ಹೆಚ್ಚಿದ ವಿದೇಶೀ ಬಂಡವಾಳ: ಸೆನ್ಸೆಕ್ಸ್‌ 139 ಅಂಕ ಜಂಪ್‌, ನಿಫ್ಟಿ 11,900ರ ಸನಿಹಕ್ಕೆ

Team Udayavani, May 27, 2019, 10:55 AM IST

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.

ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,900 ಅಂಕಗಳ ಮನೋಪ್ರಾಬಲ್ಯದ ಮಟ್ಟದ ಸನಿಹಕ್ಕೆ ತಲುಪಿತು.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ  19 ಪೈಸೆಗಳ ಜಿಗಿತ ದಾಖಲಿಸಿ 69.34 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಮೋದಿ ನೇತೃತ್ವದಲ್ಲಿ ನಿಚ್ಚಳ ಬಹುಮತದೊಂದಿಗೆ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿರುವ ಹಿನ್ನೆಲೆಯಲ್ಲಿ ವಿದೇಶೀ ಬಂಡವಾಳದ ಒಳಹರಿವು ನಿರಂತರವಾಗಿರುವುದು ಶೇರು ಮಾರುಕಟ್ಟೆಯ ಸತತ ಮುನ್ನಡೆಗೆ ಕಾರಣವೆಂದು ತಿಳಿಯಲಾಗಿದೆ.

ಇಂದು ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್‌ 139.77 ಅಂಕಗಳ ಮುನ್ನಡೆಯೊಂದಿಗೆ 39,574.49 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.60 ಅಂಕಗಳ ಮುನ್ನಡೆಯೊಂದಿಗೆ 11,878.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದು ಬೆಳಗ್ಗಿನ ವಹಿವಾಟಿನ ಟಾಪ್‌ ಗೇನರ್‌ಗಳು : ಎಸ್‌ ಬ್ಯಾಂಕ್‌, ಎನ್‌ಟಿಪಿಸಿ, ಟಾಟಾ ಸ್ಟೀಲ್‌, ಸಿಪ್ಲಾ, ಲಾರ್ಸನ್‌; ಟಾಪ್‌ ಲೂಸರ್‌ಗಳು : ಟೆಕ್‌ ಮಹೀಂದ್ರ, ಝೀ ಎಂಟರಟೇನ್‌ಮೆಂಟ್‌, ಭಾರ್ತಿ ಏರ್‌ಟೆಲ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಇಂಡಸ್‌ ಇಂಡ್‌ ಬ್ಯಾಂಕ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ