ಜಾಗತಿಕ ಮಾರುಕಟ್ಟೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1800 ಅಂಕ ಕುಸಿತ
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮುಂಬಯಿ ಷೇರುಪೇಟೆ ಮೇಲೆ ಪ್ರಭಾವ ಬೀರಿತ್ತು.
Team Udayavani, Feb 26, 2021, 10:43 AM IST
ಮುಂಬಯಿ: ಸತತವಾಗಿ ಏರಿಳಿತ ಕಂಡಿದ್ದ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಶುಕ್ರವಾರ(ಫೆ.26, 2021)ದ ವಹಿವಾಟಿನಲ್ಲಿ ಬರೋಬ್ಬರಿ 1800 ಅಂಕ ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಜಾಗತಿಕ ಷೇರು ಮಾರುಕಟ್ಟೆಯ ನಿರುತ್ಸಾಹದ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 1,800 ಅಂಕ ಕುಸಿದಿದ್ದು, 49, 419 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 502 ಅಂಕಗಳಷ್ಟು ಕುಸಿತ ಕಂಡಿದ್ದು, 14,595ಕ್ಕೆ ಕುಸಿದಿದೆ.
ಷೇರು ಸೂಚ್ಯಂಕ ಕುಸಿತದ ಪರಿಣಾಮ ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ , ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟೆಕ್ ಮಹೀಂದ್ರ ಷೇರುಗಳು ನಷ್ಟ ಅನುಭವಿಸಿದೆ.
ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 28,739.17 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿರುವುದು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮುಂಬಯಿ ಷೇರುಪೇಟೆ ಮೇಲೆ ಪ್ರಭಾವ ಬೀರಿತ್ತು. ಗುರುವಾರ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ವಹಿವಿಸ್ದ ಕಾರಣ ಸೆನ್ಸೆಕ್ಸ್ 257.62 ಅಂಕಗಳ ಏರಿಕೆ ದಾಖಲಿಸಿ 51,039.31ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಅದೇ ರೀತಿ ನಿಫ್ಟಿ 115.35 ಅಂಕಗಳಷ್ಟು ಹೆಚ್ಚಳವಾಗಿ 15,097.35ರಲ್ಲಿ ಕೊನೆಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಂಕ್ ಆನ್ ಲೈನ್ ವಂಚನೆಗೆ ಬ್ರೇಕ್ ಹಾಕಲು ದೆಹಲಿ ಪೊಲೀಸರ ಹೊಸ ಕ್ರಮ..! ಇಲ್ಲಿದೆ ಮಾಹಿತಿ.
ಇನ್ಮುಂದೆ ಜೋಮ್ಯಾಟೋ ಪಬ್ಲಿಕ್ ಲಿಮಿಟೆಡ್ ಕಂಪೆನಿ..!?
ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 450 ಅಂಕ ಕುಸಿತ, 14,400ಕ್ಕೆ ಕುಸಿದ ನಿಫ್ಟಿ
2020-21ರ ಆರ್ಥಿಕ ವರ್ಷದಲ್ಲಿ ನಿವ್ವಳ ಪರೋಕ್ಷ ತೆರಿಗೆಯಲ್ಲಿ ಶೇ. 12.3 ರಷ್ಟು ಏರಿಕೆ
2020-21ರ ಆರ್ಥಿಕ ವರ್ಷದ ಅತಿ ಹೆಚ್ಚು ಕಾರುಗಳ ಮಾರಾಟ : ಮಾರುತಿ ಸುಜುಕಿ ಮೇಲುಗೈ