ಜೆಟ್‌ ಏರ್‌ ವೇಸ್‌ಗೆ 400 ಕೋಟಿ ರೂ. ಲೈಫ್ ಲೈನ್‌ ಪ್ರಸ್ತಾವ ಬ್ಯಾಂಕ್‌ಗಳಿಂದ ತಿರಸ್ಕೃತ

Team Udayavani, Apr 17, 2019, 7:13 PM IST

ಮುಂಬಯಿ : ಈ ವರ್ಷ ಜನವರಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್‌ ಏರ್‌ ವೇಸ್‌ ಗೆ ತುರ್ತಾಗಿ 400 ಕೋಟಿ ರೂ. ನೀಡುವ ಲೈಫ್ ಲೈನ್‌ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿವೆ.

ಇದರ ಪರಿಣಾಮವಾಗಿ ಜೆಟ್‌ ಏರ್‌ ವೇಸ್‌ ತಾತ್ಕಾಲಿಕವಾಗಿಯೂ ತನ್ನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆಗೆ ಗುರಿಯಾಗಿದೆ.

ಕಳೆದ ಮಾರ್ಚ್‌ 25ರಿಂದ ಜೆಟ್‌ ಏರ್‌ ವೇಸ್‌ಗೆ 1,500 ಕೋಟಿ ರೂ. ಮರುಪೂರಣಗೈವ ಠರಾವು ಇನ್ನೂ ಕಾರ್ಯಗತವಾಗಿಲ್ಲ.

ಒಂದು ಕಾಲದಲ್ಲಿ ಮುಂಚೂಣಿಯ ವಾಯು ಯಾನ ಸಂಸ್ಥೆ ಎನಿಸಿಕೊಂಡಿದ್ದ ಜೆಟ್‌ ಏರ್‌ ವೇಸ್‌ ಈಚಿನಿಂದ ತನ್ನ ಸಾಲ ಪಾವತಿಯಲ್ಲಿ ವಿಫ‌ಲವಾಗಿದೆ. ಪರಿಣಾಮವಾಗಿ ಜೆಟ್‌ ಏರ್‌ ವೇಸ್‌ಗೆ ಸಾಲ ಕೊಟ್ಟ ಬ್ಯಾಂಕುಗಳು ಅದರ ಹೆಚ್ಚಿನೆಲ್ಲ ವಿಮಾನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ.

ನಿನ್ನೆ ಮಂಗಳವಾರದ ಸ್ಥಿತಿಗತಿಯ ಪ್ರಕಾರ ಜೆಟ್‌ ಏರ್‌ ವೇಸ್‌ ಬಳಿ ಕೇವಲ ಆರು ವಿಮಾನಗಳು ಮಾತ್ರವೇ ಉಳಿದಿವೆ ಎಂದು ಮೂಲಗಳು ತಿಳಿಸಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ