ಶೇರು ಮಾರುಕಟ್ಟೆ; ಸೆನ್ಸೆಕ್ಸ್ 150 ಅಂಕ ಜಿಗಿತ, ಟಾಟಾ ಸ್ಟೀಲ್ ಶೇರು ಶೇ.5ರಷ್ಟು ಏರಿಕೆ

Team Udayavani, Apr 26, 2019, 11:18 AM IST

ಮುಂಬೈ: ಮುಂಬೈ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಏರಿಕೆ ಕಂಡಿದೆ. ಟಾಟಾ ಸ್ಟೀಲ್ ಶೇರುಗಳು ಭರಾಟೆಯ ಖರೀದಿಯಿಂದಾಗಿ ಶೇ.5ರಷ್ಟು ಏರಿಕೆ ಕಂಡಿದೆ.

ಬೆಳಗ್ಗಿನ ವಹಿವಾಟಿನಲ್ಲಿ ಶೇರು ಸೂಚ್ಯಂಕ 152.41. ಅಂಕಗಳೊಂದಿಗೆ ಮುನ್ನಡೆಯೊಂದಿಗೆ 38,883.27 ಅಂಕಗಳ ವಹಿವಾಟು ನಡೆಸಿದ್ದು, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 50.90 ಅಂಕಗಳ ಏರಿಕೆಯೊಂದಿಗೆ 11,692.70 ಅಂಕಗಳಲ್ಲಿ ವಹಿವಾಟು ನಿರತವಾಗಿದೆ.

ಇಂದಿನ ವಹಿವಾಟಿನ ಟಾಪ್ ಗೇನರ್ ಗಳಾದ ಎಚ್ ಸಿಎಲ್ ಟೆಕ್, ಕೋಲ್ ಇಂಡಿಯಾ, ಭಾರ್ತಿ ಏರ್ ಟೆಲ್, ಸನ್ ಫಾರ್ಮಾ, ಪವರ್ ಗ್ರಿಡ್, ಎಟಿಪಿಸಿ, ಐಟಿಸಿ, ಎಲ್ ಅಂಡ್ ಟಿ, ಟಿಸಿಎಸ್, ಆರ್ ಐಎಲ್ ಮತ್ತು ಎಸ್ ಬಿಐ ಬ್ಯಾಂಕ್ ಶೇರುಗಳು 1.53ರಷ್ಟು ಏರಿಕೆ ಕಂಡಿವೆ.

ವಹಿವಾಟಿನಲ್ಲಿ ನಷ್ಟ ಕಂಡಿದ್ದು ಟಾಟಾ ಮೋಟಾರ್ಸ್, ಮಾರುತಿ, ಇಂಡಸ್ ಬ್ಯಾಂಕ್, ಹೀರೋ ಮೋಟೊ ಕಾರ್ಪ್, ಕೋಟಕ್ ಬ್ಯಾಂಕ್, ಎಚ್ ಡಿಎಫ್ ಸಿ, ವೇದಾಂತ ಕಂಪನಿ ಶೇರುಗಳು ಶೇ.2.62ರಷ್ಟು ಇಳಿಕೆ ಕಾಣುವ ಮೂಲಕ ನಷ್ಟ ಅನುಭವಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ