- Friday 06 Dec 2019
ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ: ಮುಂಬಯಿ ಶೇರು 435 ಅಂಕ ಡೌನ್
Team Udayavani, Jul 8, 2019, 10:47 AM IST
ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಬೇಕಾಬಿಟ್ಟಿ ಮಾರಾಟ ಕಂಡು ಬಂದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯಲ್ಲೂ ಅದೇ ಪ್ರವೃತ್ತಿ ತೋರಿ ಬಂದ ಕಾರಣ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನೆಕ್ಸ್ 400ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 16 ಪೈಸೆಗಳ ಕುಸಿತವನ್ನು ಹಿನ್ನಡೆಯನ್ನು ಕಂಡು 68.58 ರೂ. ಮಟ್ಟಕ್ಕೆ ಇಳಿಯಿತು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 434.99 ಅಂಕಗಳ ನಷ್ಟದೊಂದಿಗೆ 39,078.40 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 138.40 ಅಂಕಗಳ ನಷ್ಟದೊಂದಿಗೆ 11,672.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಟಾಪ್ ಲೂಸರ್ಗಳ ಪೈಕಿ ಹೀರೋ ಮೋಟೋ ಕಾರ್ಪ್, ಎಲ್ ಆ್ಯಂಡ್ ಟಿ, ಮಾರುತಿ, ಬಜಾಜ್ ಆಟೋ, ಮಹೀಂದ್ರ, ಟಾಟಾ ಮೋಟರ್, ಎಚ್ಯುಎಲ್ ಶೇರುಗಳು ಶೇ.3.44 ಅಂಕಗಳ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ ಎಸ್ ಬ್ಯಾಂಕ್, ಎಚ್ ಸಿ ಎಲ್ ಟೆಕ್, ಸನ್ ಫಾರ್ಮಾ, ಇನ್ಫೋಸಿಸ್, ಐಟಿಸಿ, ವೇದಾಂತ ಮತ್ತು ಪವರ್ ಗ್ರಿಡ್ ಶೇರುಗಳು ಶೇ.6ರ ವರೆಗಿನ ಏರಿಕೆಯನ್ನು ಕಂಡವು.
ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಶೇ.0.06 ಏರಿಕೆಯನ್ನು ದಾಖಲಿಸಿ ಬ್ಯಾರಲ್ ಗೆ 64.27 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಈ ವಿಭಾಗದಿಂದ ಇನ್ನಷ್ಟು
-
ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್ ಪಾವತಿ ಗಳನ್ನು ಕಾರ್ಡ್ ಅಥವಾ ಆ್ಯಪ್ಗ್ಳ ಮೂಲಕ ಮಾಡುತ್ತಿದ್ದಾರೆ....
-
ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆರಿಕದ ಪ್ರಸಿದ್ಧ ಕಾರು ತಯಾರಿಕ ಕಂಪೆನಿ ಎಂಜಿ ಹೆಕ್ಟರ್ (ಮೋರಿಸ್ ಗ್ಯಾರೇಜಸ್) ಇದೀಗ...
-
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದೆ. ಅಲ್ಲದೇ...
-
ಮುಂಬಯಿ: ಆರ್ಬಿಐನ ತ್ತೈಮಾಸಿಕ ಸಾಲ ಪರಿಶೀಲನ ನೀತಿ ಸಮಿತಿ ಸಭೆ ಮುಂಬಯಿನಲ್ಲಿ ನಡೆಯುತ್ತಿದೆ. ಗುರುವಾರ ಸಭೆಯ ಕೊನೆಯ ದಿನವಾಗಿದ್ದು, ಸಾಲದ ಮೇಲಿನ ಬಡ್ಡಿ ದರ...
-
ನವದೆಹಲಿ: ಬಿಎಸ್ VI ನಿಯಮಾವಳಿಗಳಿಗೆ ಅನುಗುಣವಾಗಿ ಎಂಜಿನ್ ಗಳನ್ನು ಮೇಲ್ದರ್ಜೆಗೇರಿಸಬೇಕಿರುವುದರಿಂದ 2020ರ ಜನವರಿ ತಿಂಗಳಿನಿಂದ ತಾನು ತಯಾರಿಸುವ ಪ್ರಯಾಣಿಕ...
ಹೊಸ ಸೇರ್ಪಡೆ
-
ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್ ಗಾಂಧಿ ವಸತಿ ನಿಗಮದ ಬದಲು ಮತ್ತೆ...
-
ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...
-
ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್ ಪಾವತಿ ಗಳನ್ನು ಕಾರ್ಡ್ ಅಥವಾ ಆ್ಯಪ್ಗ್ಳ ಮೂಲಕ ಮಾಡುತ್ತಿದ್ದಾರೆ....
-
ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...
-
ದರ್ಶನ್ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...