ಮುಂಬೈ ಷೇರುಪೇಟೆ 50 ಸಾವಿರದತ್ತ ನಾಗಾಲೋಟ; ಸಾರ್ವಕಾಲಿಕ ದಾಖಲೆ
ಎಸ್ ಇ ನಿಫ್ಟಿ ಕೂಡಾ 70.55 ಅಂಕಗಳ ಏರಿಕೆಯೊಂದಿಗೆ 14,634 ಅಂಕಗಳ ವಹಿವಾಟು ನಡೆಸಿದೆ
Team Udayavani, Jan 13, 2021, 12:28 PM IST
ಮುಂಬೈ:ಸತತ ಮೂರು ದಿನಗಳಿಂದಲೂ ಮುಂಬೈ ಷೇರುಪೇಟೆ ಸಾರ್ವಕಾಲಿಕ ದಾಖಲೆ ನಿರ್ಮಿಸುತ್ತಿದ್ದು, ಬುಧವಾರ(ಜನವರಿ 13, 2021)ವೂ ಸಂವೇದಿ ಸೂಚ್ಯಂಕ 201.65 ಅಂಕಗಳ ಏರಿಕೆಯೊಂದಿಗೆ ಮತ್ತೊಂದು ದಾಖಲೆ ಮೂಲಕ 49,776.29 ಅಂಕಗಳ ವಹಿವಾಟಿನೊಂದಿಗೆ 50 ಸಾವಿರದ ಗಡಿ ತಲುಪುವತ್ತ ಮುನ್ನುಗ್ಗಿದೆ.
ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 200 ಅಂಕಗಳ ಏರಿಕೆಯೊಂದಿಗೆ ದಾಖಲೆಯ ವಹಿವಾಟು ನಡೆಸಿದ್ದು, ಇದರಿಂದ ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್ ಟೆಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಲಾಭ ಗಳಿಸಿವೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 70.55 ಅಂಕಗಳ ಏರಿಕೆಯೊಂದಿಗೆ 14,634 ಅಂಕಗಳ ವಹಿವಾಟು ನಡೆಸಿದೆ. ಒಎನ್ ಜಿಸಿ, ಎಸ್ ಬಿಐ, ಐಸಿಐಸಿಐ ಬ್ಯಾಂಕ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಲಾಭಗಳಿಸಿವೆ.
ಮಂಗಳವಾರ ಸಂವೇದಿ ಸೂಚ್ಯಂಕ 247.79 ಅಂಕಗಳ ಏರಿಕೆ ದಾಖಲಿಸಿ, ಮತ್ತೂಂದು ದಾಖಲೆಯ ಮೂಲಕ 49,517.11ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ಗಳ ಷೇರುಗಳು ಭಾರೀ ಪ್ರಮಾಣದಲ್ಲಿ ಖರೀದಿಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ