ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ನಷ್ಟ ಕಂಡ ಸೆನ್ಸೆಕ್ಸ್ ಮಧ್ಯಾಹ್ನ ಚೇತರಿಕೆ
Team Udayavani, Jun 7, 2019, 12:00 PM IST
ಮುಂಬಯಿ : ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸ್ಥಿತಿಗತಿಯ ಬಗೆಗಿನ ಕಳವಳದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟವನ್ನು ಕಂಡಿತು. ಹಣಕಾಸು ಕ್ಷೇತ್ರದ ಶೇರುಗಳು ಭಾರೀ ಹೊಡೆತಕ್ಕೆ ಗುರಿಯಾದವು.
ಬೆಳಗ್ಗೆ 12 ಗಂಟೆಯ ಸುಮಾರಿಗೆ ಸಣ್ಣ ಮಟ್ಟಿನ ಚೇತರಿಕೆಯನ್ನು ಕಂಡ ಸೆನ್ಸೆಕ್ಸ್ 1.45 ಅಂಕಗಳ ನಷ್ಟದೊಂದಿಗೆ 39,528.27 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 4.70 ಅಂಕಗಳ ಏರಿಕೆಯೊಂದಿಗೆ 11,848.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ಟಾಪ್ ಗೇನರ್ಗಳು: ಭಾರ್ತಿ ಇನ್ಫ್ರಾಟೆಲ್, ಇಂಡಿಯಾಬುಲ್ಸ್ ಹೌಸಿಂಗ್, ಭಾರ್ತಿ ಏರ್ಟೆಲ್, ವೇದಾಂತ,ಬಜಾಜ್ ಫಿನಾನ್ಸ್; ಟಾಪ್ ಲೂಸರ್ಗಳು : ಡಾ. ರೆಡ್ಡಿ, ಸಿಪ್ಲಾ, ಕೋಲ್ ಇಂಡಿಯಾ, ರಿಲಯನ್ಸ್, ಎಸ್ ಬ್ಯಾಂಕ್.
ಡಾಲರ್ ಎದುರು ರೂಪಾಯಿ ಇಂದು ಯಾವುದೇ ವ್ಯತ್ಯಾಸವಿಲ್ಲದೆ 69.27 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಕಚ್ಚಾತೈಲ ಶೇ.1.36ರ ಏರಿಕೆಯನ್ನು ಕಂಡು ಬ್ಯಾರಲ್ ಗೆ 62.51 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ