ಖಾಸಗಿ ರೈಲು ಓಡಿಸಲಿವೆ 2 ಸರಕಾರಿ ಕಂಪೆನಿಗಳು
ಬಂಡವಾಳ ಹೂಡಿಕೆ ಯಾಗುವ ನಿರೀಕ್ಷೆಯಲ್ಲಿದೆ ಕೇಂದ್ರ. ಶೀಘ್ರವೇ ಬಿಡ್‌ಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
Team Udayavani, Aug 4, 2021, 10:25 AM IST
ಹೊಸದಿಲ್ಲಿ: 2023-24ನೇ ಸಾಲಿನ ಒಳಗಾಗಿ ದೇಶದಲ್ಲಿ ಖಾಸಗಿ ರೈಲುಗಳನ್ನು ಓಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಅದಕ್ಕೆ ಪೂರಕವಾಗಿ ಕೇಂದ್ರದ ಎರಡು ಕಂಪೆನಿಗಳಾ ಗಿರುವ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ (ಐಆರ್‌ಸಿಟಿಸಿ) ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ. (ಬಿಎಚ್‌ಇಎಲ್) ಖಾಸಗಿ ರೈಲುಗಳನ್ನು ಓಡಿಸುವ ಬಗ್ಗೆ ಮಾತುಕತೆ ನಡೆಸಿವೆ. ಈ ಯೋಜನೆಗೆಂದೇ ವಿಶೇಷ ಉದ್ದೇಶಿತ ವಾಹಕ (ಎಸ್‌ಪಿವಿ) ಸ್ಥಾಪಿಸಲು ಯೋಚಿಸಿವೆ.
ಖಾಸಗಿ ರೈಲು ಓಡಿಸುವ ಕೇಂದ್ರ ಸರಕಾರದ ಯೋಚನೆಗೆ ಅನುಗುಣವಾಗಿ ಐಆರ್‌ಸಿಟಿಸಿ ಈಗಾಗಲೇ ಕೆಲವೊಂದು ಮಾರ್ಗಗಳ ಮೇಲೆ ಬಿಡ್ ಸಲ್ಲಿಕೆ ಮಾಡಿದೆ. ಎರಡೂ ಸಂಸ್ಥೆಗಳ ನಡುವಿನ ಮಾತುಕತೆ ಪ್ರಕಾರ, ಬಿಎಚ್‌ಇಎಲ್ ಖಾಸಗಿ ರೈಲು ಸೇವೆ ಶುರು ಮಾಡಲು ಬೇಕಾದ ಬಂಡವಾಳ ಪೂರೈಸಲಿದೆ. ಐಆರ್‌ಸಿಟಿಸಿ ರೈಲುಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಹಿರಿಯ ಅಧಿಕಾರಿ “ಬ್ಯುಸಿನೆಸ್ ಸ್ಟಾಂಡರ್ಡ್’ ಪತ್ರಿಕೆಗೆ ತಿಳಿಸಿದ್ದಾರೆ.
ಖಾಸಗಿ-ಸರಕಾರಿ ಸಹಭಾಗಿತ್ವದಲ್ಲಿ ಖಾಸಗಿ ರೈಲು ಓಡಿಸಲು ಕರೆಯಲಾಗಿದ್ದ ಬಿಡ್‌ಗಳನ್ನು ಕಳೆದ ತಿಂಗಳು ತೆರೆಯಲಾಗಿದೆ. ಬೆಂಗಳೂರು ಸೇರಿದಂತೆ 12 ಕೇಂದ್ರಗಳನ್ನು ರೈಲ್ವೇ ಇಲಾಖೆ ಗುರುತಿಸಿದೆ. 40 ಅತ್ಯಾಧುನಿಕ ರೇಕ್‌ಗಳ ಜತೆಗೆ 29 ಜೋಡಿ ರೈಲುಗಳನ್ನು ಓಡಿಸಲು ಯೋಜನೆ ಸಿದ್ಧಗೊಂಡಿದೆ. ಆರಂಭದಲ್ಲಿಯೇ ಒಟ್ಟು 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಯಾಗುವ ನಿರೀಕ್ಷೆಯಲ್ಲಿದೆ ಕೇಂದ್ರ. ಶೀಘ್ರವೇ ಬಿಡ್‌ಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ
Stock Exchange: ಬಾಂಬೆ ಷೇರುಪೇಟೆ ಸೂಚ್ಯಂಕ 1,000 ಅಂಕ ಕುಸಿತ: 12 ಲಕ್ಷ ಕೋಟಿ ರೂ. ನಷ್ಟ
YouTube ಠಕ್ಕರ್ನೀಡಲು ಮಸ್ಕ್ ಹೊಸ ಟಿವಿ ಆ್ಯಪ್
Facebook, Instagram ಸರ್ವರ್ ಡೌನ್, ಸೇವೆಯಲ್ಲಿ ವ್ಯತ್ಯಾಸ; 829 ಕೋಟಿ ರೂಪಾಯಿ ನಷ್ಟ