಾಯಿ. ಕೋಲ್ಕತಾದಲ್ಲಿ 69.67 ರೂಪಾಯಿ ಹಾಗೂ ಚೆನ್ನೈನಲ್ಲಿ 71.11 ರೂಪಾಯಿಗೆ ಇಳಿಕೆಯಾಗಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ವೆಬ್ ಸೈಟ್ ಹೇಳಿದೆ.
ಬ್ರೆಂಟ್ ಕಚ್ಛಾ ತೈಲ ಬ್ಯಾರೆಲ್ ಬೆಲೆ ಶನಿವಾರ 60.56 ಡಾಲರ್ ನಷ್ಟಾಗಿದೆ. ಕಳೆದ ವಾರ ಬ್ರೆಂಟ್ ಕಚ್ಛಾ ತೈಲ ಬ್ಯಾರೆಲ್ ಗೆ 62.07 ಡಾಲರ್ ಇದ್ದಿದ್ದು, ಇದೀಗ 2.43 ಡಾಲರ್ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್