Stock Market: ಆರ್ಥಿಕ ಹಿಂಜರಿತದ ಕಳವಳ- ಬಾಂಬೆ ಷೇರುಪೇಟೆ, ಜಪಾನ್ ನಿಕ್ಕಿ ತಲ್ಲಣ
Team Udayavani, Aug 5, 2024, 6:22 PM IST
ಮುಂಬೈ: ಅಮೆರಿಕದ ಆರ್ಥಿಕ ಸ್ಥಿತಿಯ ಕಳವಳ ಹಾಗೂ ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಬಾಂಬೆ ಷೇರುಪೇಟೆ (Bombay Stock Exchange) ವಹಿವಾಟಿನ ಮೇಲೂ ಬೀರಿದ್ದು, ಬರೋಬ್ಬರಿ 2,222.55 ಅಂಕಗಳ ಭಾರೀ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಇದರಿಂದಾಗಿ ಹೂಡಿಕೆದಾರರು 18 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,222.55 ಅಂಕ ಕುಸಿತ ಕಂಡಿದ್ದು, 78,759.40 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 662.10 ಅಂಕ ಇಳಿಕೆಯಾಗಿದ್ದು, 24,055.60 ಅಂಕಗಳಲ್ಲಿ ಕೊನೆಗೊಂಡಿದೆ.
ಸಂವೇದಿ ಸೂಚ್ಯಂಕ ಕುಸಿತದಿಂದ ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಓಎನ್ ಜಿಸಿ, ಹಿಂಡಲ್ಕೋ, ಟಾಟಾ ಸ್ಟೀಲ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎಚ್ ಯುಎಲ್, ನೆಸ್ಲೆ, ಟಾಟಾ ಕನ್ಸೂಮರ್, ಎಚ್ ಡಿಎಫ್ ಸಿ ಲೈಫ್ ಷೇರು ಲಾಭಗಳಿಸಿದೆ.
ಆಟೋ, ಮೆಟಲ್, ಕ್ಯಾಪಿಟಲ್ ಗೂಡ್ಸ್, ಆಯಿಲ್ & ಗ್ಯಾಸ್, ಪವರ್, ಮೀಡಿಯಾ ಕ್ಷೇತ್ರಗಳ ಷೇರುಗಳು ನಷ್ಟ ಕಂಡಿವೆ. ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದಿದೆ.
ಜಪಾನ್ ಷೇರುಪೇಟೆ ಸೆನ್ಸೆಕ್ಸ್ ಭಾರೀ ಕುಸಿತ
ಅಮೆರಿಕದ ಆರ್ಥಿಕ ಹಿಂಜರಿತದ ಭೀತಿಯಿಂದ ಜಪಾನ್ ನ ಷೇರುಪೇಟೆ ಸೂಚ್ಯಂಕ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1987ರ ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ಷೇರು ಸೂಚ್ಯಂಕ ದೊಡ್ಡ ಪ್ರಮಾಣದಲ್ಲಿ ಪತನಗೊಂಡಿದೆ.
ಜಪಾನ್ ಷೇರು ಸೂಚ್ಯಂಕ ನಿಕ್ಕಿ 3,595.30 ಅಂಕ ಕುಸಿದಿದ್ದು, 32,314.40 ಅಂಕಗಳಲ್ಲಿ ವಹಿವಾಟು ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
The Big Billion Days 2024 ಗೆ ಫ್ಲಿಪ್ ಕಾರ್ಟ್ ಸಜ್ಜು: ಪೂರೈಕೆ ಜಾಲದ ವಿಸ್ತರಣೆ
Tata Curvv:ಟಾಟಾ ಕರ್ವ್ ಪೆಟ್ರೋಲ್, ಡೀಸೆಲ್ SUV ಮಾರುಕಟ್ಟೆಗೆ-ಆರಂಭಿಕ ಬೆಲೆ 9.99 ಲಕ್ಷ
August 1.75 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: 10% ಹೆಚ್ಚಳ
GDP;ಕಡಿಮೆ ಸರಕಾರಿ ವೆಚ್ಚದಿಂದಾಗಿ ಬೆಳವಣಿಗೆ ನಿಧಾನವಾಗಿದೆ: ಶಕ್ತಿಕಾಂತ ದಾಸ್
GDP; ಭಾರತದ ಜಿಡಿಪಿ 15 ತಿಂಗಳ ಕನಿಷ್ಠ ಮಟ್ಟಕ್ಕೆ: 6.7% ದಾಖಲು
MUST WATCH
ಹೊಸ ಸೇರ್ಪಡೆ
Mangaluru: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ
Rain: ನೆಲ್ಯಾಡಿಯಲ್ಲಿ ಭಾರೀ ಗಾಳಿ, ಮಳೆ: 4 ಮನೆಗಳು, 2 ವಿದ್ಯುತ್ ಕಂಬಗಳಿಗೆ ಹಾನಿ
Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ
Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು
Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.