ಪ್ರವಾಸಕ್ಕೆ 1.58 ಕೋಟಿ ರೂ. ವೆಚ್ಚ!

Team Udayavani, Apr 25, 2019, 6:22 AM IST

ಭೋಪಾಲ್‌: ರಾಜ್ಯಕ್ಕೆ ಹೂಡಿಕೆ ತರಲು ಸ್ವಿಜರ್ಲೆಂಡ್‌ಗೆ ತೆರಳಿದ ಮಧ್ಯ ಪ್ರದೇಶ ಸಿಎಂ ಕಮಲ್‌ನಾಥ್‌ ಸರಕಾರದ ಖಜಾನೆಗೇ ಹೊರೆಯಾಗಿದ್ದಾರೆ. ಕಮಲ್‌ನಾಥ್‌ ಹಾಗೂ ಅವರ ಮೂವರು ಅಧಿಕಾರಿಗಳ ವಾಸಕ್ಕೆಂದು ಒಟ್ಟು 1.58 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂಬುದಾಗಿ ಆರ್‌ಟಿಐ ದಾಖಲೆಗಳಿಂದ ತಿಳಿದುಬಂದಿದೆ. ಕಳೆದ ಜನವರಿಯಲ್ಲಿ ಸ್ವಿಜರ್ಲೆಂಡ್‌ನ‌ಲ್ಲಿ ನಡೆದ ವಿಶ್ವ ವಾಣಿಜ್ಯ ಫೋರಂಗೆ ತೆರಳಿದ್ದರು.

ಈ ವೇಳೆ ವಿಮಾನ ಟಿಕೆಟ್‌ಗೆ 30 ಲಕ್ಷ ರೂ. ಹೋಟೆಲ್‌ ಬಿಲ್‌ಗೆ 45 ಲಕ್ಷ ರೂ. ವಿಮಾನ ನಿಲ್ದಾಣದಲ್ಲಿ  ವಿಐಪಿ ಲೌಂಜ್‌ಗೆ 2 ಲಕ್ಷ ರೂ. ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳಿಗೆ ಈ ತಂಡ ವೆಚ್ಚ ಮಾಡಿದೆ ಎಂಬುದಾಗಿ ನಮೂದಿ ಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ