ಎಸ್‌ಬಿಐ ಬಡ್ಡಿ ದರ ಇಳಿಇಳಿಕೆ; ಆಗಸ್ಟ್‌ 26 ರಿಂದ ಹೊಸ ಬಡ್ಡಿ ದರ ಜಾರಿ

Team Udayavani, Aug 24, 2019, 9:50 AM IST

ನವದೆಹಲಿ: ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ ಭಾರತೀಯ ಸ್ಟೇಟ್‌ ಬ್ಯಾಂಕ್‌ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದೆ.

ಆಗಸ್ಟ್‌ 26 ರಿಂದ ಹೊಸ ಬಡ್ಡಿ ದರ ಜಾರಿಗೆ ಬರಲಿದ್ದು, ಶೇ.0.5ರಷ್ಟು ಬಡ್ಡಿ ದರ ಇಳಿಕೆ ಮಾಡಿದೆ. 7 ರಿಂದ 45 ದಿನಗಳ ಠೇವಣಿಯ ಬಡ್ಡಿಯನ್ನು ಶೇ.5ರಿಂದ ಶೇ.4.5ಕ್ಕೆ, 46 ದಿನಗಳಿಂದ 179 ದಿನಗಳು ಹಾಗೂ 180 ದಿನಗಳಿಂದ ಒಂದು ವರ್ಷದವರೆಗಿನ ಠೇವಣಿ ಬಡ್ಡಿ ದರದಲ್ಲಿ ಶೇ.0.25 ರಷ್ಟು ಇಳಿಕೆ ಮಾಡಿದ್ದು ಸದ್ಯ ಶೇ. 5.5 ಹಾಗೂ ಶೇ. 6 ಬಡ್ಡಿ ದರ ನಿಗದಿಯಾಗಿದೆ.

ಇನ್ನು 1-2 ವರ್ಷಗಳ ಅವಧಿಯ ಠೇವಣಿಗೆ ಶೇ. 6.70 ಬಡ್ಡಿ ನಿಗದಿಸಲಾಗಿದ್ದು, ಶೇ. 0.10 ರಷ್ಟು ಇಳಿಕೆ ಮಾಡಲಾಗಿದೆ. ಇತ್ತೀಚೆಗೆ ಆರ್‌ಬಿಐ ರೆಪೋ ದರ ಇಳಿಕೆ ಮಾಡಿದ  ಹಿನ್ನೆಲೆಯಲ್ಲಿ ಎಸ್‌ಬಿಐ ಬಡ್ಡಿ ದರ ಇಳಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇತರ ಬ್ಯಾಂಕ್‌ಗಳೂ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆಯಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ