ಇನ್ಮುಂದೆ ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಗೆ ಆಧಾರ್ ಕಡ್ಡಾಯ!
Team Udayavani, Mar 2, 2017, 6:46 PM IST
ನವದೆಹಲಿ: ಟಿಕೆಟ್ ಅನ್ನು ಬ್ಲಾಕ್ ಮಾಡಿ ಇಟ್ಟುಕೊಳ್ಳುವ ದಳ್ಳಾಳಿಗಳಿಗೆ ಕಡಿವಾಣ ಹಾಕಲು ಹಾಗೂ ಮೋಸ ಬುಕ್ಕಿಂಗ್ ಗೆ ಇತಿಶ್ರೀ ಹಾಡುವ ನೆಲೆಯಲ್ಲಿ ಇನ್ಮುಂದೆ ಆನ್ ಲೈನ್ ನಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಲು ಕೂಡಾ ಆಧಾರ್ ಕಡ್ಡಾಯ ಮಾಡಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ.
ರೈಲ್ವೆ ಇಲಾಖೆ ಆಧಾರ್ ಆಧಾರಿತ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತರುವ ಮೂಲಕ ದಳ್ಳಾಳಿಗಳು ಬಲ್ಕ್(ಭಾರೀ ಪ್ರಮಾಣದ) ಟಿಕೆಟ್ ಬುಕ್ಕಿಂಗ್ ಮಾಡೋದನ್ನು ಮತ್ತು ಮೋಸದ ಟಿಕೆಟ್ ಬುಕ್ಕಿಂಗ್ ಗೆ ಕಡಿವಾಣ ಹಾಕುವ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ.
ಪಿಟಿಐ ವರದಿ ಪ್ರಕಾರ, ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಆಪ್ ಅನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಅದೇ ರೀತಿ ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಒಂದು ಬಾರಿಯ ರಿಜಿಸ್ಟ್ರೇಷನ್ ಗೆ ಆಧಾರ್ ನಂಬರ್ ಬೇಕಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಹಿರಿಯ ನಾಗರಿಕರ ರೈಲ್ವೆ ಟಿಕೆಟ್ ರಿಯಾಯ್ತಿಗೆ ಭಾರತೀಯ ರೈಲ್ವೆ ಆಧಾರ್ ನಂಬರ್ ಅನ್ನು ಕಡ್ಡಾಯ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
Tesla; ಭಾರತದಲ್ಲಿ ಎಲಾನ್ ಮಸ್ಕ್ 25,000 ಕೋಟಿ ಹೂಡಿಕೆ?