ಶೇರು ಪೇಟೆಯಲ್ಲಿ ಮುಂದುವರಿದ ಮೋದಿ ಸುನಾಮಿ: ಸೆನ್ಸೆಕ್ಸ್‌, ನಿಫ್ಟಿ ದಾಖಲೆ

Team Udayavani, May 27, 2019, 4:28 PM IST

ಮುಂಬಯಿ : ಈಚೆಗಷ್ಟೇ ಮುಗಿದ 2019ರ ಲೋಕಸಭಾ ಚುನಾವಣೆಯಲ್ಲಿ ಕಂಡು ಬಂದಿದ್ದ ಮೋದಿ ಸುನಾಮಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಈಗಲೂ ಮುಂದುವರಿದಿದೆ.

ಮೋದಿ ಸುನಾಮಿಯ ಫ‌ಲವಾಗಿ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಇನ್ನೊಂದು ದಾಖಲೆಯ ಎತ್ತರವನ್ನು ಏರುವ ಸಾಧನೆ ಮಾಡಿದವು.

ಇಂದು ಸೋಮವಾರದ ವಹಿವಾಟಿನಲ್ಲಿ 400ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿದ ಸೆನ್ಸೆಕ್ಸ್‌ ದಿನದ ವಹಿವಾಟನ್ನು 248.57 ಅಂಕಗಳ ಏರಿಕೆಯೊಂದಿಗೆ 39,683.29 ಅಂಕಗಳ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 80.65 ಅಂಗಕಳ ಜಿಗತವನ್ನು ದಾಖಲಿಸಿ ದಿನದ ವಹಿವಾಟನ್ನು 11,924.75ರ ಅಂಕಗಳ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್‌ ಶೇ.5.78ರ ಜಿಗಿತವನ್ನು ದಾಖಲಿಸಿ ಅತೀ ದೊಡ್ಡ ಗೇನರ್‌ ಎನಿಸಿಕೊಂಡಿತು.

ಇದನ್ನು ಅನುಸರಿಸಿ ಎಸ್‌ ಬ್ಯಾಂಕ್‌, ಎನ್‌ ಟಿ ಪಿ ಸಿ, ಲಾರ್ಸನ್‌, ಎಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ, ಮಹೀಂದ್ರ, ಅವಳಿ ಎಚ್‌ ಡಿ ಎಫ್ ಸಿ, ವೇದಾಂತ, ಎಚ್‌ ಯು ಎಲ್‌, ಪವರ್‌ ಗ್ರಿಡ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಎಚ್‌ ಸಿ ಎಲ್‌, ಟಿಸಿಎಸ್‌, ಐಟಿಸಿ ಶೇರುಗಳು ಶೇ.3.79ರ ಏರಿಕೆಯನ್ನು ಕಂಡವು.

ಡಾಲರ್‌ ಎದುರು ರೂಪಾಯಿ ಇಂದು ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಂಡು 69.59 ರೂ.ಗೆ ಸರಿಯಿತು. ಬ್ರೆಂಟ್‌ ಕಚ್ಚಾತೈಲ ಶೇ.0.04ರ ಏರಿಕೆಯನ್ನು ಕಂಡು ಬ್ಯಾರಲ್‌ ಗೆ 67.50 ಡಾಲರ್‌ ನಲ್ಲಿ ಬಿಕರಿಯಾಗುತ್ತಿತ್ತು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು ಕಂಪೆನಿಗಳ 2,766 ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,793 ಶೇರುಗಳು ಮುನ್ನಡೆ ಸಾಧಿಸಿದವು; 785 ಶೇರುಗಳು ಹಿನ್ನಡೆಗೆ ಗುರಿಯಾದವು; 188 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ