ಮುಂಬಯಿ ಶೇರು 139 ಅಂಕ ಜಂಪ್‌; ಉತ್ತಮ ಫ‌ಲಿತಾಂಶದ ಟಿಸಿಎಸ್‌ ಶೇ.5 ಜಿಗಿತ

Team Udayavani, Apr 15, 2019, 7:06 PM IST

ಮುಂಬಯಿ : ಐಟಿ ದಿಗ್ಗಜ ಸಂಸ್ಥೆ ಟಿಸಿಎಸ್‌ ಉತ್ತೇಜನಕಾರಿ ಫ‌ಲಿತಾಂಶ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಮುಂಚೂಣಿ ಕಂಪೆನಿಗಳಿಂದ ಇದೇ ರೀತಿಯ ಉತ್ತಮ ವಾರ್ಷಿಕ ಫ‌ಲಿತಾಂಶಗಳು ಹೊರಬೀಳುವ ಆಶಯದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರ ಮತ್ತೆ 138.73 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 38,905.84 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 46.90 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,690.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಟಿಸಿಎಸ್‌ ಪ್ರಕಟಿಸಿರುವ ಉತ್ತಮ ವಾರ್ಷಿಕ ಫ‌ಲಿತಾಂಶವನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಶೇ.4.78ರ ಏರಿಕೆಯನ್ನು ದಾಖಲಿದೆ.

ಆದರೂ ಶೇಕಡಾವಾರು ನೆಲೆಯಲ್ಲಿ ಟಾಟಾ ಮೋಟರ್‌ ಶೇ.7.04ರ ಜಿಗಿತವನ್ನು ದಾಖಲಿಸುವ ಮೂಲಕ ಅತೀ ದೊಡ್ಡ ಟಾಪ್‌ ಗೇನರ್‌ ಎನಿಸಿಕೊಂಡಿತು. ಇದನ್ನು ಅನುಸರಿಸಿ ಟಿಸಿಎಸ್‌, ಕೋಲ್‌ ಇಂಡಿಯಾ, ಟಾಟಾ ಸ್ಟೀಲ್‌, ಹೀರೋ ಮೋಟೋ ಕಾರ್ಪ್‌, ಕೋಟಕ್‌ ಬ್ಯಾಂಕ್‌, ಎಚ್‌ ಸಿ ಎಲ್‌ ಟೆಕ್‌, ಭಾರ್ತಿ ಏರ್‌ ಟೆಲ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌ ಶೇರುಗಳು ಶೇ.4.78ರ ಏರಿಕೆಯನ್ನು ದಾಖಲಿಸಿದವು.

ಡಾಲರ್‌ ಎದುರು ರೂಪಾಯಿ ಇಂದಿನ ವಹಿವಾಟಿನಲ್ಲಿ 19 ಪೈಸೆಗಳ ಕುಸಿತಕ್ಕೆ ಗುರಿಯಾಗಿ 69.36 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,800 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,455 ಶೇರುಗಳು ಮುನ್ನಡೆ ಸಾಧಿಸಿದವು; 1,128 ಶೇರುಗಳು ಹಿನ್ನಡೆಗೆ ಗುರಿಯಾದವು; 217 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ