ಚಿಲ್ಲರೆ ಹಣದುಬ್ಬರ 7.35 ಪ್ರತಿಶತಕ್ಕೆ ಏರಿಕೆ ; ನವಂಬರ್ ನಲ್ಲಿ ಎಷ್ಟಿತ್ತು ಗೊತ್ತಾ?

Team Udayavani, Jan 13, 2020, 6:22 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕಿನ ಗರಿಷ್ಠ ಮಿತಿಯನ್ನು ದಾಟಿ 2019ರ ಡಿಸೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ದರ 7.35 ಪ್ರತಿಶತಕ್ಕೇರಿದೆ ಈ ದರ ನವಂಬರ್ ತಿಂಗಳಿನಲ್ಲಿ 5.54%ದಷ್ಟಿತ್ತು ಎಂದು ಕೇಂದ್ರ ಸರಕಾರ ಇಂದು ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳಲ್ಲಿ ತಿಳಿಸಿದೆ. ಇದು 2014ರ ಜುಲೈ ತಿಂಗಳ ಬಳಿಕ ದಾಖಲುಗೊಂಡ ಅತೀ ಹೆಚ್ಚಿನ ಹಣದುಬ್ಬರವಾಗಿದೆ ಆ ಸಂದರ್ಭದಲ್ಲಿ ಚಿಲ್ಲರೆ ಹಣದುಬ್ಬರ ದರ 7.39 ಪ್ರತಿಶತ ದಾಖಲಾಗಿತ್ತು.

ತೈಲ ಬೆಲೆಯಲ್ಲಿನ ಏರಿಕೆ ಈ ಬಾರಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಅಮೆರಿಕಾ ಮತ್ತು ಇರಾನ್ ನಡುವಿನ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರೆಲ್ ಗೆ 70 ಡಾಲರ್ ಮುಟ್ಟಿತ್ತು. ಅತೀ ಹೆಚ್ಚು ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಹಾಗಾಗಿ ಕಚ್ಛಾ ತೈಲ ಬೆಲೆಯಲ್ಲಿ ಉಂಟಾಗುವ ಏರಿಳಿತ ಭಾರತದ ಮಾರುಕಟ್ಟೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ ಹಾಗೂ ಹಣದುಬ್ಬರ ದರಗಳಲ್ಲಿ ಏರಿಳಿತ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಆಹಾರ ಸಾಮಾಗ್ರಿಗಳ ಹಣದುಬ್ಬರ ಡಿಸೆಂಬರ್ ತಿಂಗಳಿನಲ್ಲಿ 14.12 ಪ್ರತಿಶತಕ್ಕೆ ಏರಿಕೆಯಾಗಿದೆ ನವಂಬರ್ ತಿಂಗಳಿನಲ್ಲಿ ಈ ದರ 10.01 ಪ್ರತಿಶದಷ್ಟಿತ್ತು, ಮತ್ತು ತರಕಾರಿ ಸಾಮಾಗ್ರಿಗಳ ಹಣದುಬ್ಬರ 60.5%ರಷ್ಟು ಭಾರೀ ಏರಿಕೆ ಕಂಡಿದೆ. ನವಂಬರ್ ತಿಂಗಳಿನಲ್ಲಿ ಈ ದರ 36 ಪ್ರತಿಶತ ದಾಖಲಾಗಿತ್ತು. ಮತ್ತು ಮೂಲ ಹಣದುಬ್ಬರ 3.7 ಪ್ರತಿಶತ ದಾಖಲಾಗಿ ಸ್ವಲ್ಪ ಏರಿಕೆಯನ್ನು ಕಂಡಿದೆ.

ಆದರೆ ಆರ್.ಬಿ.ಐ. ಮತ್ತು ಕೇಂದ್ರ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿರುವುದು ಆಹಾರ (ತರಕಾರಿ) ಸಾಮಾಗ್ರಿಗಳ ಹಣದುಬ್ಬರ. ಯಾಕೆಂದರೆ ಡಿಸೆಂಬರ್ ತಿಂಗಳಿನಲ್ಲಿ ಹಣದುಬ್ಬರ ದರ ಏರಿಕೆ ಕಾಣಲು ಇವುಗಳೇ ಮೂಲ ಕಾರಣವಾಗಿದೆ. ಹಣದುಬ್ಬರ ಏರುಗತಿಯಲ್ಲಿದ್ದ ಕಾರಣದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ ತಿಂಗಳಿನಲ್ಲಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ