ಸೆನ್ಸೆಕ್ಸ್‌, ನಿಫ್ಟಿ ನಿರಂತರ ಮೂರನೇ ದಿನವೂ ಹೊಸ ದಾಖಲೆ ಎತ್ತರದ ಹ್ಯಾಟ್ರಿಕ್‌ ಸಾಧನೆ

Team Udayavani, May 28, 2019, 4:43 PM IST

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದು ನಿರಂತರ ಮೂರನೇ ದಿನವೂ ಹೊಸ ದಾಖಲೆಯ ಎತ್ತರವನ್ನು ಏರುವ ಹ್ಯಾಟ್ರಿಕ್‌ ಸಾಧನೆ ಮಾಡಿವೆ.

ಮೋದಿ ಸುನಾಮಿಯಿಂದಾಗಿ ಶೇರು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನಿರಂತರ ವಿದೇಶೀ ಬಂಡವಾಳ ಹರಿದು ಬರುತ್ತಿರುವುದು ಇದಕ್ಕೆ ಕಾರಣ ಎಂದು ಪರಿಣತರು ಹೇಳಿದ್ದಾರೆ.

ದಿನವಿಡೀ 300ಕ್ಕೂ ಅಧಿಕ ಅಂಕಗಳ ಓಲಾಟವನ್ನು ಕಂಡ ಸೆನ್ಸೆಕ್ಸ್‌ ದಿನಾಂತ್ಯಕ್ಕೆ 66.44 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ ಎತ್ತರದ 39,749.73 ಅಂಕಗಳ ಮಟ್ಟವನ್ನು ತಲುಪಿತು.

ದಿನದ ವಹಿವಾಟಿನ ನಡುವೆ ಸೆನ್ಸೆಕ್ಸ್‌ 39,828.65 ಅಂಕಗಳ ಎತ್ತರವನ್ನೂ 39,498.65 ಅಂಕಗಳ ಕೆಳ ಮಟ್ಟವನ್ನೂ ಕಂಡಿತ್ತು.

ಇದೇ ರೀತಿ ನಿಫ್ಟಿ ಸೂಚ್ಯಂಕ ನಾಲ್ಕು ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು ಇನ್ನೊಂದು ದಾಖಲೆಯ ಎತ್ತರವಾಗಿ 11,928.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಎಸ್‌ ಬ್ಯಾಂಕ್‌ ಶೇರು ಇಂದು ಶೇ.4.06ರ ಏರಿಕೆಯನ್ನು ಕಂಡು ಅತೀ ದೊಡ್ಡ ಗೇನರ್‌ ಎನಿಸಿಕೊಂಡಿತು. ಇತರ ಗೇನರ್‌ಗಳಾದ ಕೋಲ್‌ ಇಂಡಿಯಾ, ಇನ್‌ಫೋಸಿಸ್‌, ಇಡಸ್‌ ಇಂಡ್‌ ಬ್ಯಾಂಕ್‌, ಪವರ್‌ ಗ್ರಿಡ್‌, ವೇದಾಂತ, ರಿಲಯನ್ಸ್‌, ಟಿಸಿಎಸ್‌, ಎಚ್‌ಯುಎಲ್‌, ಒಎನ್‌ಜಿಸಿ, ಎಚ್‌ಸಿಎಲ್‌ ಟೆಕ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌ ಮತ್ತು ಏಶ್ಯನ್‌ ಪೇಂಟ್‌ ಶೇರುಗಳು ಶೇ.2.72ರ ಏರಿಕೆಯನ್ನು ಕಂಡವು.

ಹಾಗಿದ್ದರೂ ಡಾಲರ್‌ ಎದುರು ರೂಪಾಯಿ ಇಂದು 20 ಪೈಸೆಗಳ ಕುಸಿತವನ್ನು 69.71 ರೂ. ಮಟ್ಟಕ್ಕೆ ಇಳಿಯಿತು.ಬ್ರೆಂಟ್‌ ಕಚ್ಚಾತೈಲ ಶೇ.0.33ರ ಏರಿಕೆಯನ್ನು ಕಂಡು ಬ್ಯಾರಲ್‌ಗೆ 69 ಡಾಲರ್‌ ನಲ್ಲಿ ಬಿಕರಿಯಾಗುತ್ತಿತ್ತು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,761 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,438 ಶೇರುಗಳು ಮುನ್ನಡೆ ಸಾಧಿಸಿದವು; 1,169 ಶೇರುಗಳು ಹಿನ್ನಡೆಗೆ ಗುರಿಯಾದವು; 154 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ